Wednesday, April 29, 2026
Homeಅಂತಾರಾಷ್ಟ್ರೀಯಬಾಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿ

ಬಾಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿ

Balendra Shah to be Nepal's next PM

ಕಠಂಡು, ಮಾ.7- ಚತುರ ರಾಜಕಾರಣಿ ಬಾಲೇಂದ್ರ ಶಾ ಮುಂದಿನ ನೇಪಾಳದ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅವರ ಹೊಸದಾಗಿ ರೂಪುಗೊಂಡ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌‍ಪಿ) ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವಿನತ್ತ ಸಾಗುತ್ತಿದೆ.
ರಾಜಕೀಯವಾಗಿ ದುರ್ಬಲವಾಗಿರುವ ರಾಷ್ಟ್ರದಲ್ಲಿ ಸ್ಥಾಪಿತ ರಾಜಕೀಯ ಪಕ್ಷಗಳ ಪ್ರಾಬಲ್ಯವನ್ನು ಛಿದ್ರಗೊಳಿಸಿದೆ.ಒಟ್ಟು 165 ಕ್ಷೇತ್ರಗಳಲ್ಲಿ 161 ಕ್ಷೇತ್ರಗಳಿಂದ ಲಭ್ಯವಿರುವ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಆರ್‌ಎಸ್‌‍ಪಿ 34 ಸ್ಥಾನಗಳನ್ನು ಗೆದ್ದಿದೆ ಮತ್ತು 85 ಕ್ಷೇತ್ರಗಳಲ್ಲಿ ಮುಂದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇತ್ತೀಚಿನವರೆಗೂ ಕಠ್ಮಂಡುವಿನ ಮೇಯರ್‌ ಆಗಿದ್ದ ಬಾಲೇಂದ್ರ ಶಾ ಅವರು ಝಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ಪ್ರಧಾನಿ ಮತ್ತು ಸಿಪಿಎನ್‌‍-ಯುಎಂಎಲ್‌ ಅಧ್ಯಕ್ಷ ಕೆ ಪಿ ಶರ್ಮಾ ಓಲಿ ಅವರನ್ನು 15,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ಬ್ಯಾಲೆನ್‌‍ ಎಂದೇ ಜನಪ್ರಿಯರಾಗಿರುವ 35 ವರ್ಷದ ಎಂಜಿನಿಯರ್‌ ನೇಪಾಳದ ಮುಂದಿನ ಪ್ರಧಾನಿಯಾಗುವ ನಿರೀಕ್ಷೆಯಿದೆ, ಇದು ನೇಪಾಳದ ವಿವಿಧ ಹಳೆಯ ಪಕ್ಷಗಳನ್ನು ತಿರಸ್ಕರಿಸುವ ಸಾರ್ವಜನಿಕ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ನೇಪಾಳವು ಕಳೆದ 18 ವರ್ಷಗಳಲ್ಲಿ 14 ಸರ್ಕಾರಗಳನ್ನು ಕಂಡಿದೆ.ರಾಜಕೀಯವಾಗಿ ದುರ್ಬಲವಾಗಿರುವ ಹಿಮಾಲಯ ರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ಹೊಂದುವ ಆಶಯದೊಂದಿಗೆ ಭಾರತವು ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿತು.

ನೇಪಾಳದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ದೆಹಲಿಯಲ್ಲಿ ಹೇಳಿದ್ದರು. ಭಾರತವು ನೇಪಾಳದಲ್ಲಿ ಶಾಂತಿ, ಪ್ರಗತಿ ಮತ್ತು ಸ್ಥಿರತೆಯನ್ನು ನಿರಂತರವಾಗಿ ಬೆಂಬಲಿಸಿದೆ ಮತ್ತು ನಮ್ಮ ಬದ್ಧತೆಗೆ ಅನುಗುಣವಾಗಿ, ಈ ಚುನಾವಣೆಗಳಿಗೆ ನೇಪಾಳ ಸರ್ಕಾರದ ಕೋರಿಕೆಯಂತೆ ಲಾಜಿಸ್ಟಿಕಲ್‌ ಸರಬರಾಜುಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.

ನೇಪಾಳಿ ಕಾಂಗ್ರೆಸ್‌‍ 4 ಸ್ಥಾನಗಳನ್ನು ಗೆದ್ದಿದ್ದರೆ, 11 ಕ್ಷೇತ್ರಗಳಲ್ಲಿ ಮುಂದಿದೆ. ನೇಪಾಳಿ ಕಮ್ಯುನಿಸ್ಟ್‌ ಪಕ್ಷ ಎರಡು ಸ್ಥಾನಗಳನ್ನು ಗೆದ್ದಿದೆ. ಶ್ರಮ ಸಂಸ್ಕೃತಿ ಪಕ್ಷ ಆರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. .ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಮತ್ತು ಪ್ರಗತಿಶೀಲ ಪ್ರಜಾಸತ್ತಾತಕ ಪಕ್ಷ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.

ಸಂಸತ್ತಿನ ಒಟ್ಟು 275 ಸದಸ್ಯರಲ್ಲಿ 165 ಜನರನ್ನು ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುವುದು, ಉಳಿದ 110 ಜನರನ್ನು ಪ್ರಮಾಣಾನುಗುಣ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.

RELATED ARTICLES

Latest News