Thursday, April 30, 2026
Homeಅಂತಾರಾಷ್ಟ್ರೀಯಇಸ್ರೇಲ್‌ನ ಪರಮಾಣು ಸಂಶೋಧನಾ ಕೇಂದ್ರಗಳಿರುವ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

ಇಸ್ರೇಲ್‌ನ ಪರಮಾಣು ಸಂಶೋಧನಾ ಕೇಂದ್ರಗಳಿರುವ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

In Tit-For-Tat Move, Iran Targets Israeli Nuclear Facility, Over 100 Injured

ಟೆಲ್‌ ಅವೀವ್‌,ಮಾ.22- ಇರಾನ್‌ನ ನಟಾಂಜ್‌ ಪರಮಾಣು ಸ್ಥಾವರದ ಮೇಲೆ ನಡೆದ ದಾಳಿಗೆ ಪ್ರತಿಯಾಗಿ, ಇರಾನ್‌ ಈಗ ಇಸ್ರೇಲ್‌ನ ಅತ್ಯಂತ ಸೂಕ್ಷ್ಮ ಪರಮಾಣು ಸಂಶೋಧನಾ ಕೇಂದ್ರಗಳಿರುವ ಡಿಮೋನಾ ಮತ್ತು ಅರಾದ್‌ ಪಟ್ಟಣಗಳ ಮೇಲೆ ಭೀಕರ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದೆ.

ನೂರಾರು ಕಿಲೋಗ್ರಾಂ ತೂಕದ ಕ್ಷಿಪಣಿಗಳು ಜನವಸತಿ ಪ್ರದೇಶಗಳಿಗೆ ಅಪ್ಪಳಿಸಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಟಾಂಜ್‌ನಲ್ಲಿರುವ ತನ್ನ ಪರಮಾಣು ತಾಣದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್‌ ದಾಳಿ ನಡೆಸಿದೆ. ಡಿಮೋನಾದಲ್ಲಿರುವ ಶಿಮೊನ್‌ ಪೆರೆಸ್‌‍ ನೆಗೆವ್‌ ಪರಮಾಣು ಸಂಶೋಧನಾ ಕೇಂದ್ರವು ಇರಾನ್‌ನ ಟಾರ್ಗೆಟ್‌ ಆಗಿದೆ. ಎರಡು ನೇರ ದಾಳಿಗಳು ವಸತಿ ಕಟ್ಟಡಗಳ ಮುಂಭಾಗಗಳನ್ನು ನಾಶಗೊಳಿಸಿವೆ.

ಡಿಮೋನಾ ಮತ್ತು ಅರಾದ್‌ ಎರಡರ ಮೇಲೂ ದಾಳಿ ಮಾಡಲಾಗಿದೆ. ಇದರ ಪರಿಣಾಮ ನೂರಾರು ಕಿಲೋಗ್ರಾಂಗಳಷ್ಟು ತೂಕದ ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಂದ ಎರಡು ನೇರ ಹೊಡೆತಗಳು ಸಂಭವಿಸಿದವು ಎಂದು ಅಗ್ನಿಶಾಮಕ ದಳದವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅರಾದ್‌ನಲ್ಲಿ 84 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 10 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಡಿಮೋನಾದಲ್ಲಿ 33 ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ವ್ಯಾಪಕ ಹಾನಿ ಮತ್ತು ಅವ್ಯವಸ್ಥೆ ಇತ್ತು ಎಂದು ಅರೆವೈದ್ಯ ಕಾರ್ಮೆಲ್‌ ಕೊಹೆನ್‌ ತಿಳಿಸಿದ್ದಾರೆ.

ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವೆಯಾದ ಮ್ಯಾಗೆನ್‌ ಡೇವಿಡ್‌ ಅಡೋಮ್‌ ನೀಡಿರುವ ಮಾಹಿತಿಯಂತೆ, ಅರಾದ್‌ನಲ್ಲಿ 84 ಜನರು ಗಾಯಗೊಂಡಿದ್ದು, ಈ ಪೈಕಿ 10 ಜನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಡಿಮೋನಾದಲ್ಲಿ ಅಂದರೆ ಶಿಮೊನ್‌ ಪೆರೆಸ್‌‍ ನೆಗೆವ್‌ ಪರಮಾಣು ಸಂಶೋಧನಾ ಕೇಂದ್ರವಿರುವ ಈ ಪಟ್ಟಣದಲ್ಲಿ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಸ್ರೇಲ್‌ನ ರಕ್ಷಣಾ ಪಡೆಗಳ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಎಫೀ ಡೆಫ್ರಿನ್‌ ಪ್ರತಿಕ್ರಿಯಿಸಿ, ನಮ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸಿದವು. ಆದರೆ, ಕೆಲವು ಕ್ಷಿಪಣಿಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ಯಾವುದೇ ಅಸಾಮಾನ್ಯ ಶಸಾ್ತ್ರಸ್ತ್ರವಲ್ಲದಿದ್ದರೂ, ಶಸಾ್ತ್ರಸ್ತ್ರಗಳ ತೂಕ ಹೆಚ್ಚಿದ್ದರಿಂದ ಹಾನಿ ಅಧಿಕವಾಗಿದೆ ಎಂದು ತಿಳಿಸಿದ್ದಾರೆ. ಘಟನೆಯ ಬಗ್ಗೆ ಐಡಿಎಫ್‌ ತನಿಖೆಗೆ ಆದೇಶಿಸಿದೆ.

ಇರಾನ್‌ ಈ ಮಟ್ಟಕ್ಕೆ ಕೋಪಗೊಂಡು ದಾಳಿ ನಡೆಸಲು, ಶನಿವಾರ ಇರಾನ್‌ನ ನಟಾಂಜ್‌ ಪರಮಾಣು ಪುಷ್ಟೀಕರಣ ಘಟಕದ ಮೇಲೆ ನಡೆದ ವೈಮಾನಿಕ ದಾಳಿ ಕಾರಣವಾಗಿದೆ. ಈ ದಾಳಿಯಿಂದ ಹಲವು ಕಟ್ಟಡಗಳು ಹಾನಿಗೀಡಾಗಿದ್ದವು. ಆದರೆ, ಇರಾನ್‌ನ ಮಿಜಾನ್‌ ಸುದ್ದಿ ಸಂಸ್ಥೆಯ ಪ್ರಕಾರ, ಸ್ಥಾವರದಲ್ಲಿ ಯಾವುದೇ ವಿಕಿರಣ ಸೋರಿಕೆ ವರದಿಯಾಗಿಲ್ಲ. ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಕೂಡ ವಿಕಿರಣಶೀಲ ಪರಿಣಾಮಗಳ ಸಾಧ್ಯತೆಯನ್ನು ತಳ್ಳಿಹಾಕಿದೆ.

ಇರಾನ್‌ ಉಡಾಯಿಸಿದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ನೇರವಾಗಿ ವಸತಿ ಕಟ್ಟಡಗಳಿಗೆ ಅಪ್ಪಳಿಸಿವೆ. ದಾಳಿಯ ರಭಸಕ್ಕೆ ಬಹುಮಹಡಿ ಕಟ್ಟಡಗಳ ಮುಂಭಾಗದ ಭಾಗಗಳು ಸಂಪೂರ್ಣ ಛಿದ್ರವಾಗಿದ್ದು, ನೆಲದಲ್ಲಿ ಬೃಹತ್‌ ಗುಂಡಿಗಳು ನಿರ್ಮಾಣವಾಗಿವೆ. ಆಕಾಶದಿಂದ ಬೆಂಕಿಯ ಚೆಂಡುಗಳು ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇಸ್ರೇಲ್‌ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

RELATED ARTICLES

Latest News