ಬೆಂಗಳೂರು,ಫೆ.18 – ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಂಗ್ರೆಸ್ ಕಚೇರಿಗಳಿಗೆ ಸರ್ಕಾರ ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಕೂಡಲೇ ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಕಾನೂನು ಬಾಹಿರವಾಗಿ ಸಿ.ಎ ನಿವೇಶನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.
ಪ್ರತಿ ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ಸಿ.ಎ ನಿವೇಶನವನ್ನು ಪಡೆದುಕೊಂಡಿದ್ದಾರೆ. ಉದಾಹರಣೆಗೆ ಚಿಕ್ಕಬಳ್ಳಾಪುರದಲ್ಲಿ 22 ಲಕ್ಷ, ಬಾದಾಮಿಯಲ್ಲಿ 1.22 ಲಕ್ಷ, ಚನ್ನರಾಯಪಟ್ಟಣದಲ್ಲೂ ಪಡೆದಿದ್ದಾರೆ. ಇದು ಸಂಪೂರ್ಣವಾಗಿ ನಿಯಮಗಳ ಉಲ್ಲಂಘನೆ ಎಂದು ದೂರಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರಾಜ್ಯ ಸರ್ಕಾರ ಬಡವರಿಗೆ ಮನೆ ಭೂಮಿ ಕೊಡದೆ ತಾನೇ ಭೂಮಿ ಕಬಳಿಸುತ್ತಿದೆ. ತುಮಕೂರು, ಚಾಮರಾಜನಾಗರ, ಉಡುಪಿ, ದ.ಕನ್ನಡ ಸೇರಿದಂತೆ ಎಲ್ಲ ಕಡೆ ಪಾರ್ಟಿ ಕಚೇರಿಗೆ ಸಿಎ ಸೈಟ್ ಪಡೆದಿದ್ದಾರೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಬೆಲೆಬಾಳುವ ಸೈಟ್ ಪಡೆದಿದ್ದಾರೆ. ಎಸ್ ಆರ್ ವ್ಯಾಲ್ಯುನ ಕೇವಲ 5% ಮಾತ್ರ ನೀಡಿ ಸಿಎ ಸೈಟ್ ಕಬಳಿಕೆ, ಕಾಂಗ್ರೆಸ್ ಪಕ್ಷದ ಕಚೇರಿಗಾಗಿ ಸಿಎ ಸೈಟ್ ಪಡೆಯಲು ನಿಯಮದಲ್ಲಿ ಅವಕಾಶವಿಲ್ಲ. ಸೈಟ್ ನೀಡಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದಿದ್ದಾರೆ. ಹೀಗೆ ಒಟ್ಟಾರೆ 31 ಕಡೆ ಭೂ ಒತ್ತುವರಿ ಮಾಡಲಾಗಿದೆ. 40 ಕೋಟಿ ಬೆಲೆ ಬಾಳುವ ಆಸ್ತಿತನ್ನ ಎರಡು ಕೋಟಿಗೆ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾನೂನು ಇಲಾಖೆ ಇವುಗಳ ಬಗ್ಗೆ ಕ್ರಮ ವಹಿಸಬೇಕು. ಭೂ ಒತ್ತುವರಿಯ ಬಗ್ಗೆ ತನಿಖೆ ಆಗಬೇಕು, ಶೀಘ್ರವೇ ನೀವು ಈ ಲ್ಯಾಂಡ್ ಗಳನ್ನ ವಾಪಾಸ್ ಮಾಡಿ . ಇಲ್ಲದಿದ್ದರೆ ಮೂಡಾ ದಂತೆ ಇಲ್ಲೂ ಸಂಕಷ್ಟ ಅನುಭವಿಸಿ ಆಮೇಲೆ ಹಿಂದಿರುಗಿಸುವಂತೆ ಮಾಡಿಕೊಳ್ಳಬೇಡಿ. ಸಿಎಂ ಸಿದ್ದರಾಮಯ್ಯ ಅವರೇ ಈ ಲೋಪ ಸರಿ ಮಾಡಿಕೊಳ್ಳಿ. ಇಲ್ಲದಿದ್ದರೆ ಈ ಬಗ್ಗೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಒಳ ಮೀಸಲು ವಿಚಾರದ ಗೊಂದಲ ಖಿ5 ಸುದ್ದಿ ಕುರಿತು ಬೆಳಕು ಚೆಲ್ಲಿದ ಛಲವಾದಿ ನಾರಾಯಣಸ್ವಾಮಿ.ಒಳ ಮೀಸಲು ಹಂಚಿಕೆ ವಿಚಾರದಲ್ಲಿ ಬಹಳ ಅನ್ಯಾಯವಾಗುತ್ತದೆ. ಬೆಳಗಾವಿ ಅಧಿವೇಶನದ ವೇಳೆ ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದು ವಿರೋಧ ಪಕ್ಷ, ಧಾರವಾಡ ಯೂನಿವರ್ಸಿಟಿ ನೇಮಕಾತಿಯಲ್ಲಿನ ದಾಖಲೆಗಳನ್ನ ಉಲ್ಲೇಖ ಮಾಡಿದೆ.
ಒಳ ಮೀಸಲಾತಿ ಹಂಚಿಕೆ ಅವಾಸ್ತವಿಕವಾಗಿದೆ. ಸರ್ಕಾರ ದಲಿತರಿಗೆ ಅನ್ಯಾಯ ಮಾಡ ಹೊರಟಿದೆ. ಒಂದೇ ಜಾತಿಗೆ ಎಲ್ಲವನ್ನೂ ಸೀಮಿತ ಮಾಡಲು ಹೊರಟಿದ್ದಾರೆ.ಕಾನೂನು ಬಾಹಿರವಾಗಿ ಸರ್ಕಾರ ಮೀಸಲಾತಿ ನೀಡಲು ಹೊರಟಿದೆ. ಇದು ಸರಿಯಲ್ಲ. ಮೊದಲು ಇದನ್ನ ಸರಿ ಮಾಡಿ. ಇಲ್ಲದಿದ್ದರೆ ಹೋರಾಟ ಎದುರಿಸಲು ಸಿದ್ಧರಾಗಿ ಎಂದು ಛಲವಾದಿ ನಾರಾಯಣಸ್ವಾಮಿ ಮುನ್ನೆಚ್ಚರಿಕೆ ನೀಡಿದ್ದಾರೆ.
