Monday, April 20, 2026
Homeಬೆಂಗಳೂರುನಾಯಿ ಮೂತ್ರವೇ ಇವರ ಬಂಡವಾಳ : ಬಯಲಾಯ್ತು ಖತರ್ನಾಕ್‌ ಡ್ರಗ್ಸ್ ಪೆಡ್ಲರ್‌ ಜೋಡಿಯ ಪ್ಲಾನ್‌

ನಾಯಿ ಮೂತ್ರವೇ ಇವರ ಬಂಡವಾಳ : ಬಯಲಾಯ್ತು ಖತರ್ನಾಕ್‌ ಡ್ರಗ್ಸ್ ಪೆಡ್ಲರ್‌ ಜೋಡಿಯ ಪ್ಲಾನ್‌

Dangerous drug peddler duo's plan exposed

ಬೆಂಗಳೂರು,ಮಾ.5- ಇವರೆಂತಾ ಖತರ್ನಾಕ್‌ ಜೋಡಿಗಳೆಂದರೆ ತಮ ಮನೆಯಲ್ಲಿದ್ದ ಡ್ರಗ್ಸ್ ವಾಸನೆ ಹೊರಗಿನವರಿಗೆ ಗೊತ್ತಾಗಬಾರದೆಂದು ನಾಯಿಗಳ ಮೂತ್ರವನ್ನೇ ಬಂಡವಾಳ ಮಾಡಿಕೊಂಡಿದ್ದರು.

ಯಾರಪ್ಪ ಈ ಜೋಡಿ ಅಂತೀರಾ… ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಇತ್ತೀಚೆಗೆ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಕೇರಳದವರಾದ ಅಶ್ವಿನ್‌ ಮತ್ತು ಮುಬೀನಾ ಎಂಬ ಜೋಡಿಯನ್ನು ಬಂಧಿಸಿದ ನಂತರ ಅವರ ಒಂದೊಂದೇ ರೋಚಕ ರಹಸ್ಯಗಳು ಹೊರ ಬರುತ್ತಿವೆ.

ಐಷಾರಾಮಿ ಜೀವನ ನಡೆಸುತ್ತಾ ವಿಮಾನದಲ್ಲಿ ಪದೇ ಪದೇ ಪ್ರಯಾಣ ಮಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದ ಈ ಜೋಡಿಯ ಬಂಡವಾಳವನ್ನು ಸಿಸಿಬಿ ಪೊಲೀಸರು ಬಯಲು ಮಾಡಿದ್ದಾರೆ.ಅಶ್ವಿನ್‌ ಮತ್ತು ಮುಬೀನಾ ಬಂಧನದ ವೇಳೆ ಅವರು ದೇವರ ಫೋಟೋ ಫ್ರೇಮ್‌, ಚಾಕಲೇಟ್‌, ಬಿಸ್ಕೇಟ್‌ ಮತ್ತಿತರ ವಸ್ತುಗಳಲ್ಲಿ ಅಡಗಿಸಿಟ್ಟಿದ್ದ ಕೋಟ್ಯಾಂತರ ಮೌಲ್ಯದ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು.

ಕಳೆದ ಹಲವಾರು ದಿನಗಳಿಂದಲೂ ಈ ಜೋಡಿ ಡ್ರಗ್‌್ಸ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಅಕ್ಕಪಕ್ಕದವರಿಗೆ ಏಕೆ ತಿಳಿಯಲಿಲ್ಲ ಎಂಬುವುದು ಪೊಲೀಸರ ನಿದ್ದೆಗೆಡಿಸಿತ್ತು.ಈ ನಿಗೂಢದ ಬೆನ್ನತ್ತಿದ್ದ ಪೊಲೀಸರಿಗೆ ಈ ಖತರ್ನಾಕ್‌ ಜೋಡಿ ತಮ ಫ್ಲಾಟ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಗ್‌್ಸ ವಾಸನೆ ಹೊರ ಬರಬಾರದೆಂದು ನಾಯಿಗಳನ್ನೇ ಬಂಡವಾಳ ಮಾಡಿಕೊಂಡಿದ್ದರು ಎಂಬ ಅಂಶ ಗೊತ್ತಾಗಿತ್ತು.

ಅವರು ತಾವು ಸಾಕಿದ್ದ ನಾಯಿಗಳು ಮನೆಯಲ್ಲೇ ಮಲಮೂತ್ರ ವಿಸರ್ಜನೆ ಮಾಡಿಕೊಂಡಿದ್ದರು. ಅದನ್ನು ಸ್ವಚ್ಚಮಾಡುತ್ತಿರಲಿಲ್ಲ. ಹೀಗಾಗಿ ಅಕ್ಕಪಕ್ಕದವರು ನಾಯಿ ವಾಸನೆ ಎಂದು ಮೂಗು ಮುಚ್ಚಿಕೊಂಡು ಹೋಗುತ್ತದ್ದರೆ ಹೊರತು ಅವರು ಮನೆಯಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆಂಬ ಸಣ್ಣ ಸುಳಿವು ಯಾರಿಗೂ ಸಿಕ್ಕಿರಲಿಲ್ಲ.

ಆದರೆ ಈ ಜೋಡಿಯ ವಿಲಾಸಿ ಜೀವನದಿಂದ ಅನುಮಾನಗೊಂಡಿದ್ದ ಪೊಲೀಸರಿಗೆ ಇವರು ಯಾವುದೋ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂಬ ಗುಮಾನಿ ಬಂದಿತ್ತು. ಹೀಗಾಗಿ ಅವರ ಮೇಲೆ ಮೇರೆಗೆ ಸಿಸಿಬಿ ಪೊಲೀಸರು ಎರಡು ತಿಂಗಳಿಂದ ಹದ್ದಿನ ಕಣ್ಣಿಟ್ಟಿದ್ದರು.
ಈ ಸಂದರ್ಭದಲ್ಲಿ ಅಶ್ವಿನ್‌ ಮತ್ತು ಮುಬೀನಾ ಅವರು ಥೈಲಾಂಡ್‌ನಲ್ಲಿರುವ ವಿನ್ಸೆಂಟ್‌ ಎಂಬ ಪೆಡ್ಲರ್‌ನಿಂದ ಕೇರಳ ಪ್ರವಾಸಿಗರ ಮೂಲಕ ಡ್ರಗ್ಸ್ ತರಿಸಿಕೊಂಡು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆಕಿತು.

ತಕ್ಷಣ ಕಾರ್ಯಾರಣೆಗೆ ಇಳಿದ ಪೊಲೀಸರು ಅವರ ಮನೆ ಮೇಲೆ ದಾಳಿ ಮಾಡಿ 10 ಕೋಟಿಗೂ ಹೆಚ್ಚು ಮೌಲ್ಯದ ನಾನಾ ರೀತಿಯ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು.
ಅಶ್ವಿನ್‌ ಮತ್ತು ಮುಬೀನಾ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು, ಆರಂಭದಲ್ಲಿ ಸಣ್ಣ ಪ್ರಮಾಣದ ಪೆಡ್ಲರ್‌ಗಳಾಗಿ ಗುರುತಿಸಿಕೊಂಡಿದ್ದು, ಕೆಲ ದಿನಗಳ ನಂತರ ಅವರು ಖತರ್ನಾಕ್‌ ಡ್ರಗ್ಸ್ ಪೆಡ್ಲರ್‌ಗಳಾಗಿ ರೂಪಾಂತರಗೊಂಡಿದ್ದಾರೆಂದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES

Latest News