ಬೆಂಗಳೂರು,ನ.25- ಇದೇ 29ರಿಂದ ನಗರದಲ್ಲಿ ನಡೆಯುವ ಬೆಂಗಳೂರು-ಟೆಕ್ ಶೃಂಗಸಭೆ ಅಂಗವಾಗಿ ಐಟಿಇ-ಡಿಪ್‍ಟೇಕ್ ಟ್ರಾಕ್ ಜಿಸಿಸಿಗಳಿಗೆ ಅವಕಾಶಗಳು, ಕೃತಕ ಬುದ್ದಮತ್ತೆ, ಸುರಕ್ಷತೆಗಾಗಿ ತಂತ್ರಜ್ಞಾನ ಸೇರಿದಂತೆ ಹಲವು ಮಹತ್ವದ ವಿಚಾರಗಳ ಚರ್ಚೆಗಳಾಗಲಿವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿಂದು ಮಾತನಾಡಿದ ಅವರು, ವಿಶ್ವದ 30 ದೇಶಗಳ ಮಾಹಿತಿ ತಂತ್ರಜ್ಞಾನ ನಾಯಕರು, ನವೋದ್ಯಮಗಳ ಹೂಡಿಕೆದಾರರು, ಸಂಶೋಧನಾ ಪ್ರಯೋಗಾಲಯಗಳ ತಜ್ಞರ ಸಮಾವೇಶಕ್ಕೆ ಸಮ್ಮೇಳನ ಸಾಕ್ಷಿಯಾಗಲಿದೆ. 26ನೇ ಆವೃತ್ತಿಯ ಸಮ್ಮೇಳನದಲ್ಲಿ ದಂತಕಥೆ, ಪರಂಪರೆ, ನಾಯಕತ್ವ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತದ್ದನ್ನು ಸಾಧಿಸಿದ ನಾರಾಯಣಮೂರ್ತಿ ಹಾಗೂ ಇತರರ ದಂತಕಥೆಗಳ ವಿಶ್ಲೇಷಣೆ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ವೈವಿಧ್ಯಮಯ, ಉತ್ಕøಷ್ಟ ಕಾರ್ಯಕ್ರಮಗಳೊಂದಿಗೆ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡಿಪ್‍ಟೇಕ್, ಜಾಗತಿಕ ಆವಿಷ್ಕಾರಗಳು, ಆರ್ ಅಂಡ್ ಆರ್ ಲ್ಯಾಬ್-2, ಬಿ2ಬಿ ಸಭೆಗಳು, ರಫ್ತು ಪ್ರಶಸ್ತಿಗಳು ಸೇರಿದಂತೆ ಹಲವು ಆಯಾಮಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಭವಿಷ್ಯದ ಸೈಬರ್ ಸುರಕ್ಷತೆ, ಸೈಬರ್ ವಾರ್ ಫೇರ್, 5ಜಿ ಅಳವಡಿಕೆ, ವೈರ್‍ಲೆಸ್ ತಂತ್ರಜ್ಞಾನ, ಸೆಮಿಕಂಡಕ್ಟರ್ ವಿಚಾರಗಳ ವಿನಿಮಯವಾಗಲಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಇಸ್ರೋದ ಚಂದ್ರಯಾನ-3ರ ಲ್ಯಾಂಡರ್ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ ಎಂದರು.
ಭ್ರಷ್ಟರ ಪೋಷಕ ಸಿದ್ದರಾಮಯ್ಯ: ಬಿಜೆಪಿ ಕಿಡಿ
ಪರಿಸರಸ್ನೇಹಿಯಾದ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. 75 ಸೆಷನ್‍ಗಳು, 400ಕ್ಕೂ ಹೆಚ್ಚು ಭಾಷಣಕಾರರು, 350ಕ್ಕೂ ಹೆಚ್ಚು ನವೋದ್ಯಮಗಳು, 600ಕ್ಕೂ ಹೆಚ್ಚು ಪ್ರದರ್ಶಕರು, 20 ಸಾವಿರಕ್ಕೂ ಹೆಚ್ಚಿದ ವ್ಯಾಪಾರಿಗಳು ಸಮ್ಮೇಳನದ ಭಾಗವಾಗಲಿದ್ದಾರೆ ಎಂದು ವಿವರಿಸಿದರು.
ಮುಂದಿನ ಎರಡು ವರ್ಷಗಳ ಪೈಕಿ 2024-2025ರಲ್ಲಿ ನವೆಂಬರ್ 19-21ರಂದು ಬೆಂಗಳೂರು ಟೆಕ್ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಪ್ರಸಕ್ತ ಸಮ್ಮೇಳನದಲ್ಲಿ ದೇಶ, ವಿದೇಶಗಳ ಪ್ರಖ್ಯಾತ ಸಂಸ್ಥೆಗಳು ಭಾಗವಹಿಸುತ್ತಾರೆ ಎಂದು ತಿಳಿಸಿದರು.