Sunday, April 19, 2026
Homeರಾಜ್ಯಪತ್ರಿಕಾ ವೃತ್ತಿಯ ಘನತೆ ಹೆಚ್ಚಿಸಿದ ಪಿ.ರಾಮಯ್ಯ ಸೇವೆ ಅವಿಸ್ಮರಣೀಯ

ಪತ್ರಿಕಾ ವೃತ್ತಿಯ ಘನತೆ ಹೆಚ್ಚಿಸಿದ ಪಿ.ರಾಮಯ್ಯ ಸೇವೆ ಅವಿಸ್ಮರಣೀಯ

P Ramaiah's service, which enhanced the dignity of the journalism

ಬೆಂಗಳೂರು,ಫೆ.18- ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಕರಾಗಿದ್ದ ಆದರ್ಶ ಪತ್ರಕರ್ತರೆನಿಸಿಕೊಂಡಿದ್ದ ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಮೂರು ತಲೆಮಾರನ್ನು ಮುಟ್ಟುವ ಶುದ್ಧ ಬದುಕನ್ನು ನಡೆಸಿದವರು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೇಳಿದರು.

ಗಾಂಧಿಭವನದಲ್ಲಿ ಬೆಂಗಳೂರು ವರದಿಗಾರರ ಕೂಟ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌‍ಕ್ಲಬ್‌, ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಶ್ರದ್ಧಾಂಜಲಿ ಸಭೆ ಹಾಗೂ ನಾನು ಹಿಂದೂ ರಾಮಯ್ಯ ಕೃತಿಯ ಎರಡನೇ ಮುದ್ರಣದ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಪಿ.ರಾಮಯ್ಯ ಅವರು ಅತ್ಯಂತ ಸರಳ ಜೀವಿ. ಮಾಧ್ಯಮ ಕ್ಷೇತ್ರಕ್ಕೆ ಮಾರ್ಗದರ್ಶಕರಷ್ಟೇ ಅಲ್ಲದೆ, ಸಮಾಜಕ್ಕೂ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಾಧ್ಯಮ ಸಲಹೆಗಾರರಂತಹ ಪ್ರಮುಖ ಹುದ್ದೆ ಅರಸಿ ಬಂದರೂ ಅದನ್ನು ಸುತಾರಾಂ ಒಪ್ಪದ ಪಿ.ರಾಮಯ್ಯ, ಪತ್ರಕರ್ತರಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡರು. ಖುದ್ದು ಹಿಂದೂ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು ಹೇಳಿದರೂ ದೆಹಲಿಗೆ ಹೋಗಲು ಇಷ್ಟಪಡಲಿಲ್ಲ. ಪತ್ರಿಕಾ ವೃತ್ತಿಯನ್ನು ಕೇವಲ ಒಂದು ವೃತ್ತಿಯನ್ನಾಗಿ ಪರಿಗಣಿಸದೇ ಸಮಾಜದ ಬದಲಾವಣೆಗಳಿಗಿರುವ ಅಸ್ತ್ರ ಎಂದುಕೊಂಡು ಬದುಕಿದರು. ಅಷ್ಟೇ ಅಲ್ಲದೆ ಇದೇ ರೀತಿ ಎಲ್ಲರೂ ಬದುಕಬೇಕೆಂಬ ಆದರ್ಶಗಳನ್ನು ಬಿಟ್ಟುಹೋಗಿದ್ದಾರೆ.

ಆದಿಚುಂಚನಗಿರಿ ಶ್ರೀಮಠಕ್ಕೂ, ಪಿ.ರಾಮಯ್ಯ ಅವರಿಗೂ ಅವಿನಾಭಾವ ಸಂಬಂಧ ವಿತ್ತು. ಶ್ರೀಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು. ಆದಿಚುಂಚನಗಿರಿ ಮಠದ ಕಷ್ಟದ ಕಾಲದಲ್ಲೂ ಅವರು ಜೊತೆಗಿದ್ದು, ಮಠದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಆರಂಭದ ದಿನಗಳಲ್ಲಿ ಶ್ರೀಮಠದ ಪೀಠಾಧ್ಯಕ್ಷರಾಗಿದ್ದ ಪದಭೂಷಣ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಹೊ.ಶ್ರೀನಿವಾಸಯ್ಯ ಮತ್ತು ರಾಮಯ್ಯ ಭಕ್ತರ ಮನೆಗೆ ಕರೆದುಕೊಂಡು ಹೋಗಿ ಮಠದ ಅಭಿವೃದ್ಧಿಗೆ ಕಾಣಿಕೆ ಸಂಗ್ರಹಿಸಿದ್ದರು. ಗುರೂಜಿ ಅವರ ಜೊತೆ ಸದಾ ಇರುವ ಮೂಲಕ ಮಠದ ಬೆಳವಣಿಗೆಗೆ ರಾಮಯ್ಯ ಸೇವೆ ಸಲ್ಲಿಸಿದ್ದಾರೆ. ಅವರನ್ನು ಭಾವಪೂರ್ಣವಾಗಿ ಸರಿಸುತ್ತಿದ್ದೇವೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ರಾಮಯ್ಯನವರು ನಮ ಊರಿನವರು ಎಂದು ಹೇಳಿಕೊಳ್ಳಲು ನಮಗೆ ಹೆಮೆ. ನನಗೆ ಅವರೊಂದಿಗೆ ಪುತ್ರನ ರೀತಿ ಸಂಪರ್ಕವಿತ್ತು. ರಾಜಕೀಯ ಪತ್ರಿಕೋದ್ಯಮದ ಜೊತೆಜೊತೆಗೆ ನನ್ನಂತಹ ಹಲವು ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕ ಬದುಕಿನಲ್ಲೂ ಹಲವರಿಗೆ ಮಾರ್ಗದರ್ಶನ ಮಾಡುವ ಮೂಲಕ ಪಿ.ರಾಮಯ್ಯ ಮನೆಮಾತಾಗಿದ್ದಾರೆ ಎಂದರು.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್‌ ಮಾತನಾಡಿ, ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು.ಸಾರ್ವಜನಿಕ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ. ರಾಮಯ್ಯ ಅವರು ಪತ್ರಕರ್ತರಾಗಿ ಮಾಧ್ಯಮದ ಘನತೆ, ಮೌಲ್ಯ, ನೈತಿಕ ಶಕ್ತಿಯನ್ನು ಉಳಿಸಿ, ಬೆಳೆಸುವಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.

ತಾವು ಸಾರ್ಥಕವಾಗಿ ಬಾಳಿ ತಮೊಡನಿರುವ ವೃತ್ತಿಪರ ಘನತೆಯನ್ನು ಎತ್ತಿಹಿಡಿದು ಪತ್ರಕರ್ತರಾಗಿ ಅಷ್ಟೇ ಅಲ್ಲ ವ್ಯಕ್ತಿತ್ವದ ದೃಷ್ಟಿಯಿಂದಲೂ ಅನುಕರಣೀಯವಾಗಿದ್ದರು. ಸಾರ್ವಜನಿಕ ಜೀವನದ ಮೌಲ್ಯವನ್ನು ಉನ್ನತ ಮಟ್ಟದಲ್ಲಿ ಉಳಿಸುವ ಪ್ರಯತ್ನವನ್ನು ಮಾಡಿದವರಲ್ಲಿ ಪಿ.ರಾಮಯ್ಯ ಮಾದರಿ ಯಾಗಿದ್ದರು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಾಂಧಿ ಸಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ಅಗಾಧವಾದ ಜ್ಞಾಪಕಶಕ್ತಿ ಹೊಂದಿದ್ದ ಪಿ.ರಾಮಯ್ಯ ಅವರ ಮೆದುಳು ಗ್ರಂಥಭಂಡಾರವಾದಂತಿತ್ತು. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು ಹಲವು ಶಿಕ್ಷಣ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದರು. ಅವರ ಸರಳ ಭಾಷೆಯ ಬರವಣಿಗೆ ಲೇಖನಗಳು ಸಮಾಜದಲ್ಲಿ ಹಲವು ಬದಲಾವಣೆಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಅರಕೆರೆ ಜಯರಾಂ ಅವರು ಮಾತನಾಡಿ, ದಕ್ಷತೆ ಮತ್ತು ಪ್ರಾಮಾಣಿಕತೆ ಎಂದರೆ ರಾಮಯ್ಯ ಅವರು ತಮ ಸಹೋದ್ಯೋಗಿಗಳನ್ನು ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ ಮತ್ತು ಯಾವುದೇ ಅಹಂ ಇಲ್ಲದೇ ಎಲ್ಲರಿಗೂ ನೆರವಾಗುತ್ತಿದ್ದರು. ಅವರ ಕಾರ್ಯ ಅವಿಸರಣೀಯ ಮತ್ತು ನಮಗೆ ಅವರೊಂದಿಗೆ ಕೆಲಸ ಮಾಡುವುದೇ ಬಲು ಇಷ್ಟವಾಗಿತ್ತು ಎಂದು ಸರಿಸಿದರು.

ಯಾರಿಗೂ ಸಂದರ್ಶನ ನೀಡದ ಭಾರತ ರತ್ನ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಡಾ.ಸಿ.ವಿ.ರಾಮನ್‌ ಅವರನ್ನು ಸಂದರ್ಶನ ಮಾಡಿದ ಪ್ರಪ್ರಥಮ ಕರ್ನಾಟಕ ಪತ್ರಕರ್ತ ಎಂಬುದು ಹೆಮೆ ಪಡುವ ವಿಷಯ. ಅವರ ಮಾರ್ಗದರ್ಶನ ಇಂದಿನ ಪತ್ರಕರ್ತರಿಗೆ ಅವಶ್ಯಕ ಎಂದರು.

ವರದಿಗಾರರ ಕೂಟದ ಅಧ್ಯಕ್ಷ ಆರ್‌.ಟಿ.ವಿಠ್ಠಲ ಮೂರ್ತಿ ಅವರು ಪಿ.ರಾಮಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಐವತ್ತು ವರ್ಷಗಳ ಕಾಲ ಒಂದು ಪತ್ರಿಕೆಯಲ್ಲಿ ಕೆಲಸ ಮಾಡುವುದು ಎಂದರೇ ಅದು ಸಾಮಾನ್ಯದ ಮಾತಲ್ಲ. ಸಾಕಷ್ಟು ಎತ್ತರದಲ್ಲಿದ್ದರೂ
ಅವರು ಯಾವತ್ತೂ ಕೂಡ ದಂತದ ಗೋಪುರದಲ್ಲಿರಲಿಲ್ಲ. ಸರಳ ಜೀವನದ ಮೂಲಕ ಅನೇಕ ಪತ್ರಕರ್ತರಿಗೆ ತಿಳುವಳಿಕೆ ನೀಡಿದ್ದರು. ಸುದ್ದಿ ಮೌಲ್ಯ ಮತ್ತು ನಾವು ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ಕೊಂಡಿಯಾಗಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟವರು ಎಂದು ಹೇಳಿದರು.

ಪತ್ರಕರ್ತರಾದ ಆಶಾ ಕೃಷ್ಣಸ್ವಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ಪ್ರೆಸ್‌‍ಕ್ಲಬ್‌ ಅಧ್ಯಕ್ಷ ಆರ್‌. ಶ್ರೀಧರ್‌ ಅವರು ಪಿ.ರಾಮಯ್ಯ ಅವರೊಂದಿಗಿನ ಒಡನಾಟವನ್ನು ಸರಿಸಿದರು.ಅಭಿಮಾನಿ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪುಸ್ತಕ ಪ್ರಕಾಶಕರಾದ ಟಿ.ವೆಂಕಟೇಶ್‌, ರಾಮಯ್ಯ ಅವರ ಪುತ್ರ ಡಾ.ಬಾಲಾಜಿ, ಕೆಪಿಎಸ್‌‍ಸಿ ಮಾಜಿ ಅಧ್ಯಕ್ಷ ಡಾ.ಎಚ್‌.ಎನ್‌.ಕೃಷ್ಣ, ಎಚ್‌.ಬಿ.ದಿನೇಶ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News