Homeರಾಷ್ಟ್ರೀಯಕಾರಿನಲ್ಲಿ ಬೆಂಕಿ : ಅಚ್ಚರಿ ರೀತಿಯಲ್ಲಿ ವೈದ್ಯ ದಂಪತಿ ಪಾರು

ಕಾರಿನಲ್ಲಿ ಬೆಂಕಿ : ಅಚ್ಚರಿ ರೀತಿಯಲ್ಲಿ ವೈದ್ಯ ದಂಪತಿ ಪಾರು

Car catches fire: Doctor couple miraculously escapes

ಬೀಡ್‌, ಫೆ.15- ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ವೈದ್ಯ ದಂಪತಿ ಅಚ್ಚರಿ ರೀತಿಯಲ್ಲಿ ಪಾರಾಗಿರುವ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದಿದೆ. ಬೀಡ್‌ ತಹಸಿಲ್‌ನ ಮಂಜರ್‌ಸುಂಬಾ-ಪಟೋಡಾ ರಸ್ತೆಯಲ್ಲಿರುವ ಮಹಾಜನ್‌ವಾಡಿ ಕ್ರಾಸ್‌‍ರೋಡ್‌ ಬಳಿ ಬೆಳಿಗ್ಗೆ 6.15ರ ಸುಮಾರಿಗೆ ದಂಪತಿಗಳು ತಮ ಫಾರಂಹೌಸ್‌‍ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಕಾರಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಅಪಾಯವನ್ನು ಅರಿತ ಇಬ್ಬರೂ ತಕ್ಷಣ ವಾಹನ ನಿಲ್ಲಿಸಿ ಹೊರಗೆ ಬಂದರು.ಕೆಲವೇ ಕ್ಷಣಗಳಲ್ಲಿ, ಕಾರು ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಯಾವುದೇ ಗಾಯಗಳಾಗಿಲ್ಲ ಆದರೆ ವಾಹನ ಹಾನಿಗೊಳಗಾಗಿದೆ. ಈ ಘಟನೆಯು ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಗೊಂದಲವನ್ನುಂಟುಮಾಡಿತು.

ಪ್ರಾಥಮಿಕ ವರದಿ ಪ್ರಕಾರ, ವಾಹನದ ವೈರಿಂಗ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಕೆಲವು ಸ್ಥಳೀಯರು ಮತ್ತು ಮಹಾಜನ್‌ವಾಡಿ ಸರಪಂಚರು ಬೆಂಕಿಯನ್ನು ನಂದಿಸುವಲ್ಲಿ ಸಹಾಯ ಮಾಡಿದರು.

ಕೂಡಲೇ ಎಚ್ಚೆತ್ತು ಕೊಂಡಿದ್ದರಿಂದ ಪ್ರಾಣ ಉಳಿಯಿತು ಎಂದು ವೈದ್ಯ ದಂಪತಿ ಹೇಳಿದ್ದಾರೆ.
ಕಾರು ಬೆಂಕಿ ಹೊತ್ತಿಕೊಂಡಾಗ ತಮ ರಕ್ಷಣೆಗೆ ಬಂದ ಸಾರ್ವಜನಿಕರಿಗೂ ಕೂಡ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

Latest News