ವಾಷಿಂಗ್ಟನ್, ಮಾ.14- ಇರಾನಿನ ಹೊಸ ಸರ್ವೋಚ್ಚ ನಾಯಕರಾಗಿ ಹೊರ ಹೊಮಿರುವ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಬಗ್ಗೆ ಸುಳಿವು ನೀಡಿದವರಿಗೆ ಬಂಪರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಮೊಜ್ತಾಬಾ ಅವರ ಬಗ್ಗೆ ಸುಳಿವು ನೀಡಿದವರಿಗೆ 10 ಮಿಲಿಯನ್ ಡಾಲರ್ (92.47 ಕೋಟಿ ರೂ.) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.ಮೊಜ್ತಾಬಾ ಖಮೇನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗೆ ಸಂಬಂಧಿಸಿದ ಹಲವಾರು ಹಿರಿಯ ಅಧಿಕಾರಿಗಳ ಫೋಟೋವನ್ನು ಅಮೆರಿಕದ ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ನಡೆಸುವ ರಿವಾರ್ಡ್‌್ಸ ಫಾರ್ ಜಸ್ಟೀಸ್ ಅಪ್ಲೋಡ್ ಮಾಡಿ ನಗದು ಬಹುಮಾನ ಪ್ರಕಟಿಸಿದೆ.
ಈ ವ್ಯಕ್ತಿಗಳು ಪ್ರಪಂಚದಾದ್ಯಂತ ಭಯೋತ್ಪಾದನೆಯನ್ನು ಯೋಜಿಸುವ, ಸಂಘಟಿಸುವ ಮತ್ತು ಕಾರ್ಯಗತಗೊಳಿಸುವ ಐಆರ್‌ಜಿಸಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅದನ್ನು ಟಾರ್ ಆಧಾರಿತ ಟಿಪ್‌ಲೈನ್ ಅಥವಾ ಸಿಗ್ನಲ್ ಮೂಲಕ ನಮಗೆ ಕಳುಹಿಸಿ ಎಂದು ಕೇಳಿಕೊಂಡಿದೆ.
ಇರಾನ್ ಶೀಘ್ರವೇ ಶರಣಾಗಬಹುದು ಎಂದು ಭಾವಿಸಿದ್ದೇನೆ. ಒಂದು ವೇಳೆ ಶರಣಾಗದೇ ಇದ್ದರೆ ಮುಂದಿನ ವಾರ ಇರಾನ್ ಮೇಲೆ ಭಾರೀ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಫೆ.28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿತ್ತು. ಇದಾದ ಬಳಿಕ ಐಆರ್‌ಜಿಸಿಯ ಸೇನಾ ನೆಲೆಗಳು, ಕಚೇರಿಗಳು, ಶಸ್ತ್ರಾಸ್ತ್ರ ತಯಾರಿಸುವ ಫ್ಯಾಕ್ಟರಿಗಳು ಸೇರಿದಂತೆ ಒಟ್ಟು 15,000 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದು ಹಾಕಿವೆ.
