ಕೊಲಂಬೊ,ಫೆ.16- ಪಾಕಿಸ್ತಾನದ ವಿರುದ್ಧದ ಚುಟುಕು ವಿಶ್ವಕಪ್ನಲ್ಲಿ ಭಾರತ ಗೆದ್ದಿರುವುದು ಭಾರತೀಯರಿಗೆ ಎಷ್ಟು ಖುಷಿಯಾಯ್ಗೋ ಗೊತ್ತಿಲ್ಲ. ಆದರೆ, ಬಲೂಚಿಸ್ತಾನದಲ್ಲದಂತೂ ಟೀಂ ಇಂಡಿಯಾದ ಗೆಲುವನ್ನು ಹಬ್ಬದಂತೆ ಆಚರಿಸಲಾಗಿದೆ.
ಹೌದು ಭಾರತ ಮತ್ತು ಪಾಕ್ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಫ್ ಫೈಟ್ ಇರುತ್ತದೆ ಎಂದೇ ಎಲ್ಲರೂ ಭಾವಿಸಿದ್ದರೂ ಆದರೆ, ಪಾಕ್ ಹೀನಾಯವಾಗಿ ಸೋಲು ಕಾಣುತ್ತಿದ್ದಂತೆ ದೇಶದೆಲ್ಲೇಡೆ ಸಂಭ್ರಮ ಮನೆ ಮಾಡಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 114 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲುವುದು ಗ್ಯಾರಂಟಿ ಎಂದು ಭಾವಿಸಿದ್ದ ಭಾರತೀಯರ ಸಂಭ್ರಮಾಚರಣೆ ಮಾಮೂಲಾಗಿತ್ತು. ಆದರೆ, ಭಾರತದ ಈ ಗೆಲುವು ಗಡಿಯಾಚೆಗಿನ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿತ್ತು.
ಭಾರತದ ಗೆಲ್ಲುವನ್ನು ಬಲೂಚಿಗಳು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭಾರತದ ಪ್ರತಿಯೊಂದು ವಿಕೆಟ್ ಪತನ ಮತ್ತು ಬೌಂಡರಿಗಳಿಗೆ ಅಲ್ಲಿನ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಕೇವಲ ಆಟವಲ್ಲ, ನಮ್ಮ ಭಾವನೆಗಳ ಪ್ರತಿಬಿಂಬ ಎಂಬಂತೆ ಬಲೂಚ್ ಯುವಕರು ಭಾರತದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋಗಳು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
