Wednesday, April 29, 2026
Homeರಾಷ್ಟ್ರೀಯಸತತ 5 ದಿನಗಳ ಇಳಿಕೆ ನಂತರ ಇಂದು ಮತ್ತೆ ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ...

ಸತತ 5 ದಿನಗಳ ಇಳಿಕೆ ನಂತರ ಇಂದು ಮತ್ತೆ ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಯಥಾಸ್ಥಿತಿ

Gold prices rise again today after 5 consecutive days of decline, silver prices unchanged

ಬೆಂಗಳೂರು, ಮಾ.7- ಸತತ ಐದು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ ಇಂದು ಏರಿಕೆ ಕಂಡಿದೆ. ಆದರೆ, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ. ಇರಾನ್‌- ಇಸ್ರೇಲ್‌ ಮತ್ತು ಅಮೆರಿಕಾ ನಡುವಿನ ಯುದ್ಧದ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರಗಳು ಗಗನಮುಖಿಯಾಗಿ ಏರಿಕೆಯಾಗಲಿವೆ ಎಂಬ ವ್ಯಾಖ್ಯಾನ ಮಾಡಲಾಗುತ್ತಿತ್ತು. ಕಳೆದ ಒಂದು ವಾರದಿಂದ ಯುದ್ಧ ನಡೆಯುತ್ತಲೇ ಇದೆ. ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆಯಾಗುವ ಬದಲು ಇಳಿಮುಖವಾಗಿದ್ದವು.

ಲಭ್ಯವಿರುವ ಮಾರುಕಟ್ಟೆಯ ಮಾಹಿತಿ ಪ್ರಕಾರ ವಾರದ ಆರಂಭದಿಂದ ಕುಸಿತ ಕಂಡಿದ್ದ ಚಿನ್ನ ವಾರಂತ್ಯದಲ್ಲಿ ಏರಿಕೆ ಕಂಡಿದೆ. ಕಳೆದ ಸೋಮವಾರದಿಂದ ನಿನ್ನೆಯವರೆಗೆ 24 ಕ್ಯಾರಟ್‌ ಚಿನ್ನ ಒಂದು ಗ್ರಾಂಗೆ 1196 ರೂ. ನಷ್ಟು ಕಡಿಮೆಯಾಗಿತ್ತು. ಇಂದು ಒಂದು ಗ್ರಾಂಗೆ 251 ರೂ. ಹೆಚ್ಚಳವಾಗಿದ್ದು, 16,364 ರೂ.ನಷ್ಟಿದೆ.

ಇದೇ ರೀತಿ 22 ಕ್ಯಾರಟ್‌ ಹಾಗೂ 18 ಕ್ಯಾರಟ್‌ ಚಿನ್ನದಲ್ಲೂ ಇಳಿಕೆಯಾಗಿತ್ತು. ಇಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್‌ ಚಿನ್ನ ಒಂದು ಗ್ರಾಂಗೆ 230 ರಷ್ಟು ಏರಿಕೆಯಾಗಿದ್ದು, 15,00 ರೂ. ನಷ್ಟಿದೆ. 18 ಕ್ಯಾರಟ್‌ನ ಆಭರಣ ಚಿನ್ನ ಒಂದು ಗ್ರಾಂಗೆ 188 ರೂ.ನಷ್ಟು ಹೆಚ್ಚಾಗಿದ್ದು, 12,273 ರೂ. ನಷ್ಟಿದೆ.

ಚಿನ್ನದಂತೆ ಪ್ಲಾಟಿನಂ ಬೆಲೆಯೂ ಹೆಚ್ಚಾಗಿದೆ. 10ಗ್ರಾಂಗೆ 250 ರೂ. ನಷ್ಟು ಏರಿಕೆಯಾಗಿದ್ದ 63,400 ರೂ. ನಷ್ಟಿದೆ. ಆದರೆ, ಬೆಳ್ಳಿದರ ಮಾ. 3 ಮತ್ತ ಮಾ.4 ರಂದು ಇಳಿಕೆಯಾಗಿತ್ತು. ಅನಂತರ ಮೂರು ದಿನಗಳ ಕಾಲ ಏರಿಳಿತವಾಗದೆ ಸ್ಥಿರವಾಗಿದೆ. ಮಾ. 5 ರಿಂದಲೂ ಒಂದು ಕೆ.ಜಿ.ಬೆಳ್ಳಿ ದರ 2,8500 ರೂ. ನಷ್ಟಿದೆ. ಈಗಾಗಲೇ ಗರಿಷ್ಠ ದುಬಾರಿ ಬೆಲೆ ತಲುಪಿರುವ ಚಿನ್ನ ಮತ್ತು ಬೆಳ್ಳಿ ದರಗಳು ಶ್ರೀಸಾಮಾನ್ಯರ ಕೈಗೆಟುಕದಂತಾಗಿವೆ.

ಮತ್ತೆ ಏರಿಕೆಯಾದರೆ, ಆಭರಣ ಪ್ರಿಯರಿಗೆ ಭಾರಿ ನಿರಾಸೆಯಾಗಲಿದೆ. ಆದರೆ, ಹೂಡಿಕೆದಾರರು ಸುರಕ್ಷತೆ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೆಚ್ಚು ಬಂಡವಾಳ ತೊಡಗಿಸುತ್ತಾರೆ.

RELATED ARTICLES

Latest News