ಉನ್ನಾವೊ,ಫೆ.24-ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಕಾನ್ಪುರ-ಲಕ್ನೋ ರೈಲು ಮಾರ್ಗದಲ್ಲಿ ಗೂಡ್‌್ಸರೈಲಿನ ಮುಂದೆ ಹಾರಿ ತಂದೆ-ಮಗಳು ಆತಹತ್ಯೆ ಮಾಡಿಕೊಂಡಿರುವಘಟನೆ ಕಳೆದ ರಾತ್ರಿ ನಡೆದಿದೆ.
ಗಂಗಾಘಾಟ್ ರೈಲ್ವೆ ನಿಲ್ದಾಣದ ಮುಂದಿರುವ ಶುಕ್ಲಗಂಜ್ ಪ್ರದೇಶದ ಸಹಜನಿ ಕ್ರಾಸಿಂಗ್ ಬಳಿಯ ಕೆಳ ಹಳಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಗಂಗಾಘಾಟ್ ಪೊಲೀಸ್ ಠಾಣೆಯ ಇನ್‌್ಸಪೆಕ್ಟರ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಮೃತರನ್ನು ಯಶ್ ಗುಪ್ತಾ (45) ಮತ್ತು ಅವರ 14 ವರ್ಷದ ಮಗಳು ಹಳಿಗೆ ಹಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಸುರಕ್ಷತಾ ಕಾರಣಗಳಿಗಾಗಿ, ಕೆಳ ಹಳಿಯಲ್ಲಿ ಸಂಚಾರವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು ಇದರಿಂದ ರೈಲು ಸಂಚಾರಕ್ಕೆ ಸ್ವಲ್ಪ ಸಮಯ ಅಡ್ಡಿಯಾಯಿತು.
ಈ ಘಟನೆಯಿಂದಾಗಿ ಲಕ್ನೋಗೆ ತೆರಳುತ್ತಿದ್ದ ತೇಜಸ್ ಎಕ್ಸ್ ಪ್ರೆಸ್ ಮತ್ತು ಗೋಮತಿ ಎಕ್ಸ್ ಪ್ರೆಸ್ ರೈಲುಗಳು ಸ್ವಲ್ಪ ಸಮಯದ ವರೆಗೆ ಸಂಚಾರಕ್ಕೆ ಅಡ್ಡಿಯಾದವು ಎಂದು ಅಧಿಕಾರಿಗಳು
ತಿಳಿಸಿದ್ದಾರೆ.
ದೇವರಕಲಾ ಗ್ರಾಮದ ಕಡೆಗೆ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಕಾನ್ಪುರ ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಿಳಿ ಕಾರು ನಿಂತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದಿಂದ ವಶಪಡಿಸಿಕೊಂಡ ದಾಖಲೆಗಳು ಮತ್ತು ಮೊಬೈಲ್ ಫೋನ್ ಅದು ಯಶ್ ಗುಪ್ತಾ ಅವರದ್ದು ಎಂದು ದೃಢಪಡಿಸಿದೆ.
