Wednesday, April 29, 2026
Homeರಾಷ್ಟ್ರೀಯಅಸ್ಸಾಂನಲ್ಲಿ ಸುಖೋಯ್‌ 30 MKI ಯುದ್ದ ವಿಮಾನ ಪತನ

ಅಸ್ಸಾಂನಲ್ಲಿ ಸುಖೋಯ್‌ 30 MKI ಯುದ್ದ ವಿಮಾನ ಪತನ

SU-30 MKI aircraft of IAF crashes in Assam’s Karbi Anglong

ನವದೆಹಲಿ, ಮಾ.6-ಅಸ್ಸಾಂನ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯಲ್ಲಿ ಇಂದು ಭಾರತೀಯ ವಾಯುಪಡೆಯ (ಐಎಎಫ್‌) ಸುಖೋಯ್‌-30 ಎಂಕೆಐ ಯುದ್ಧ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯಲ್ಲಿದ್ದ ಯುಧ ವಿಮಾನ ಜೋರ್ಹತ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕರ್ಬಿ ಅಂಗ್ಲಾಂಗ್‌ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಐಎಎಫ್‌ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.ದುರಂತದಲ್ಲಿ ಸ್ಕ್ವಾಡ್ರನ್‌ ಲೀಡರ್‌ ಅನುಜ್‌ ಮತ್ತು ಫ್ಲೈಟ್‌ ಲೆಫ್ಟಿನೆಂಟ್‌ ಪೂರ್ವೇಶ್‌ ದುರಾಗ್ಕರ್‌ ಮೃತಪಟ್ಟಿದ್ದಾರೆ.

ಜೋರ್ಹತ್‌ ವಾಯುನೆಲೆಯಿಂದ ಹಾರಿದ ಸ್ವಲ್ಪ ಸಮಯದ ನಂತರ ವಿಮಾನ ಕಾಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸುಖೋಯ್‌ -30 ಎಂಕೆಐ ರಷ್ಯಾದ ವಿಮಾನ ತಯಾರಕ ಸುಖೋಯ್‌ ಅಭಿವೃದ್ಧಿಪಡಿಸಿದ ಎರಡು ಆಸನಗಳ ಬಹುಪಾತ್ರದ ದೀರ್ಘ-ಶ್ರೇಣಿಯ ಯುದ್ಧ ವಿಮಾನವಾಗಿದೆ.

ಇದನ್ನು ಈಗ ಭಾರತೀಯ ವಾಯುಪಡೆ (ಐಎಎಫ್‌‍) ಗಾಗಿ ಎಚ್‌ಎಎಲ್‌‍ ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. ಐಎಎಫ್‌ 260 ಕ್ಕೂ ಹೆಚ್ಚು ಸುಖೋಯ್‌ -30ಎಂಕೆಐ ಜೆಟ್‌ಗಳ ಫ್ಲೀಟ್‌ ಅನ್ನು ನಿರ್ವಹಿಸುತ್ತದೆ.

ಈ ದುಃಖದ ಸಮಯದಲ್ಲಿ ಐಎಎಫ್‌ನ ಎಲ್ಲಾ ಸಿಬ್ಬಂದಿ ಸಂತಾಪ ವ್ಯಕ್ತಪಡಿಸುತ್ತಾರೆ ಮತ್ತು ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂದು ಐಎಎಫ್‌ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಗುವಾಹಟಿಯಲ್ಲಿ ರಕ್ಷಣಾ ವಕ್ತಾರರು ವಿಮಾನದ ಅವಶೇಷಗಳು ಇಂದುಮುಂಜಾನೆ ಪತ್ತೆಯಾಗಿವೆ ಎಂದು ಹೇಳಿದರು.ಪೊಲೀಸರು,ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರ ಸಹಾಯದಿಂದ ಐಎಎಫ್‌ ಶೋಧ ಮತ್ತು ರಕ್ಷಣಾ ತಂಡವು ಅವಶೇಷಗಳನ್ನು ಪತ್ತೆಹಚ್ಚಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News