ಭೋಪಾಲ್, ಫೆ.17- ಮದುವೆಗೆ ಒಲ್ಲೆ ಎಂದ ಗೆಳತಿಯ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಆಕೆಯ ಆತದ ವಶೀಕರಣಕ್ಕೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪ್ರೇಯಸಿಯನ್ನು ಕೊಲೆ ಮಾಡಿ ಆತದ ವಶೀಕರಣಕ್ಕೆ ಯತ್ನಿಸರುವ ಆರೋಪಿಯನ್ನು ಪಿಯೂಷ್ ಧಮ್ನೋಡಿಯಾ ಎಂದು ಗುರುತಿಸಲಾಗಿದೆ. ಇಂದೋರ್‌ನ ದ್ವಾರಕಪುರಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ತನ್ನೊಂದಿಗೆ ಸಂಬಂಧದಲ್ಲಿದ್ದ 24 ವರ್ಷದ ಗೆಳತಿಯನ್ನು ಪಿಯೂಷ್ ಕತ್ತು ಹಿಸುಕಿ ಹತ್ಯೆ ಮಾಡಿ, ಶವದ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಗಲಾಟೆ ತಾರಕಕ್ಕೇರಿದ ಬಳಿಕ ಹತ್ಯೆ ನಡೆದಿದೆ. ಬಳಿಕ ಅಲ್ಲಿಂದ ಮಹಾರಾಷ್ಟ್ರದ ಪನ್ವೇಲ್‌ಗೆ ಆರೋಪಿ ಪ್ರಯಾಣಿಸಿದ್ದ.ಖಾಸಗಿ ಹೋಟೆಲ್‌ನಲ್ಲಿ ಯುವತಿ ಆತ್ಮ ವಶೀಕರಣಕ್ಕೆ ಮಾಟ ಮಂತ್ರ ಮಾಡಿದ್ದ. ಆತ್ಮದ ಜೊತೆಗೆ ಮಾತುಕತೆ ನಡೆಸಲು ಆರೋಪಿ ಯತ್ನಿಸಿದ್ದ.ಯುವತಿ ನಾಪತ್ತೆಯಾದ ಬಳಿಕ ಫೆ.11 ರಂದು ಯುವತಿ ತಂದೆಯಿಂದ ದೂರು ದಾಖಲಾಗಿತ್ತು.
ಫೆ.13 ರಂದು ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರು ಯುವತಿ ಮೃತದೇಹ ಪತ್ತೆಹಚ್ಚಿದ್ದಾರೆ. ಬಳಿಕ ಆರೋಪಿ ಪಿಯೂಷ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.ಇಬ್ಬರೂ ಎಂಬಿಎ ಓದುತ್ತಿದ್ದರು.
ಮದುವೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕುಟುಂಬಸ್ಥರ ಒಪ್ಪಿಗೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದ ಹಿನ್ನೆಲೆ ಮದುವೆಗೆ ಯುವತಿ ನಿರಾಕರಿಸಿದ್ದಳು. ಈ ಬಗ್ಗೆ ಮಾತುಕತೆಗೆ ಬಂದಾಗ ಜಗಳ ಏರ್ಪಟ್ಟು ಹತ್ಯೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.
