ನವದೆಹಲಿ,ಡಿ.4- ಇಂದು ಬೆಳಗ್ಗೆ ಸಂಸತ್ತಿನ ಚಳಿಗಾಲದ ಅವೇಶನ ಆರಂಭವಾಗುತ್ತಿದ್ದಂತೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮೂರು ಹೃದಯ ಭಾಗದ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಒಂದು ದಿನದ ನಂತರ ಲೋಕಸಭೆಯಲ್ಲಿ ತೀಸ್ರಿ ಬಾರ್ ಮೋದಿ ಸಕಾರ್ರ ಘೋಷಣೆಗಳು ಪ್ರತಿಧ್ವನಿಸಿದವು.
ಪ್ರಧಾನಿ ತಮ್ಮ ಸಂಪುಟದ ಸಹೋದ್ಯೋಗಿಗಳಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರೊಂದಿಗೆ ಮೊದಲ ಸಾಲಿನಲ್ಲಿ ಕುಳಿತಿದ್ದರು. ಮುಂದಿನ ವರ್ಷ ದೇಶದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರ ಹಿಂದೆ ಸಾಲು ಸಾಲಾಗಿ ಬಿಜೆಪಿ ಸಂಸದರು ಚಪ್ಪಾಳೆ ತಟ್ಟಿ ಅವರು ಮೂರನೇ ಅವಗೆ ಅಧಿಕಾರಕ್ಕೆ ಮರಳಲು ಹರ್ಷ ವ್ಯಕ್ತಪಡಿಸಿದರು.
ಸ್ನೇಹಿತರ ಜೊತೆ ಸೇರಿ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ ಅಣ್ಣ
ಬಿಜೆಪಿಯು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮುಖ್ಯಮಂತ್ರಿಯ ಮುಖಗಳನ್ನು ಬಿಂಬಿಸದೆ ಅಥವಾ ಪಿಎಂ ಮೋದಿಯವರನ್ನು ಮಾತ್ರ ಪಕ್ಷದ ಮುಖವಾಗಿ ಬಿಂಬಿಸುವ ಸಾಮೂಹಿಕ ನಾಯಕತ್ವದಲ್ಲಿ ಸ್ರ್ಪಧಿಸಿದೆ.
ಮೂರು ಹೃದಯ ಭಾಗದ ರಾಜ್ಯಗಳು ಮತ್ತು ದಕ್ಷಿಣದ ಒಂದು ರಾಜ್ಯ ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ಒಂದು ದಿನದ ನಂತರ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತದೆ. ಬಿಜೆಪಿಯು ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೆ ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿದೆ.