Wednesday, April 29, 2026
Homeರಾಜ್ಯಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಮೊದಲ ಆದ್ಯತೆ, ಹೋಟೆಲ್‌ನವರು ತಾಳ್ಮೆ ವಹಿಸಿ : ಕೆ.ಎಚ್‌.ಮುನಿಯಪ್ಪ

ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಮೊದಲ ಆದ್ಯತೆ, ಹೋಟೆಲ್‌ನವರು ತಾಳ್ಮೆ ವಹಿಸಿ : ಕೆ.ಎಚ್‌.ಮುನಿಯಪ್ಪ

Hospitals, hostels given top priority, hotels should be patient: K.H. Muniyappa

ಬೆಂಗಳೂರು,ಮಾ.13- ಆಸ್ಪತ್ರೆಗಳಿಗೆ, ವಿದ್ಯಾರ್ಥಿ ನಿಲಯಗಳಿಗೆ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ಗಳನ್ನು ಒದಗಿಸಲಾಗುವುದು. ಹೋಟೆಲ್‌ನವರು ಇನ್ನೂ ಒಂದು ವಾರ ತಾಳೆಯಿಂದ ಇರಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.

ಶೂನ್ಯ ವೇಳೆಯಲ್ಲಿ ಆಡಳಿತ ಪಕ್ಷದ ಶಾಸಕರಾದ ಐವಾನ್‌ ಡಿಸೋಜ ಹಾಗೂ ಎಂ.ನಾಗರಾಜ ಯಾದವ್‌ ಅವರು ಮಾಡಿದ ಪ್ರಸ್ತಾಪಕ್ಕೆ ಸಚಿವರು ಇಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತೈಲ ಕಂಪನಿಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ತಕ್ಷಣಕ್ಕೆ ವಾಣಿಜ್ಯ ಬಳಕೆ ಅನಿಲದ ಪೂರೈಕೆ ಸಮಸ್ಯೆಯಿದ್ದು, ಒಂದು ವಾರದ ಬಳಿಕ ಬಗೆಹರಿಯಲಿದೆ.

ಹೀಗಾಗಿ ಅಗತ್ಯವಿರುವಷ್ಟು ಅಡುಗೆ ತಯಾರು ಮಾಡಬೇಕು. ಉಳಿದಂತೆ ಎಲೆಕ್ಟ್ರಿಕ್‌ ಒಲೆ ಬಳಕೆ ಮಾಡಿಕೊಳ್ಳಬೇಕು ಎಂದರು.ಈಗಾಗಲೇ 2 ಹಡಗುಗಳು ಬಂದಿದ್ದು, ಇನ್ನೂ 10 ಹಡಗುಗಳು ಬರುತ್ತಿವೆ. ಕಾಳಸಂತೆಯಲ್ಲಿ ಅನಿಲದ ಸಿಲಿಂಡರ್‌ಗಳು ಮಾರಾಟವಾಗದಂತೆ ಎಚ್ಚರಿಕೆ ವಹಿಸಲು ಹಾಗೂ ತಕ್ಷಣ ಕ್ರಮ ಕೈಗೊಳ್ಳಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸದ್ಯಕ್ಕೆ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ ದಾಸ್ತಾನು ಇಲ್ಲ. ತುರ್ತು ಕಾರ್ಯಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ಒದಗಿಸುತ್ತೇವೆ. ಆಟೋ ರಿಕ್ಷಾಗಳಿಗೆ ಬೆಂಗಳೂರಿನಲ್ಲಿ ಗ್ಯಾಸ್‌‍ ಒದಗಿಸಲು ಹಾಗೂ ಮಂಗಳೂರಿನಲ್ಲೂ ಗ್ಯಾಸ್‌‍ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಐವಾನ್‌ ಡಿಸೋಜಾ ಗ್ಯಾಸ್‌‍ ಸಮಸ್ಯೆಯಿಂದಾಗಿ ಕಟ್ಟಿಗೆ ದರ ಹೆಚ್ಚಾಗಿದೆ. ಮಂಗಳೂರು ಭಾಗದಲ್ಲಿ ಗ್ಯಾಸ್‌‍ ಸಿಲಿಂಡರ್‌ ಸಮಸ್ಯೆ ತೀವ್ರವಾಗಿದೆ ಎಂದರು.
ನಾಗರಾಜು ಮಾತನಾಡಿ, ಆಟೋಗಳು, ಹೋಟೆಲ್‌ಗಳು, ಹಾಸ್ಟೆಲ್‌ಗಳಿಗೆ ಗ್ಯಾಸ್‌‍ ಸಿಲಿಂಡರ್‌ ಸಿಗದೆ ಊಟದ ಮೆನುವಿನಲ್ಲಿ ಬದಲಾವಣೆಯಾಗಿದೆ.

ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಬಿದ್ದಿದೆ. ವಾಣಿಜ್ಯ ಸಿಲಿಂಡರ್‌ಗಳ ಸಮಸ್ಯೆಯಾಗದಂತೆ ಹಾಗೂ ಕಾಳಸಂತೆಯಲ್ಲಿ ಮಾರಾಟವಾಗದಂತೆ ತಿಳಿಸಿದರು. ತೆರಿಗೆ ವಿಧಿಸುವ ವಿಚಾರ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದೆ. ರಾಜ್ಯದಿಂದ ವಿಧಿಸಲಾಗುವ ತೆರಿಗೆ ಬಗ್ಗೆ ಮಾಹಿತಿ ಪಡೆದು ಹೇಳಲಾಗುವುದು.

ಎಲ್‌.ಪಿ.ಜಿ ದಾಸ್ತಾನು ಕೊರತೆ ಇಲ್ಲ ವದಂತಿಗೆ ಕಿವಿಗೊಡಬೇಡಿ
ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡ ಬಾರದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲವು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಅನಿಲದ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಹಾಗೂ ಗೃಹಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳು ಇದಲ್ಲಿ ಸಹಾಯವಾಣಿ: 9611404384 ಮೂಲಕ ಸಂಪರ್ಕಿಸಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News