Tuesday, April 14, 2026
Homeಅಂತಾರಾಷ್ಟ್ರೀಯ'ನನ್ನನ್ನೇ ಇರಾನ್‌ ಸುಪ್ರೀಂ ಲೀಡರ್‌ ಮಾಡಲು ಮುಂದಾಗಿದ್ದರು' ; ಟ್ರಂಪ್‌

‘ನನ್ನನ್ನೇ ಇರಾನ್‌ ಸುಪ್ರೀಂ ಲೀಡರ್‌ ಮಾಡಲು ಮುಂದಾಗಿದ್ದರು’ ; ಟ್ರಂಪ್‌

Iran was ready to make me the Supreme Leader'; Trump

ವಾಷಿಂಗ್ಟನ್‌,ಮಾ. 26: ಇರಾನ್‌ ನಮ ಮುಂದೆ ಮಂಡಿಯೂರಿದೆ ಆದರೆ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಅವರಿಗೆ ಜೀವ ಭಯ ಕಾಡುತ್ತಿದೆ. ಅವರ ಸುಪ್ರೀಂ ನಾಯಕ ನಾನೇ ಆಗಬೇಕೆಂದು ಅವರು ಬಯಸಿದ್ದರು ಅದಕ್ಕೆ ನಾನೇ ಒಪ್ಪಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಬಡಾಯಿ ಕೊಚ್ಚಿಕೊಂಡಿದ್ದಾರೆ.

ಅಮೆರಿಕದಲ್ಲಿ ರಿಪಬ್ಲಿಕನ್‌ ನಿಧಿಸಂಗ್ರಹಣೆಯಲ್ಲಿ ಮಾತನಾಡಿದ ಅವರು, ಇರಾನ್‌ ನಮ್ಮ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಿದೆ. ಅವರು ಒಪ್ಪಂದವನ್ನು ಮಾಡಿಕೊಳ್ಳಲು ಕಾತುರರಾಗಿದ್ದಾರೆ. ಒಂದುವೇಳೆ ಆ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡರೆ ತಮ್ಮದೇ ಜನರು ತಮ್ಮನ್ನು ಸಾಯಿಸುತ್ತಾರೆ ಎಂಬ ಭಯ ಇರಾನ್‌ ನಾಯಕರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಒಪ್ಪಂದಕ್ಕೆ ಸಿದ್ಧವಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇರಾನ್‌ ಮಾತ್ರ ಅಮೆರಿಕ ತನ್ನ ಜೊತೆ ಯಾವುದೇ ರೀತಿಯ ಕದನವಿರಾಮದ ಮಾತುಕತೆ ನಡೆಸಿಲ್ಲ, ನಾವು ಅದಕ್ಕೆ ಒಪ್ಪುವುದೂ ಇಲ್ಲ. ಕದನವಿರಾಮದ ದಿನದ ಬಗ್ಗೆ ಹಾಗೂ ಷರತ್ತುಗಳ ಬಗ್ಗೆ ಟ್ರಂಪ್‌ ನಿರ್ಧಾರ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದೆ.

ಇದರ ಜೊತೆಗೆ ಟ್ರಂಪ್‌ ಇನ್ನೊಂದು ಶಾಕಿಂಗ್‌ ಹೇಳಿಕೆಯನ್ನೂ ನೀಡಿದ್ದಾರೆ. ನಾವು ನಿಮ್ಮನ್ನು ಇರಾನ್‌ನ ಮುಂದಿನ ಸುಪ್ರೀಂ ಲೀಡರ್‌ ಮಾಡಲು ಬಯಸುತ್ತೇವೆ ಎಂದು ಇರಾನ್‌ ನಾಯಕರು ಹೇಳಿದ್ದರು. ಆದರೆ, ನಾನು ನೋ, ಥ್ಯಾಂಕ್ಸ್‌‍. ನನಗೆ ಅದು ಬೇಡ ಎಂದು ಹೇಳಿದ್ದೆ ಎಂದಿದ್ದಾರೆ.

ಕಳೆದ ತಿಂಗಳು ಅಲಿ ಖಮೇನಿ ಹತ್ಯೆಯ ನಂತರ ಇರಾನ್‌ ನಾಯಕತ್ವದಲ್ಲಿನ ಅನಿಶ್ಚಿತತೆಯ ಮಧ್ಯೆ ಈ ಹೇಳಿಕೆಗಳು ಬಂದಿವೆ. ಅವರ ಮಗ ಮೊಜ್ತಾಬಾ ಖಮೇನಿ ಅವರನ್ನು ಸುಪ್ರೀಂ ಲೀಡರ್‌ ಆಗಿ ಬಡ್ತಿ ನೀಡಲಾಗಿದೆ. ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಅವರು ಎಲ್ಲೂ ಕಾಣಿಸಿಕೊಂಡಿಲ್ಲ.

RELATED ARTICLES

Latest News