Homeರಾಷ್ಟ್ರೀಯಮಣಿಪುರದಲ್ಲಿ ಇಬ್ಬರು ಮಹಿಳಾ ಉಗ್ರರ ಬಂಧನ

ಮಣಿಪುರದಲ್ಲಿ ಇಬ್ಬರು ಮಹಿಳಾ ಉಗ್ರರ ಬಂಧನ

Two female terrorists arrested in Manipur

ಇಂಫಾಲ, ಫೆಬ್ರವರಿ 16 (ಪಿಟಿಐ) ಮಣಿಪುರದಲ್ಲಿ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಇಬ್ಬರು ಮಹಿಳಾ ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ ಪಶ್ಚಿಮ ಮತ್ತು ಪೂರ್ವ ಜಿಲ್ಲೆಗಳಲ್ಲಿ ಈ ಬಂಧನಗಳನ್ನು ಮಾಡಲಾಗಿದೆ ಎಂದು ಪೊಲೀಸ್‌‍ ಹೇಳಿಕೆ ತಿಳಿಸಿದೆ. ಯುನೈಟೆಡ್‌ ನ್ಯಾಷನಲ್‌ ಲಿಬರೇಶನ್‌ ಫ್ರಂಟ್‌ (ಕೊಯಿರೆಂಗ್‌‍) ಸಂಘಟನೆಯ ದಂಗೆಕೋರಳಾದ ಇಪ್ಪತ್ತೊಂಬತ್ತು ವರ್ಷದ ಸನಸಮ್‌ ಒಂಗ್ಬಿ ಶಾಂತಿಕುಮಾರಿ ದೇವಿಯನ್ನು ಇಂಫಾಲ ಪೂರ್ವ ಜಿಲ್ಲೆಯ ನಾಂಗ್ಪೋಕ್‌ ಇಂಗ್ಖೋಲ್‌ ಪ್ರದೇಶದಿಂದ ಬಂಧಿಸಲಾಗಿದೆ.

ಕಾಂಗ್ಲೈಪಾಕ್‌ ಕಮ್ಯುನಿಸ್ಟ್‌ ಪಾರ್ಟಿ (ಅಪುನ್ಬಾ) ಸಂಘಟನೆಯ ಮುತುಮ್‌ ಜೋಶಿಕಾ ಚಾನು (19) ಎಂದು ಗುರುತಿಸಲಾದ ಮತ್ತೊಬ್ಬ ಮಹಿಳಾ ಉಗ್ರಗಾಮಿಯನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಲ್ಯಾಮ್ಡೆಂಗ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಅದು ತಿಳಿಸಿದೆ.

RELATED ARTICLES
spot_img

Latest News