Thursday, April 30, 2026
Homeಅಂತಾರಾಷ್ಟ್ರೀಯಹಾರ್ಮುಜ್‌ ಜಲಸಂಧಿಯಲ್ಲಿ ಭಾರತ ಸೇರಿ 5 ರಾಷ್ಟ್ರಗಳ ಹಡಗುಗಗಳಿಗೆ ಅನುಮತಿ ನೀಡಿದ ಇರಾನ್‌

ಹಾರ್ಮುಜ್‌ ಜಲಸಂಧಿಯಲ್ಲಿ ಭಾರತ ಸೇರಿ 5 ರಾಷ್ಟ್ರಗಳ ಹಡಗುಗಗಳಿಗೆ ಅನುಮತಿ ನೀಡಿದ ಇರಾನ್‌

India, 5 Others On Iran's "Friendly Nation" List For Safe Hormuz Passage

ದುಬೈ,ಮಾ.26-ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೂ ಭಾರತ ಸೇರಿದಂತೆ 5 ರಾಷ್ಟ್ರಗಳಿಗೆ ಸುರಕ್ಷಿತ ತೈಲ ಸಾಗಣೆಗೆ ಇರಾನ್‌ ತನ್ನ ಹಾರ್ಮುಜ್‌ ಜಲಸಂಧಿಯಲ್ಲಿ ಸಂಪೂರ್ಣ ನಿರ್ಬಂಧ ಅನ್ವಯಿಸಲ್ಲ ಎಂದು ಘೋಷಿಸಿದೆ. ಭಾರತ ಸೇರಿದಂತೆ ಸ್ನೇಹಪೂರ್ಣ ಸಂಬಂಧ ಹೊಂದಿರುವ ಐದು ರಾಷ್ಟ್ರಗಳ ಹಡಗುಗಳಿಗೆ ಸುರಕ್ಷಿತವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ.

ಭಾರತದ ಜೊತೆಗೆ ರಷ್ಯಾ, ಚೀನಾ, ಪಾಕಿಸ್ತಾನ ಮತ್ತು ಇರಾಕ್‌ ದೇಶಗಳ ಹಡಗುಗಳು ಈ ಸಂಘರ್ಷಪೀಡಿತ ಮಾರ್ಗದಲ್ಲಿ ಸಾಗಲು ಅವಕಾಶ ಪಡೆದಿವೆ.ಇರಾನ್‌ ಸರ್ಕಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ವಿದೇಶಾಂಗ ಸಚಿವ ಅಬ್ಬಾಸ್‌‍ ಅರಾಘ್ಚಿ, ಹಾರ್ಮುಜ್‌ ಜಲಸಂಧಿ ಸಂಪೂರ್ಣವಾಗಿ ಮುಚ್ಚಿಲ್ಲ ಎಂದು ಹೇಳಿದರು.

ಸ್ನೇಹಪೂರ್ಣ ರಾಷ್ಟ್ರಗಳಿಗೆ ಸೇರಿದ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.ಹಡಗು ಮಾಲೀಕರು ಅಥವಾ ಸಂಬಂಧಿತ ದೇಶಗಳು ನಮನ್ನು ಸಂಪರ್ಕಿಸಿ ಸುರಕ್ಷಿತ ಸಾಗಣೆಗಾಗಿ ವಿನಂತಿಸಿದ್ದವು. ಕೆಲವು ಸ್ನೇಹಪೂರ್ಣ ರಾಷ್ಟ್ರಗಳಿಗೆ ನಮ ಸಶಸ್ತ್ರ ಪಡೆಗಳು ಭದ್ರತೆ ಒದಗಿಸಿವೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್‌ ಮತ್ತು ಭಾರತ ಸೇರಿದಂತೆ ಕೆಲವು ರಾಷ್ಟ್ರಗಳ ಹಡಗುಗಳು ಈ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿಯೂ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ತಿಳಿಸಿದರು.

ಆದರೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಇಸ್ರೇಲ್‌ ಮತ್ತು ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾಗವಹಿಸುತ್ತಿರುವ ಕೆಲವು ಗಲ್‌್ಫ ರಾಷ್ಟ್ರಗಳ ಹಡಗುಗಳಿಗೆ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ.

ಸುಮಾರು ಐದು ದಶಕಗಳ ಬಳಿಕ ಹೋರ್ಮುಜ್‌ ಜಲಸಂಧಿಯ ಮೇಲೆ ಇರಾನ್‌ ತನ್ನ ನಿಯಂತ್ರಣವನ್ನು ತೋರಿದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.ಪ್ರಾರಂಭದಲ್ಲಿ ಅನೇಕ ರಾಷ್ಟ್ರಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವಾದರೂ, ನಂತರ ಇರಾನ್‌ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಹೇಳಿದರು. ಇತರ ರಾಷ್ಟ್ರಗಳು ಈ ಜಲಮಾರ್ಗವನ್ನು ಮರುತೆರೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

RELATED ARTICLES

Latest News