Thursday, April 16, 2026
Homeರಾಜ್ಯಅಹಿಂದ ಹೆಸರಿನಲ್ಲಿ ವಿಶ್ವಾಸದ್ರೋಹ ಮಾಡಿದ ಕಾಂಗ್ರೆಸ್‌‍ಗೆ ಜನ ತಕ್ಕಪಾಠ ಕಲಿಸಲಿದ್ದಾರೆ : ಆರ್‌.ಅಶೋಕ್‌

ಅಹಿಂದ ಹೆಸರಿನಲ್ಲಿ ವಿಶ್ವಾಸದ್ರೋಹ ಮಾಡಿದ ಕಾಂಗ್ರೆಸ್‌‍ಗೆ ಜನ ತಕ್ಕಪಾಠ ಕಲಿಸಲಿದ್ದಾರೆ : ಆರ್‌.ಅಶೋಕ್‌

People will teach Congress a lesson for betraying people in the name of Ahinda : R. Ashok

ಬೆಂಗಳೂರು,ಫೆ.23- ಅಹಿಂದ ಹೆಸರಿನಲ್ಲಿ ಜನರಿಗೆ ವಿಶ್ವಾಸದ್ರೋಹ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌‍ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಹಲವು ನಿಗಮಗಳಿಗೆ ಬಿಡಿಗಾಸೂ ಇಲ್ಲ. ಕೆಲವು ನಿಗಮಗಳಿಗೆ ಬರೀ ಪುಡಿಗಾಸು. ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಅಹಿಂದ ಜಪ ಮಾಡುವ ಸಿಎಂ ಸಿದ್ದರಾಮಯ್ಯ ಅವರು ಕಳೆದ ಮೂರು ವರ್ಷಗಳಿಂದ ಪರಿಶಿಷ್ಟರು, ಹಿಂದುಳಿದ ಸಮುದಾಯಗಳ ಅಭಿವೃದ್ಧಿ ನಿಗಮಗಳನ್ನು ಅನುದಾನವಿಲ್ಲದೆ ಸೊರಗಿಸಿದ್ದೇ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಇದೇನಾ ನಿಮ ಸಾಮಾಜಿಕ ನ್ಯಾಯ? ಇದೇನಾ ಬಡವರು, ಪರಿಶಿಷ್ಟರು, ಹಿಂದುಳಿದವರ ಬಗ್ಗೆ ತಮಗಿರುವ ಕಾಳಜಿ? ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಟ್ಯಾಂಕರ್‌ ಮಾಫಿಯಾ ಜತೆ ಕಾಂಗ್ರೆಸ್‌‍ ಅದ್ಯಾವ ರೀತಿ ಕೈಜೋಡಿಸಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.ಟ್ಯಾಂಕರ್‌ ಮಾಫಿಯಾಗೆ ಅನುಕೂಲವಾಗಲು ಕೊಳವೆ ಬಾವಿಗಳ ದುರಸ್ತಿ ಕಾರ್ಯಕ್ಕೆ ಸರ್ಕಾರ ಆಸಕ್ತಿ ತೋರುತ್ತಿಲ್ಲ.

ಕೊಳವೆ ಬಾವಿಗಳ ದುರಸ್ತಿ ಮಾಡದೆ ಜನರನ್ನು ಸಂಕಷ್ಟಕ್ಕೆ ತಳ್ಳಿ, ಅದರಲ್ಲೂ ನೀರಿನ ವಿಚಾರದಲ್ಲಿ ಈ ರೀತಿ ತೊಂದರೆ ಕೊಟ್ಟು ಕೈ ಸರ್ಕಾರ ದುಡ್ಡು ಮಾಡುವ ಕೀಳುಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ನಾಚಿಕೆಗೇಡು ಎಂದು ವಾಗ್ದಳಿ ನಡೆಸಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್‌ ಅವರೇ, ಬೆಂಗಳೂರಿನ ಶೇ.50% ಜನ ಪ್ರಾಮಾಣಿಕರಲ್ಲ, ಕಾನೂನು ಪಾಲನೆ ಮಾಡುವುದಿಲ್ಲ ಎಂದು ರಾಷ್ಟ್ರೀಯ ಮಾಧ್ಯಮದಲ್ಲಿ ಆರೋಪ ಮಾಡಿದ್ದೀರಿ. ಮೊದಲು ತಾವು ಎಷ್ಟು ಪ್ರಾಮಾಣಿಕರು ಎಂದು ತಮ ಆತಸಾಕ್ಷಿಯನ್ನ ಒಮೆ ಕೇಳಿಕೊಳ್ಳಿ ಸ್ವಾಮಿ. ಕಳೆದ ಎರಡು ವರ್ಷಗಳಿಂದ ಕೊಳವೆ ಬಾವಿ ದುರಸ್ತಿ ಯಾಕೆ ಆಗುತ್ತಿಲ್ಲ? ಇದಕ್ಕಾಗಿ ಟ್ಯಾಂಕರ್‌ ಮಾಫಿಯಾದಿಂದ ಎಷ್ಟು ಕಮಿಷನ್‌ ಬರುತ್ತಿದೆ? ಇದರಲ್ಲಿ ಎಐಸಿಸಿಯ ಹೈಕಮಾಂಡ್‌ ಪಾಲೆಷ್ಟು? ಎಂದು ಅಶೋಕ್‌ ಪ್ರಶ್ನಿಸಿದ್ದಾರೆ.

RELATED ARTICLES

Latest News