Saturday, May 2, 2026
Homeರಾಜ್ಯರಾಜ್ಯದೆಲ್ಲೆಡೆ ರಾಮನವಮಿ ಸಂಭ್ರಮ : ಮೊಳಗಿದ 'ಜೈ ಶ್ರೀರಾಮ್‌' ಜಪ

ರಾಜ್ಯದೆಲ್ಲೆಡೆ ರಾಮನವಮಿ ಸಂಭ್ರಮ : ಮೊಳಗಿದ ‘ಜೈ ಶ್ರೀರಾಮ್‌’ ಜಪ

Ram Navami celebrations across the state: Chanting of 'Jai Shri Ram'

ಬೆಂಗಳೂರು, ಮಾ.27- ಶ್ರೀ ರಾಮನವಮಿಯನ್ನು ಇಂದು ದೇಶದಾದ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತಿದೆ. ಎಲ್ಲೆಡೆ ಶ್ರೀರಾಮ ನಾಮ ಮೊಳಗುತ್ತಿದೆ.ರಾಮಜನಭೂಮಿ ಅಯೋಧ್ಯೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲೆಡೆ ಜೈ ಶ್ರೀರಾಮ್‌ ಘೋಷಣೆ ಅನುರಣಿಸುತ್ತಿದೆ.

ದೇವಾಲಯಗಳನ್ನು ವಿಶೇಷವಾಗಿ ಅಲಂಕರಿಸಿ ಶ್ರೀರಾಮನ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.ಇಂದು ಬೆಳಗ್ಗಿನಿಂದಲೇ ದೇವಾಲಯಗಳನ್ನು ತಳಿರು ತೋರಣ ಹೂಗಳಿಂದ ಅಲಂಕರಿಸಿ ಆವರಣದಲ್ಲಿ ರಂಗುರಂಗಿನ ರಂಗೋಲಿ ಬಿಡಿಸಲಾಗಿತ್ತು.

ಬೆಂಗಳೂರಿನಲ್ಲೂ ಇಸ್ಕಾನ್‌, ಚಾಮರಾಜಪೇಟೆಯ ಶ್ರೀರಾಮೇಶ್ವರ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಶ್ರೀರಾಮ ಪೂಜಾ ಕೈಂಕರ್ಯ ಹಮಿಕೊಳ್ಳಲಾಗಿದೆ.ಗಲ್ಲಿ ಗಲ್ಲಿಗಳಲ್ಲೂ ಶ್ರೀರಾಮ-ಲಕ್ಷ್ಮಣ-ಸೀತಾ-ಆಂಜನೇಯ ಚಿತ್ರಪಟ ಇರಿಸಿ ಪೂಜೆ ಮಾಡಿ ರಸ್ತೆ ಬದಿಯಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಗುತ್ತಿದೆ.

ರಾಜಾಜಿನಗರದ ಶ್ರೀರಾಮಮಂದಿರ, ರಾಗಿಗುಡ್ಡದ ಆಂಜನೇಯ ದೇಗುಲ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹನುಮಂತ ನಗರದ ಗುಟ್ಟೆ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಆಂಜನೇಯ ದೇಗುಲಗಳಲ್ಲೂ ಶ್ರೀರಾಮನವಮಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ.

ಮನೆ ಮನೆಗಳಲ್ಲಿ ಹೋಳಿಗೆ ತಯಾರಿಸಿ ಸಿಹಿಯೂಟ ಮಾಡುವ ಮೂಲಕ ಸಂಭ್ರಮದಿಂದ ಶ್ರೀರಾಮನವಮಿ ಆಚರಣೆ ಮಾಡಲಾಗುತ್ತಿದೆ. ರಾಜಾಜಿನಗರದ ಶ್ರೀರಾಮಂದಿರದ ದೇವಾಲಯದಲ್ಲಿ ಶ್ರೀರಾಮನ ದರ್ಶನ ಪಡೆ ಯಲು ಭಕ್ತರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.ಎಲ್ಲೆಡೆ ಪರಸ್ಪರ ಶ್ರೀರಾಮನವಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದುದು ಸರ್ವೆ ಸಾಮಾನ್ಯವಾಗಿತ್ತು.

ರಾಜಾಜಿನಗರದಲ್ಲಿ ಬ್ರಹರಥೋತ್ಸವ

ಬೆಂಗಳೂರು, ಮಾ.27- ಶ್ರೀರಾಮನವಮಿ ಅಂಗವಾಗಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಹಮಿಕೊಂಡಿದ್ದ 70ನೇ ಶ್ರೀರಾಮೋತ್ಸವದ ಬ್ರಹ ರಥೋತ್ಸವಕ್ಕೆ ಕಾಂಗ್ರೆಸ್‌‍ ಮುಖಂಡ ರಘುವೀರ್‌ ಗೌಡ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ದೇವಸ್ಥಾನ ಮಂಡಳಿ ಅಧ್ಯಕ್ಷ ಶ್ರೀಧರ್‌, ಮತ್ತಿತರ ಭಕ್ತಾದಿಗಳು ಪಾಲ್ಗೊಂಡು ಭಕ್ತಿಭಾವ ಮೆರೆದರು.

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನು ಪಿತೃವಾಕ್ಯ ಪರಿಪಾಲಕ. ಆದರ್ಶ ಪತಿ ಹಾಗೂ ಧರ್ಮನಿಷ್ಠ ನಾಯಕನಾಗಿ ಎಲ್ಲರಿಗೂ ಮಾದರಿಯಾಗಿದ್ದಾನೆ. ಅವರ ಆದರ್ಶ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ದೇಶದಲ್ಲಿ ಸುಖ-ಶಾಂತಿ ಹಾಗೂ ನೆಮದಿ ನೆಲೆಸಲಿದೆ ಎಂದು ರಘುವೀರ್‌ಗೌಡ ಹೇಳಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಭು ಶ್ರೀರಾಮನ ಆಶೀರ್ವಾದ ಲಭಿಸಿ ರಾಜ್ಯ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

RELATED ARTICLES

Latest News