Saturday, April 11, 2026
Homeರಾಜ್ಯಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಕಾವಲು : 16 ಶಾಸಕರು ರೆಸಾರ್ಟ್‌ಗೆ

ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಕಾವಲು : 16 ಶಾಸಕರು ರೆಸಾರ್ಟ್‌ಗೆ

DK Shivakumar guard for Odisha Congress MLAs: 16 MLAs to resort

ಬೆಂಗಳೂರು, ಮಾ.13- ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಪರೇಷನ್‌ ಕಮಲವನ್ನು ತಡೆಯಲು ಹೊರ ರಾಜ್ಯದ ಶಾಸಕರನ್ನು ಮತ್ತೆ ಕರ್ನಾಟಕಕ್ಕೆ ಕರೆತರಲಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆಶ್ರಯದಲ್ಲಿ ರಕ್ಷಣೆ ನೀಡಲಾಗಿದೆ.

ಒಡಿಸ್ಸಾದಿಂದ ರಾಜ್ಯಸಭೆ ಚುನಾವಣೆಗೆ ಡಾ.ದತ್ತೇಶ್ವರ ಹೋಟ, ದಿಲೀಪ್‌ಕುಮಾರ್‌ ರಾಯ್‌, ಮನಮೋಹನ್‌ ಸಮಲ್‌, ಸಂತೃಪ್ತ್ ಮಿಶ್ರಾ, ಸುಜಿತ್‌ಕುಮಾರ್‌, ಕಂಟೆ ಸಯನ್ನ ಅವರು ಅಭ್ಯರ್ಥಿಗಳಾಗಿದ್ದಾರೆ.

ಇತ್ತ ಒಡಿಸ್ಸಾ ವಿಧಾನಸಭೆಯಲ್ಲಿ ಕಾಂಗ್ರೆಸ್‌‍ 14 ಸದಸ್ಯರನ್ನು ಮಾತ್ರ ಹೊಂದಿದೆ. ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಪಕ್ಷೇತರ ಇಬ್ಬರು ಸದಸ್ಯರನ್ನು ಒಳಗೊಂಡಂತೆ ಒಟ್ಟು 16 ಮಂದಿ ಶಾಸಕರನ್ನು ಬೆಂಗಳೂರಿಗೆ ಕರೆ ತಂದು ಬಿಡದಿ ಬಳಿಯ ಈಗಲ್‌ ರೆಸಾರ್ಟ್‌ನಲ್ಲಿ ಇರಿಸಲಾಗಿದೆ.

ಒಡಿಸ್ಸಾ ವಿಧಾನಸಭೆಯಲ್ಲಿ ಬಿಜೆಪಿ 79, ಕಾಂಗ್ರೆಸ್‌‍ 14, ಬಿಜು-ಜನತಾದಳ 50, ಪಕ್ಷೇತರರು 3 ಸದಸ್ಯರಿದ್ದಾರೆ. ಶತಾಯಗತಾಯ ಕಾಂಗ್ರೆಸ್‌‍ ಒಂದು ಸ್ಥಾನದಲ್ಲಿ ಗೆಲ್ಲಲೇಬೇಕೆಂಬ ಕಾರಣಕ್ಕಾಗಿ ಆಪರೇಷನ್‌ ಕಮಲದಿಂದ ತಮ ಸದಸ್ಯರನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ.

ಪ್ರತಿ ಬಾರಿಯೂ ಕಾಂಗ್ರೆಸ್‌‍ಗೆ ಡಿ.ಕೆ.ಶಿವಕುಮಾರ್‌ ಆಪತ್ಬಾಂಧವರಂತೆ ಕೆಲಸ ಮಾಡುತ್ತಾರೆ. ಈ ಬಾರಿ ಮುಖ್ಯಮಂತ್ರಿ ಹುದ್ದೆ ದೊರೆತ್ತಿಲ್ಲ ಎಂಬ ಅಸಮಾಧಾನದ ನಡುವೆಯೂ ಮತ್ತೆ ಕಾಂಗ್ರೆಸ್‌‍ ಬೆಂಬಲಕ್ಕೆ ಮುಂದಾಗಿದ್ದಾರೆ.

ಒಡಿಸ್ಸಾ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೂರು ಜನ ಪಕ್ಷೇತರ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮನಮೋಹನ್‌ ಸಮಲ್‌ ಮತ್ತು ಸುಜಿತ್‌ಕುಮಾರ್‌ ಎಂಬ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೊತೆಗೆ ಮಾಜಿ ಕೇಂದ್ರ ಸಚಿವ ದಿಲೀಪ್‌ರಾಯ್‌ ಅವರನ್ನು ಬೆಂಬಲಿಸುತ್ತಿದೆ.

ಬಿಜೆಡಿ ಡಾ. ಸಂತೃಪ್‌್ತ ಮಿಶ್ರಾ ಅವರನ್ನು ಅಧಿಕೃತವಾಗಿ ಕಣಕ್ಕಿಳಿಸಿದ್ದು, ಡಾ. ದತ್ತೇಶ್ವರ ಹೋಟ ಅವರನ್ನು ನಾಲ್ಕನೇ ಸ್ಥಾನಕ್ಕಿಳಿಸಲಾಗಿದೆ. ಅಡ್ಡ ಮತದಾನದ ಆತಂಕ ಇರುವುದರಿಂದಾಗಿ ಕಾಂಗ್ರೆಸ್‌‍ ತನ್ನ ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಷ್ಟ ಬಂದ ಸಂದರ್ಭದಲ್ಲಿ ಅಲ್ಲಿನ ಶಾಸಕರನ್ನು ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿಗೆ ಕರೆ ತರಲಾಗಿತ್ತು. ಅದೇ ರೀತಿ ಗುಜರಾತ್‌ನ ಕಾಂಗ್ರೆಸ್‌‍ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ಗೆ ಕರೆತಂದು ರಕ್ಷಣೆ ಮಾಡಿ ಡಿಕೆಶಿ ಅವರು ಟ್ರಬಲ್‌ ಶೂಟರ್‌ ಆಗಿ ಕೆಲಸ ಮಾಡಿದ್ದರು.

ಈಗ ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಆಪರೇಷನ್‌ ಕಮಲದ ಭೀತಿ ಹಿನ್ನೆಲೆಯಲ್ಲಿ ತಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್‌‍ ಶಾಸಕರ ರಕ್ಷಣೆಯ ಹೊಣೆಯನ್ನು ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರ ಹೆಗಲಿಗೆ ಹಾಕಿದೆ. ಹಾಗಾಗಿ 14 ಕಾಂಗ್ರೆಸ್‌‍ ಶಾಸಕರು ಹಾಗೂ ಬೆಂಬಲಿತ ಪಕ್ಷೇತರ ಶಾಸಕರು ಸೇರಿ 16 ಶಾಸಕರಿಗೆ ಬೆಂಗಳೂರಿಗೆ ಕರೆತಂದು ಬಿಡದಿ ಬಳಿಯ ಈಗಲ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಲಾಗಿದೆ.

RELATED ARTICLES

Latest News