Sunday, April 12, 2026
Homeರಾಷ್ಟ್ರೀಯಮಾ.30ರಂದು ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜಿನಾಮೆ…?

ಮಾ.30ರಂದು ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜಿನಾಮೆ…?

Nitish Kumar likely to quit as Bihar CM and resign as MLC on March 30

ಪಾಟ್ನಾ, ಮಾ.27: ಹೊಸ ಬೆಳವಣಿಗೆಯಲ್ಲಿ ರಾಷ್ಟ ರಾಜಕಾರಣಕ್ಕೆ ಮರಳಿ ರಾಜ್ಯಸಭೆಗೆ ಆಯ್ಕೆಯಾಗಿರುವ ನಿತೀಶ್‌ ಕುಮಾರ್‌ ಅವರು ಮಾರ್ಚ್‌ 30ರಂದು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕಳೆದ ಮಾರ್ಚ್‌ 16 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಗೆಲುವು ಸಾಧಿಸಿದ್ದರು.ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಸಾಧ್ಯವಿಲ್ಲ,14 ದಿನಗಳಲ್ಲಿ ಒಂದು ಸ್ಥಾನವನ್ನು ತ್ಯಜಿಸುವುದು ಕಡ್ಡಾಯ ಹಾಗಾಗಿ ತಮ ಸಿಎಂ ಸ್ಥಾನವನ್ನು ತ್ಯಜಿಸುವುದು ಅನಿವಾರ್ಯ.

ಎರಡು ದಶಕಗಳ ಕಾಲ ಬಿಹಾರದ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಿತೀಶ್‌‍, ಕೇಂದ್ರ ರಾಜಕೀಯಕ್ಕೆ ಮರಳಲು ನಿರ್ಧರಿಸಿದ್ದಾರೆ. ರಾಜ್ಯಸಭೆಗೆ ಹೋಗುತ್ತಿರುವಾಗ, ಬಿಹಾರದಲ್ಲಿ ತಮ್ಮ ರಾಜಕೀಯ ಹಿಡಿತವನ್ನು ಹಾಗೇ ಉಳಿಸಿಕೊಳ್ಳಲು ಬಿಹಾರದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಉದ್ಘಾಟಿಸುತ್ತಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ರಾಜೀನಾಮೆ ನೀಡಿದ ನಂತರ, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಹೊಸ ಸರ್ಕಾರ ರಚನೆಯಾದರೆ ,ನಿತೀಶ್‌ ಕುಮಾರ್‌ ತಮ ರಾಜಕೀಯ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ.

21 ವರ್ಷಗಳ ಹಿಂದೆ ಸಂಸತ್‌ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಬಿಹಾರದ ಮುಖ್ಯಮಂತ್ರಿಯಾದರು ಮತ್ತು ಈಗ ರಾಜ್ಯಸಭೆಗಾಗಿ ತಮ್ಮ ಸ್ಥಾನವನ್ನು ತ್ಯಜಿಸಿದ್ದರು. ಜಾಣೆಯಿಂದ ತಮ ಪುತ್ರ ನಿಶಾಂತ್‌ ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸುವುದರ ಜೊತೆಗೆ ಬಿಹಾರದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಾ ತಮ ಚಾಪು ವೃದ್ದಿಸಿದ್ದಾರೆ.

ಬಿಜೆಪಿ ಬಿಹಾರದ ಮುಖ್ಯಮಂತ್ರಿಯಾದರೆ, ಜೆಡಿಯು ಉಪಮುಖ್ಯಮಂತ್ರಿ ಸ್ಥಾನವನ್ನು ನಿತೀಶ್‌ ಕುಮಾರ್‌ ಅವರ ಪುತ್ರ ನಿಶಾಂತ್‌ ಅಲಂಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

RELATED ARTICLES

Latest News