ಬೆಂಗಳೂರು, ನ.28- ಕಾರಿನ ಗಾಜು ಒಡೆದು ಲ್ಯಾಪ್‍ಟಾಪ್ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ವಿಶೇಷ ತಂಡ ಬಂಧಿಸಿ 18 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಡಿಜಿ ಹಳ್ಳಿಯ ನಿವಾಸಿ ಸೋಫಿಯಾ ಶರೀಫ್, ಕನಕನಗರದ ಮೋಹಿಜ್ ಶರೀಫ್ ಹಾಗೂ ಶಾಹೀದ್ ಶರೀಫ್ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಎಲ್ಲರೂ ಸಂಬಂಧಿಗಳಾಗಿದ್ದು, ಸೋಫಿಯಾ ಶರೀಫ್ ವಿರುದ್ಧ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈತ ಮೋಹಿಜ್ ಹಾಗೂ ಶಾಹೀದ್‍ನನ್ನು ಕರೆದುಕೊಂಡು ಕೆಲಸ ಕೊಡಿಸುವುದಾಗಿ ಹೇಳಿಕೊಂಡು ಅವರನ್ನು ತನ್ನ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದನು.
ಕಾರಿನ ಗಾಜು ಒಡೆದು ಲ್ಯಾಪ್‍ಟಾಪ್ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದೇ ರೀತಿ ಹಲವು ಪ್ರಕರಣಗಳು ವರದಿಯಾಗುತ್ತಿದ್ದರಿಂದ, ಈ ರೀತಿಯ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಈಶಾನ್ಯ ವಿಭಾಗದಲ್ಲಿ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.
ಭರ್ತಿ 5 ವರ್ಷಗಳ ಗೃಹಲಕ್ಷ್ಮಿ ಹಣದ ಕಂತನ್ನು ಚಾಮುಂಡೇಶ್ವರಿಗೆ ಸಮರ್ಪಿಸಿದ ಸರ್ಕಾರ
ಈ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 18 ಲಕ್ಷ ಬೆಲೆಬಾಳುವ 15 ವಿವಿಧ ಕಂಪನಿಯ ಲ್ಯಾಪ್‍ಟಾಪ್‍ಗಳು, ಎರಡು ಮೊಬೈಲ್, ಒಂದು ಮಾರುತಿ ಸ್ವೀಪ್ಟ್ ಕಾರು, ಒಂದು ಡ್ರೀಮ್ ಯುಗಾ ಬೈಕ್ ಹಾಗೂ 60 ಗ್ರಾಂ ತೂಕದ ಚಿನ್ನದ ಅಭರಣಗಳನ್ನು ವಶಪಡಿಸಿಕೊಂಡಿದೆ.
ಆರೋಪಿಗಳ ಬಂಧನದಿಂದ ಯಲಹಂಕ ಪೆಪೊಲೀಸ್ ಠಾಣೆಯ 3 ಪ್ರಕರಣ, ಕೊತ್ತನೂರು ಪೊಲೀಸ್ ಠಾಣೆಯ3 ಪ್ರಕರಣ, ಚಿಕ್ಕಜಲ ಪೊಲೀಸ್ ಠಾಣೆಯ 3 ಪ್ರಕರಣ, ದೇವನಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ, ಅಮೃತಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ, ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ 2 ಪ್ರಕರಣ ಹಾಗೂ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರ ಪೈಕಿ ಒಬ್ಬ ಆರೋಪಿಯು ಈ ಹಿಂದೆ ದೇವನಹಳ್ಳಿ, ಚಿಕ್ಕಜಲ, ನಂದಿಕ್ರಾಸ್, ಹೊಸಕೋಟೆ, ಬಾಗಲೂರು, ವಿಜಯಪುರ, ಸಂಪಿಗೆಹಳ್ಳಿ, ಡಿ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಬೈಕ್ ಕಳವು ಪ್ರಕರಣಗಳಲ್ಲಿ ಬಾಗಿಯಾಗಿರುತ್ತಾನೆ.
ಬೆಂಗಳೂರು ನಗರ, ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ, ಸಬ್‍ಇನ್ಸ್‍ಪೆಕ್ಟರ್ ಮದುಸೂಧನ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
5 ಮಂದಿ ಸುಲಿಗೆಕೋರರ ಸೆರೆ : 2.50 ರೂ. ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳು, ಚಿನ್ನಾಭರಣ ವಶ
ಬೆಂಗಳೂರು, ನ.28- ಮೊಬೈಲ್ ಸುಲಿಗೆ ಮತ್ತು ಸರ ಅಪಹರಣ ಮಾಡುತ್ತಿದ್ದ ಐದು ಮಂದಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಸಿ 9 ಪ್ರಕರಣಗಳನ್ನು ಪತ್ತೆಹಚ್ಚಿ 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಕಣ್ಣೂರು ಸರ್ಕಲ್‍ನಿಂದ ಬೆಳ್ಳಳ್ಳಿ ಗ್ರಾಮದ ರಸ್ತೆಯಲ್ಲಿ ಐದಾರು ಮಂದಿ ಸುಲಿಗೆಕೋರರು ಬೈಕ್‍ಗಳಲ್ಲಿ ಬಂದು, ಚಾಕು ತೊರಿಸಿ ಹೆದರಿಸಿ, ಮೊಬೈಲ್, ಪರ್ಸ್, ಚಿನ್ನದ ಉಂಗುರ, ಬೈಕ್ ಕೀ ಮತ್ತು ಸುಮಾರು 4,500 ನಗದು ಹಣವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣದ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಬಾಗಲೂರು ಪೊಲೀಸರು 5 ಜನ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳ ಬಂಧನದಿಂದ ಬಾಗಲೂರು ಪೊಲೀಸ್ ಠಾಣೆಯ 3 ಸುಲಿಗೆ ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳು, ಜೆ.ಸಿ. ನಗರ ಪೊಲೀಸ್ ಠಾಣೆಯ 1 ಸರ ಅಪಹರಣ ಪ್ರಕರಣ, ಕೊತ್ತನೂರು ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣ, ಮಹದೇವಪುರ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣ, ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣಗಳೂ ಸೇರಿದಂತೆ ಒಟ್ಟು 9 ಪ್ರಕರಣಗಳು ಪತ್ತೆಯಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 2.50 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳು, 4 ಮೊಬೈಲ್ ಫೋನ್‍ಗಳು, ಒಂದು ಚಿನ್ನದ ಉಂಗುರ ಮತ್ತು ಒಂದು ಕರಿಮಣಿಗಳಿರುವ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.