Thursday, April 30, 2026
Homeಮನರಂಜನೆಜಾಗತಿಕವಾಗಿ 1088 ಕೋಟಿ ರೂ. ಬಾಚಿ ಹೊಸ ದಾಖಲೆ ಬರೆದ ಧುರಂಧರ್‌

ಜಾಗತಿಕವಾಗಿ 1088 ಕೋಟಿ ರೂ. ಬಾಚಿ ಹೊಸ ದಾಖಲೆ ಬರೆದ ಧುರಂಧರ್‌

Dhurandhar sets new record by earning Rs 1088 crores globally

ನವದೆಹಲಿ, ಮಾ.27- ಆದಿತ್ಯಧರ್‌ ಅವರ ಧುರಂಧರ್‌ ದಿ ರಿವೆಂಜ್‌‍ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ಬಾಕ್ಸ್ ಆಫೀಸ್‌‍ ದಾಖಲೆ ಮುರಿದಿದ್ದು , ವಿಶ್ವಾದಾದ್ಯಂತ ಗಳಿಕೆ 1,088 ಕೋಟಿ ರೂ. ದಾಟಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೆ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.

ಜಿಯೋ ಸ್ಟುಡಿಯೋಸ್‌‍ ಮತ್ತು ಬಿ62 ಸ್ಟುಡಿಯೋಸ್‌‍ ಪ್ರಕಾರ, ರಣವೀರ್‌ ಸಿಂಗ್‌ ಅಭಿನಯದ ಸ್ಪೈ ಥ್ರಿಲ್ಲರ್‌ ಚಿತ್ರವು ತನ್ನ ಎಂಟು ದಿನಗಳ ಆರಂಭಿಕ ವಾರದಲ್ಲಿ ಭಾರತದಲ್ಲಿ 814 ಕೋಟಿ ರೂ.ಗಳನ್ನು ಮತ್ತು ವಿದೇಶಗಳಲ್ಲಿ 274 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ವಿಶ್ವಾದ್ಯಂತ 1,088 ಕೋಟಿ ರೂ ಗಳಿಸಿದೆ. ಭಾರತದಲ್ಲಿ ಈ ಚಿತ್ರದ ವಾರದ ನಿವ್ವಳ ಸಂಗ್ರಹ 690 ಕೋಟಿ ರೂ.ಗಳಾಗಿದೆ.

ಬ್ಲಾಕ್‌ಬಸ್ಟರ್‌ ಧುರಂಧ ಚಿತ್ರದ ಮುಂದುವರಿದ ಭಾಗವು ಹಿಂದಿನ ಎಲ್ಲಾ ಮಾನದಂಡಗಳನ್ನು ಮೀರಿ ಹೊಸ ದಾಖಲೆ ಸ್ಥಾಪಿಸಿದೆ ಮತ್ತು ವಿಶ್ವಾದ್ಯಂತ ವೇಗವಾಗಿ 1000 ಕೋಟಿ ರೂ. ಗಳಿಸುವ ಮೂಲಕ ಜಾಗತಿಕವಾಗಿ ಭಾರತೀಯ ಸಿನಿಮಾವೊಂದು 8 ದಿನಗಳಲ್ಲಿ ಅತ್ಯಂತ ಬಲಿಷ್ಠ ಗಳಿಕೆಯೊಂದಿಗೆ ಹೊಸ ದಾಖಲೆ ಸೃಷ್ಟಿಸಿದೆ ಎಂದು ತಯಾರಕರು ತಿಳಿಸಿದ್ದಾರೆ.

ಈ ಚಿತ್ರವು ಒಂದೇ ದಿನದಲ್ಲಿ ಒಂದೇ ಭಾಷೆಯಲ್ಲಿ 100 ಕೋಟಿ ರೂ. ಮೈಲಿಗಲ್ಲು ದಾಟಿದ ಮೊದಲ ಭಾರತೀಯ ಚಿತ್ರವಾಗಿದೆ. ತನ್ನ ಮೊದಲ ನಾಲ್ಕು ದಿನಗಳಲ್ಲಿ ಜಾಗತಿಕವಾಗಿ 761 ಕೋಟಿ ರೂ. ಗಳಿಸಿದ್ದು, ಸೋಮವಾರ 64 ಕೋಟಿ, ಮಂಗಳವಾರ 58 ಕೋಟಿ, ಬುಧವಾರ 49 ಕೋಟಿ ಹಾಗೂ ಗುರುವಾರ ಭಾರತದಲ್ಲಿ 53 ಕೋಟಿ ರೂ. ಗಳಿಸಿದೆ.

ಭಾರತದಲ್ಲಿ ಮೊದಲ ದಿನದಂದು ಒಟ್ಟು 145 ಕೋಟಿ ರೂ. (ನಿವ್ವಳ) ಗಳಿಸಿದೆ. ಧರ್‌ ಅವರ 2025ರ ಬ್ಲಾಕ್‌ಬಸ್ಟರ್‌ ಚಿತ್ರದ ಮುಂದುವರಿದ ಭಾಗವಾದ ಈ ಚಿತ್ರವು ಮಾರ್ಚ್‌ 19ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಸಿಂಗ್‌‍, ಆರ್‌.ಮಾಧವನ್‌‍, ಅರ್ಜುನ್‌ ರಾಂಪಾಲ್‌‍, ಸಂಜಯ್‌ ದತ್‌, ಸಾರಾ ಅರ್ಜುನ್‌ ಮತ್ತು ರಾಕೇಶ್‌ ಬೇಡಿ ನಟಿಸಿದ್ದಾರೆ. ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್‌ ಧರ್‌ ನಿರ್ಮಿಸಿದ್ದಾರೆ.

RELATED ARTICLES

Latest News