Homeರಾಜ್ಯಸರ್ಕಾರಿ ಆಸ್ಪತ್ರೆ ಬಚಾವೋ ಸಮಾವೇಶ ಯಾವಾಗ..?

ಸರ್ಕಾರಿ ಆಸ್ಪತ್ರೆ ಬಚಾವೋ ಸಮಾವೇಶ ಯಾವಾಗ..?

R Ashok

ಬೆಂಗಳೂರು,ಫೆ.24- ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗದೆ ಚೀಟಿ ಬರೆದುಕೊಡುವ ದುಃಸ್ಥಿತಿ ಬಂದು ಬಹಳ ದಿನಗಳಾಗಿರುವುದರಿಂದ ಸರ್ಕಾರಿ ಆಸ್ಪತ್ರೆ ಬಚಾವೋ ಸಮಾವೇಶ ಯಾವಾಗ ಮಾಡುತ್ತೀರಿ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ರಾಜ್ಯ ಸರ್ಕಾರವನ್ನು ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.

ಈ ಸಂಬಂಧ Xನಲ್ಲಿ ಪೋಸ್ಟ್‌ ಮಾಡಿರುವ ಅವರು, ಬಿಲ್‌ ಬಾಕಿ ಉಳಿಸಿಕೊಂಡಿರುವುದಕ್ಕೆ ಸ್ಕ್ಯಾನಿಂಗ್‌ ಸೇವೆ ಸ್ಥಗಿತಗೊಂಡಿದ್ದೂ ಆಯ್ತು. ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ತಂದಿಟ್ಟಿದ್ದೀರಿ ಎಂದು ವಾಗ್ದಳಿ ನಡೆಸಿದ್ದಾರೆ.

ನಿಮ ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರದ ದುರಾಡಳಿತ, ದಿವಾಳಿತನದಿಂದ ದಿನನಿತ್ಯ ಪರದಾಡುತ್ತಿರುವ ಕನ್ನಡಿಗರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ.

ಮತ್ತೊಂದು ಪೋಸ್ಟ್‌ ನಲ್ಲಿ ಜಿಬಿಎ ಪಾಲಿಕೆ ವ್ಯಾಪ್ತಿಯ ಕಾರ್ಪೋರೇಷನ್‌ ಶಾಲಾ-ಕಾಲೇಜುಗಳ ಅಥಿತಿ ಉಪನ್ಯಾಸಕರಿಗೆ 3 ತಿಂಗಳಿಂದ ಗೌರವಧನ ಕೊಟ್ಟಿಲ್ಲ.ಕಳೆದ ವರ್ಷ ಪಾಲಿಕೆಯ ಸಶಾನ ಸಿಬ್ಬಂದಿಗೆ 8 ತಿಂಗಳಿಂದ ಸಂಬಳ ಕೊಟ್ಟಿರಲಿಲ್ಲ.ಅಲ್ಲದೆ, ಪಾಲಿಕೆಯ ಕಿರಿಯ ಆರೋಗ್ಯಾಧಿಕರಿಗಳಿಗೆ 8 ತಿಂಗಳಿಂದ ಸಂಬಳ ಕೊಟ್ಟಿರಲಿಲ್ಲ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಮಾತೆತ್ತಿದರೆ ಟನಲ್‌ ರೋಡು, ಸ್ಕೈ ಡೆಕ್ಕು, ಬ್ರ್ಯಾಂಡ್‌ ಬೆಂಗಳೂರು ಅಂತ ದೊಡ್ಡ ದೊಡ್ಡ ಮಾತು ಅಡಿ ಬೊಗಳೆ ಬಿಡೋದಿಲ್ಲ ಸ್ವಾಮಿ, ಮೊದಲು ಪಾಲಿಕೆ ನೌಕರರಿಗೆ ಸರಿಯಾಗಿ ಸಂಬಳ ಕೊಡಿ ಎಂದು ಆಗ್ರಹಿಸಿದ್ದಾರೆ.

ನಿಮ ಘನಂದಾರಿ ಆಡಳಿತದಲ್ಲಿ ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ , ಟಿವಿಗಳಲ್ಲಿ ಬೆಂಗಳೂರಿನ ಎಡವಟ್ಟುಗಳ ಬಗ್ಗೆ ಒಂದಲ್ಲ ಒಂದು ನಕಾರಾತಕ ಸುದ್ದಿ ಬಂದು ಬೆಂಗಳೂರಿನ ಹೆಸರು ಹಾಳಾಗುತ್ತಿದೆ.ಒಳ್ಳೆಯ ಆಡಳಿತ ಕೊಡೋದಕ್ಕೆ ನಿಮ ಕೈಲಾದರೆ ಮುಂದುವರೆಯಿರಿ, ಇಲ್ಲವಾದರೆ ಯಾರಾದರೂ ಸಮರ್ಥರಿಗೆ ದಾರಿ ಮಾಡಿಕೊಡಿ ಎಂದು ಅಶೋಕ್‌ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

RELATED ARTICLES

Latest News