ನವದೆಹಲಿ,ಮಾ.22- ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಭೌಗೋಳಿಕ ರಾಜಕೀಯ ಅಸ್ಥಿರತೆಯು ಈಗ ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಏಪ್ರಿಲ್ 1ರಿಂದ ವಿಮಾನ ಟರ್ಬೈನ್ ಇಂಧನ ಬೆಲೆಗಳು ಹೆಚ್ಚಾಗಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಆದರೆ ಈ ಹೊರೆಯನ್ನು ತಕ್ಷಣವೇ ಪ್ರಯಾಣಿಕರ ಮೇಲೆ ವರ್ಗಾಯಿಸಲಾಗುವುದಿಲ್ಲ. ಈ ಬಗ್ಗೆ ಇತರ ಪ್ರಯತ್ನಗಳು ನಡೆಯುತ್ತಿವೆಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯು, ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ ಬೆಲೆಗಳನ್ನು ನಿರ್ಧರಿಸಲಾಗುತ್ತದೆ ಮತ್ತು ಏಪ್ರಿಲ್ 1ರ ಆರಂಭದಲ್ಲಿಯೇ ಸಂಭಾವ್ಯ ಪರಿಣಾಮವನ್ನು ಕಾಣಬಹುದು ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿರುವ ಅವರು, ವಿಮಾನಯಾನ ಸಂಸ್ಥೆಗಳು ಆರ್ಥಿಕ ಒತ್ತಡದಲ್ಲಿವೆ ಎಂದು ಒಪ್ಪಿಕೊಂಡರಲ್ಲದೇ, ಸರ್ಕಾರದ ಆದ್ಯತೆ ಸುರಕ್ಷಿತ ಮತ್ತು ನಿಯಮಿತ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳುವುದು ಎಂದು ತಿಳಿಸಿದ್ದಾರೆ.
ಇರಾನ್ ಯುದ್ಧವು ಕಚ್ಚಾ ತೈಲ ಸರಬರಾಜಿನಲ್ಲಿ ಅಡಚಣೆಗಳಿಗೆ ಕಾರಣವಾಗಿದೆ ಮತ್ತು ಗಲ್‌್ಫ ರಾಷ್ಟ್ರಗಳ ಮೇಲಿನ ವಿಮಾನಗಳ ಸ್ಥಗಿತ, ವಿಮಾ ವೆಚ್ಚ ಹೆಚ್ಚಳ ಮತ್ತು ಕಾರ್ಯಾಚರಣೆಯ ವೆಚ್ಚ ಹೆಚ್ಚಾಗುವ ಅಪಾಯಕ್ಕೆ ಕಾರಣವಾಗಿದೆ. ತೈಲ ಬೆಲೆಗಳು ಏರಿದರೆ, ಇದು ನೇರವಾಗಿ ಎಟಿಎಫ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಪ್ರಯಾಣಿಕರು ತಕ್ಷಣದ ದರ ಏರಿಕೆಯನ್ನು ಎದುರಿಸದಂತೆ ನೋಡಿಕೊಳ್ಳುವುದು ತನ್ನ ಆದ್ಯತೆಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಧನ ಮತ್ತು ಎಟಿಎಫ್ ಬೆಲೆಗಳ ಏರಿಕೆ ಬಹುತೇಕ ಅನಿವಾರ್ಯ ಎಂದು ಹೇಳಿದ ಸಚಿವ ನಾಯ್ಡು, ಟಿಕೆಟ್ ಬೆಲೆಗಳಲ್ಲಿ ಗಮನಾರ್ಹ ಏರಿಕೆಯಾಗದಂತೆ ನೋಡಿಕೊಳ್ಳುವುದು ಸಚಿವಾಲಯದ ಗಮನ. ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದರು.
ಈತನಧ್ಯೆ, ಹೆಚ್ಚಿದ ವೆಚ್ಚವನ್ನು ಸರಿದೂಗಿಸಲು ದೇಶೀಯ ವಿಮಾನಯಾನ ಸಂಸ್ಥೆಗಳು ಈಗಾಗಲೇ ಇಂಧನ ಸರ್ಚಾರ್ಜ್‌ಗಳನ್ನು ಜಾರಿಗೆ ತಂದಿವೆ.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್‌್ಸಪ್ರೆಸ್ ದೇಶೀಯ ಟಿಕೆಟ್‌ಗಳ ಮೇಲೆ 399 ಇಂಧನ ಸರ್ಚಾರ್ಜ್ ವಿಧಿಸಿವೆ, ಆದರೆ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಇದು
10 ರಿಂದ 200 ಡಾಲರ್ (ಸರಿಸುಮಾರು 16,000) ವರೆಗೆ ಇರುತ್ತದೆ. ಇಂಡಿಗೋ ದೂರವನ್ನು ಅವಲಂಬಿಸಿ 425 ರಿಂದ 2,300 ವರೆಗೆ ಸರ್ಚಾರ್ಜ್ ವಿಧಿಸಿದೆ. ಬಜೆಟ್ ಏರ್‌ಲೈನ್ ಆಕಾಶಾ ಏರ್ ಹಾರಾಟದ ಅವಧಿಯನ್ನು ಅವಲಂಬಿಸಿ 199ರಿಂದ 1,300ವರೆಗೆ ಇಂಧನ ಸರ್ಚಾರ್ಜ್ ವಿಧಿಸಿದೆ.
