ಬೆಂಗಳೂರು,ಫೆ.17- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ವೈಖರಿ ನೋಡಿ ಜನ ಛೀ… ಥೂ.. ಎನ್ನುತ್ತಿದ್ದಾರೆ. ಇಂಥ ಆಡಳಿತ ಕೊಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ.ಯಿಂದ ಬಂಧಿತನಾಗಿ ಅಮಾನತುಗೊಂಡು ಜೈಲಿನಲ್ಲಿರುವ ಆರೋಪಿಗೆ ಮುಂಬಡ್ತಿ ನೀಡಲು ಲಂಚ ಕೊಟ್ಟಿದ್ದಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ ಎಂದು ಪ್ರಶ್ನಿಸಿದರು.
ನಟೇಶ್‌ಗೆ ಪ್ರಮೋಷನ್ ಕೊಡಲು ಲಂಚ ಕೊಟ್ಟಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಆತ ಅತ್ಯಂತ ಭ್ರಷ್ಟ ಅಧಿಕಾರಿ. ಅಂಥವನನ್ನು ರಕ್ಷಣೆ ಮಾಡುವ ಕೆಲಸ ಇದೇ ಸಿದ್ದರಾಮಯ್ಯನವರಿಂದ ನಡೆಯಿತು. ಇದು ಅವರ ಆಡಳಿತ ವೈಖರಿ ಎಂದು ವ್ಯಂಗ್ಯವಾಡಿದರು.
ಇಂಥ ಭ್ರಷ್ಟನನ್ನು ಕಾಂಗ್ರೆಸ್ ಸರ್ಕಾರ ಬಂಧಿಸಲಿಲ್ಲ. ಆತನ ಬಂಧನವಾದರೆ ನನ್ನ ಬುಡಕ್ಕೆ ಬರಬಹುದೆಂದು ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ರಕ್ಷಣೆ ಮಾಡಿದರು. ಮೈಸೂರನ್ನು ಸಂಪೂರ್ಣವಾಗಿ ಹಾಳು ಮಾಡಿದ್ದೀಯಾ, ತನಿಖೆ ನಡೆಯುತ್ತಿದ್ದರೂ ಒಬ್ಬ ಅಧಿಕಾರಿಗೆ ಮುಂಬಡ್ತಿ ನೀಡಿರುವ ನಿದರ್ಶನ ದೇಶದಲ್ಲಿ ಎಲ್ಲಿಯಾದರೂ ಇದೆಯೇ ಎಂದು ಪ್ರಶ್ನಿಸಿದರು.
ನಟೇಶ್ ಒಬ್ಬ ಮೋಸ್ಟ್ ಕರಪ್ಟ್ , ಹೀಸ್ ಬಾಸ್ಟೆಡ್ ಎಂದು ಆಕ್ರೋಶ ವ್ಯಕ್ತಪಡಿಸಿದ ವಿಶ್ವನಾಥ್, ಕಳ್ಳ ಸೈಟ್ ಕದ್ದಿದ್ದೀಯಾ? ಮುಡಾ ಹಾಳು ಮಾಡಿದ್ದೀಯಾ ಎಂದು ಪ್ರಮೋಷನ್ ಕೊಟ್ಟಿರಬಹುದು. ಥೂ… ಥೂ… ಅವರ ಆಡಳಿತ ನೋಡಿದರೆ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇದು ನಿನ್ನ ಆಡಳಿತ ವೈಖರಿಯೇ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಶಾಸಕರಿಂದ ವಿದೇಶಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ರಾಜಕಾರಣಿ ಅಧೋಗತಿಗೆ ಹೋಗಿದೆ. ಇವರ ಆಡಳಿತ ನೋಡಿ ಜನ ನಗುತ್ತಿದ್ದಾರೆ. ಶಾಸಕರು ವಿದೇಶಿ ಪ್ರವಾಸಕ್ಕೆ ಯಾಕೆ ಹೋಗುತ್ತಾರೆಂದು ತಿಳಿದುಕೊಳ್ಳದಷ್ಡು ಜನರೇನು ದಡ್ಡರಲ್ಲ. ಕರ್ನಾಟದಲ್ಲಿ 90% ಸಾಕ್ಷರತೆ ಇದೆ. ಜನರಿಗೆ ನೀವು ಏನ್ ಮಾಡುತ್ತೀರಾ ಅರ್ಥ ಆಗುತ್ತದೆ. ಜನರನ್ನ ಸಿದ್ದರಾಮಯ್ಯ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.
ಏನೇ ಇದ್ದರು ನೇರವಾಗಿ ಹೇಳಿ. ಕುರ್ಚಿ ಉಳಿಸಿಕೊಳ್ಳಲು ಈ ಸರ್ಕಸ್ ಬೇಕಾ? ಇದರಿಂದ ಜನರಿಗೆ ಏನ್ ಪ್ರಯೋಜನಾ?, 2.5 ವರ್ಷದಿಂದ ಹೀಗೆ ಹೋಗುತ್ತಾ ಇದೆ. ಕರ್ನಾಟಕದಲ್ಲಿ ಆಡಳಿತವೂ ಇಲ್ಲ, ಅಭಿವೃದ್ಧಿ ಇಲ್ಲ. ಬರೀ ಕಿರಿಚಾಟ, ಎರೆಚಾಟ ನಡೆಯುತ್ತಿದೆ ಎಂದು ದೂರು ನೀಡಿದರು.
ಸಿದ್ದತಾಮಯ್ಯ ಅವರೇ ಈ ನಾಟಕ ನಿಲ್ಲಿಸಿ. ಗಂಭೀರವಾಗಿ ಜನರ ಕೆಲಸ ಮಾಡಿ. ಜನ ಓಟ್ ಕೊಟ್ಟಿರುವುದು ವಿದೇಶಕ್ಕೆ ಹೋಗೋಕೆ ಅಲ್ಲ. ಒಬ್ಬರಿಗೊಬ್ಬರು ಕಿತ್ತಾಡಲು, ಬೈದಾಡಲು ಅಧಿಕಾರ ಕೊಟ್ಟಿಲ್ಲ. ಜನರ ಕೆಲಸ , ನಾಡಿನ ಅಭಿವೃದ್ಧಿ ಕೊಟ್ಟಿರೋ ವೋಟ್ ಇಂದು ಅ ಓಟ್ ಸಿದ್ದರಾಮಯ್ಯ ನಾಯಕತ್ವದಲ್ಲಿ ಮಿಸ್ ಯೂಸ್ ಆಗುತ್ತಿದೆ. ಇದು ಸರಿಯಲ್ಲ ಎಂದರು.
