ಬೆಂಗಳೂರು, ನ.28- ಹೊಸವರ್ಷಕ್ಕೆ ಸುಮಾರು 25 ಕೋಟಿ ಮೌಲ್ಯದ ಡ್ರಗ್ಸ್ ಮಾರಾಟ ಮಾಡಲು ಬಂಧಿತ ವಿದೇಶಿ ಡ್ರಗ್ಸ್ ಪೆಡ್ಲರ್ ಬೆಂಜಮಿನ್ ಯೋಜಿಸಿದ್ದ ಎಂದು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ತಿಳಿದು ಬಂದಿದೆ.
ಇತ್ತೀಚೆಗೆ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬೆಂಜಮಿನ್ ನನ್ನು ಬಂಧಿಸಿ 10 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಸುಮಾರು 25 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸರಬರಾಜು ಮಾಡಲು ಎಲ್ಲಾ ತಯಾರಿಯನ್ನು ಮಾಡಿದ್ದ ಸುಮಾರು 350 ಗ್ರಾಹಕರು ಈತನ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಿಗೆ ಬಂದಿದೆ.
ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ
ಹೊಸ ವರ್ಷಕ್ಕೆ ಡ್ರಗ್ಸ್ ಮಾರಾಟದ ಯೋಜನೆ ರೂಪಿಸಿದ್ದ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ಕೈಗೆ ಈತ ಸಿಕ್ಕಿ ಬಿದ್ದಿದ್ದ. ಆ್ಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಯಾವುದೇ ಸಾಕ್ಷ್ಯಗಳು ಸಿಗದಂತೆ ಈ ದಂಧೆಯನ್ನು ನಡೆಸಲಾಗಿತ್ತು. ದೆಹಲಿ ಹಾಗೂ ಮುಂಬೈಯಿಂದ ರೈಲಿನ ಮೂಲಕ ಡ್ರಗ್ಸ್ ತಯಾರಿಕಾ ಸಾಮಾಗ್ರಿಗಳನ್ನು ತರಿಸುತ್ತಿದ್ದ ಎಂದು ಹೇಳಲಾಗಿದೆ.
ಮುಂದಿನ ಡಿಸೆಂಬರ್ ವೇಳೆಗೆ 25 ಕೋಟಿ ಮೌಲ್ಯದ ಡ್ರಗ್ಸ್ ತಯಾರಿಕೆಗೆ ಪ್ಲಾನ್ ಮಾಡಿದ್ದ. ಪ್ರಸ್ತುತ ಈತನ ಸಂಪರ್ಕದಲ್ಲಿದ್ದವರ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದ್ದು, ಈ ದಂಧೆಯಲ್ಲಿ ಯಾರ್ಯಾರು ಇದ್ದಾರೆಂಬುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.