ನವದೆಹಲಿ, ಮಾ. 24 (ಪಿಟಿಐ) ಬರುವ ಏಪ್ರಿಲ್ 17 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ಅನುಷ್ಕಾ ಶರ್ಮಾ ಭಾರತ ಮಹಿಳಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಡರ್ಬಾನ್, ಜೋಹಾನ್ಸ್ ಬರ್ಗ್ ಮತ್ತು ಬೆನೋನಿಯಲ್ಲಿ ಈ ಸರಣಿಯನ್ನು ಆಯೋಜಿಸಲಾಗಿದೆ. ಡಬ್ಲ್ಯುಪಿಎಲ್ 2026 ಕ್ಕೂ ಮೊದಲು ಶರ್ಮಾ ಅವರನ್ನು ಗುಜರಾತ್ ಜೈಂಟ್ಸ್ 45 ಲಕ್ಷ ರೂ.ಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಐಪಿಎಲ್‌ನಲ್ಲಿ ಅವರು ಬ್ಯಾಟಿಂಗ್‌ನಿಂದ ಉತ್ತಮ ಪ್ರದರ್ಶನ ನೀಡಿದ್ದ ಪರಿಣಾಮ 22 ವರ್ಷದ ಅವರು ಕಳೆದ ತಿಂಗಳು ಬ್ಯಾಂಕಾಕ್‌ನಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದ ಭಾರತ ಎ ತಂಡದ ಭಾಗವಾಗಿದ್ದರು.
ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿನಲ್ಲಿ ಭಾಗವಹಿಸಿದ್ದ ತಂಡದಿಂದ, ಸ್ನೇಹಾ ರಾಣಾ, ಅಮನ್‌ಜೋನ್ ಕೌರ್, ಜಿ ಕಮಲಿನಿ ಮತ್ತು ವೈಷ್ಣವಿ ಶರ್ಮಾ ದಕ್ಷಿಣ ಆಫ್ರಿಕಾ ಸರಣಿಯ ಸಾಲಿನಲ್ಲಿ ಸ್ಥಾನ ಪಡೆದಿಲ್ಲ.
ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿರುವ ವೇಗಿ ಕಶ್ವಿ ಗೌತಮ್ ಅವರನ್ನು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟಿ20 ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.ಹರ್ಮನ್‌ಪ್ರೀತ್ ಕೌರ್ (ಸಿ), ಸ್ಮೃತಿ ಮಂಧಾನ (ವಿಸಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ), ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್, ಕಾಶ್ವೀ ಗೌತಮ್, ಭಾರತಿ ಫುಲ್ಮಲಿ (ಯುಕೆ) ತಂಡದಲ್ಲಿದ್ದಾರೆ.
