ಬೆಂಗಳೂರು, ಮಾ.20- ಉದ್ಯಮಿ ಸಿಜೆ ರಾಯ್ ಆತಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಬಹುತೇಕ ಒಂದು ವಾರದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಆದಾಯ ತೆರಿಗೆ ದಾಳಿಯ ಸಂದರ್ಭದಲ್ಲಿ ಸಿಜೆ ರಾಯ್ ತಮ ಎದೆಗೆ ಗುಂಡು ಹೊಡೆದುಕೊಂಡು ಜನವರಿ 30ರಂದು ಆತಹತ್ಯೆ ಮಾಡಿಕೊಂಡಿದ್ದರು.
ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಬೆಂಗಳೂರಿನ ಪಶ್ಚಿಮ ವಲಯದ ಜಂಟಿ ಆಯುಕ್ತ ಸಿ.ವಂಶಿಕೃಷ್ಣಾ ಮಾರ್ಗದರ್ಶನದಲ್ಲಿ ತನಿಖೆ ನಡೆಸಲು ಎಸ್‌ಐಟಿ ತಂಡವನ್ನು ರಚಿಸಿತ್ತು. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಸರ್ ತನಿಖಾಧಿಕಾರಿಯಾಗಿದ್ದು, ಕೇಂದ್ರ ವಿಭಾಗದ ಡಿಸಿಸಿ ಅಕ್ಷಯ್ ಅಕೆ, ಎಸಿಪಿಗಳಾದ ಸುಧೀರ್, ಸಿಸಿಬಿಯ ರಾಮಚಂದ್ರ, ಅಶೋಕ್‌ನಗರ ಇನ್‌್ಸಪೆಕ್ಟರ್ ಕೆ.ಬಿ. ರವಿ ಮತ್ತಿತರರು ತಂಡದಲ್ಲಿದ್ದರು.
ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದ ಎಸ್‌ಐಟಿ ನಿರ್ಧಿಷ್ಠ ಕಾರಣ ಪತ್ತೆ ಹಚ್ಚಲು ಪರದಾಡುತ್ತಿದೆ. ಸಿಜೆ ರಾಯ್ ಬೆಂಗಳೂರಿನಲ್ಲಷ್ಟೇ ಅಲ್ಲದೇ ದುಬೈ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ತಮ ಉದ್ಯಮವನ್ನು ವಿಸ್ತರಿಸಿದ್ದರು. ಕಾನ್ಫಿಡೆಂಟ್‌ಗ್ರೂಪ್‌ನ ಬಂಡವಾಳ ಹೂಡಿಕೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಈ ಸಂಬಂಧಪಟ್ಟಂತೆ ಆದಾಯ ತೆರಿಗೆ ಹಲವು ಬಾರಿ ದಾಳಿ ನಡೆಸಿತ್ತು. ದಾಳಿ ವೇಳೆಯಲ್ಲಿ ಹವಾಲ ಹಣದ ಮಾಹಿತಿ ದೊರೆತಿದೆ ಎಂದು ಹೇಳಲಾಗಿದ್ದು, ಅದಕ್ಕೆ ಉತ್ತರ ನೀಡಲಾಗದೆ, ಸಿಜೆ ರಾಯ್ ಖಿನ್ನತೆಗೊಳಗಾಗಿದ್ದರು. ಈ ಕಾರಣಕ್ಕೆ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕಗಳಿದ್ದುದರಿಂದಾಗಿ ತನಿಖೆ ನಡೆಸಲು ಅಧಿಕಾರಿಗಳು ಪರದಾಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳವೇ ತಮ ಸಹೋದರನ ಆತಹತ್ಯೆಗೆ ಕಾರಣ ಎಂದು ಸಿಜೆ ಬಾಬು ಆರೋಪ ಮಾಡಿದರು. ಆದರೆ ಆದಾಯ ತೆರಿಗೆ ವಿರುದ್ಧ ಕ್ರಮಕೈಗೊಳ್ಳಲು ಮುಂದಾದರೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಅಳೆದು ತೂಗಿ ವರದಿ ಸಿದ್ಧ ಪಡಿಸಿದ್ದಾರೆ ಎನ್ನಲಾಗಿದೆ.
ಬಹುತೇಕ ಉದ್ಯಮಿಯ ಖಿನ್ನತೆಗೆ ಆತಹತ್ಯೆ ಕಾರಣ ಎನ್ನುವ ಅಭಿಪ್ರಾಯ ಬರೆದು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
