ಮೇಲುಕೋಟೆ,ಮಾ.27- ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟಧಾರಣೆಗಾಗಿ ಮೇಲುಕೋಟೆ ಸಜ್ಜುಗೊಂಡಿದೆ. ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡುತ್ತಿದ್ದು ವಿವಿಧ ರಾಜ್ಯಗಳಿಂದ ತಂಡೋಪತಂಡವಾಗಿ ಮೇಲುಕೋಟೆಗೆ ಬಂದಿಳಿಯುತ್ತಿದ್ದಾರೆ.
ಜಿಲ್ಲಾಡಳಿತ ಹಲವು ಸಭೆಗಳನ್ನು ಮಾಡಿ ಜಿಲ್ಲಾಮಟ್ಟದ ಅ ಕಾರಿಗಳಿಗೆ ವಿವಿಧ ಜವಾಬ್ದಾರಿಯನ್ನು ವಹಿಸಿದೆ. ಮೇಲುಕೋಟೆಯ ಕಲ್ಯಾಣಿ ರಾಜಬೀದಿ ದೇವಾಲಯ ಉತ್ಸವ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಮತ್ತಷ್ಟು ಅಚ್ಚುಕಟ್ಟು ಮಾಡುವ ಕೆಲಸ ಭರದಿಂದ ಸಾಗಿದೆ.
ಮಹೋತ್ಸವದಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಹಾಗೂ ಪೊಲೀಸ್ ಭದ್ರತೆ ಹಾಗೂ ವೈರಮುಡಿ ಉತ್ಸವವನ್ನು ನಿರ್ವಹಿಸುವ ದೇವಾಲಯದ ಸಿಬ್ಬಂದಿಯ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತವಾದ ಮೀನ-ಚೈತ್ರಮಾಸದ ಪುಷ್ಯ ನಕ್ಷತ್ರದ ಶುಭದಿನವಾದ ನಾಳೆ ರಾತ್ರಿ ಚೆಲುವನಾರಾಯಣಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಉತ್ಸವ ನಡೆಯಲಿದೆ.
ವೈರಮುಡಿ ಉತ್ಸವ ರಾತ್ರಿ8ರಿಂದ ಆರಂಭವಾಗಿ ತಡರಾತ್ರಿ 4 ಗಂಟೆಯವರೆಗೆ ನಡೆಯಲಿದೆ. ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭವ್ಯಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತರರಾಗಿದ್ದಾರೆ ವೈರಮುಡಿ ರಾಜಮುಡಿ ತಿರುವಾಭರಣಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆಯಿಂದ ನಾಳೆ ಬೆಳಿಗ್ಗೆ 7ಕ್ಕೆ ಹೊರತಂದು ಮಂಡ್ಯದ ಲಕ್ಷ್ಮೀಜನಾರ್ಧನಸ್ವಾಮಿ ದೇವಾಲಯದಲ್ಲಿ ಪ್ರಥಮಪೂಜೆ ನೆರವೇರಿಸಲಾಗುತ್ತದೆ.ಶ್ರೀರಂಗಪಟ್ಟಣ ಮಾರ್ಗವಾಗಿ ಬರುವ ತಿರುವಾಭರಣಪೆಟ್ಟಿಗೆಗೆ ದಾರಿಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಮೇಲುಕೋಟೆಗೆ ಬಂದ ನಂತರ ಕಿರೀಟಗಳಿಗೆ ಯತಿರಾಜದಾಸರ್ ಗುರುಪೀಠದಲ್ಲಿ ಕೊನೆಯ ಪೂಜೆ ನಡೆದ ನಂತರ ದೇವಾಲಯ ಪ್ರವೇಶಿಸುತ್ತವೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮಾರ್ಗದರ್ಶನಲ್ಲಿ ವೈರಮುಡಿ ಉತ್ಸವಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾ ಕಾರಿ ಕುಮಾರ, ಪೊಲೀಸ್ ವರಿಷ್ಟಾ ಕಾರಿ ಶೋಭಾರಾಣಿ, ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಸೂಚನೆಯಂತೆ ಜಿಲ್ಲಾಡಳಿತದ ಅ ಕಾರಿಗಳ ತಂಡ ವೈರಮುಡಿ ಕಿರೀಟಧಾರಣ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಶ್ರಮಿಸುತ್ತಿದ್ದಾರೆ.
ಗಮನಸೆಳೆದ ಪ್ರವೇಶದ್ವಾರ :
ಇದೇ ಪ್ರಥಮಭಾರಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ಯೋಗನರಸಿಂಹಸ್ವಾಮಿ ಬೆಟ್ಟ ಭುವನೇಶ್ವರಿ ಮಂಟಪಗಳಿರುವ ಮಾದರಿಯಲ್ಲಿ ಲೈಂಟಿಂಗ್ ಸಮೇತವಾದ ಸ್ವಾಗತ ಕಮಾನುಗಳನ್ನು ಹಾಕುತ್ತಿರುವುದು ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಇಂದು ನಾಗವಲ್ಲೀ ಮಹೋತ್ಸವ :
ಪರಾಭವ ನಾಮ ಸಂವತ್ಸವರದ ವೈರಮುಡಿ ಬ್ರಹ್ಮೋತ್ಸವದ ಮೂರನೇ ತಿರುನಾಳ್ ದಿನವಾದ ಇಂದು ಮಧ್ಯಾಹ್ನ 3ಗಂಟೆಗೆ ನಾಗವಲ್ಲೀ ಉತ್ಸವ ಆರಂಭವಾಗಲಿದೆ. ಕಲ್ಯಾಣನಾಯಕಿ ಅಮ್ಮನವರೊಂದಿಗೆ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಚೆಲುವನಾರಾಯಣಸ್ವಾಮಿ ಉತ್ಸವ ಮೊದಲು ರಾಮಚಂದ್ರನ ಸಾನ್ನಿಧ್ಯವಿರುವ ಸೀತಾರಣ್ಯಕ್ಕೆ ನೆರವೇರಿಸಿದ ನಂತರ ಕಲ್ಯಾಣಿಗೆ ಬಿಜಯಮಾಡಿದ ನಂತರ ನಾಗವಲ್ಲೀ ನರಂದಾಳಿಕಾರೋಹಣ ನಡೆಯಲಿದೆ. 8 ಗಂಟೆಯ ವೇಳೆಗೆ ದೇವಾಲಯ ತಲುಪಲಿದೆ ರಾತ್ರಿ 9ರ ನಂತರ ಚಂದ್ರಮಂಡಲವಾಹನೋತ್ಸವ ನಡೆಯಲಿದೆ.
ಭಕ್ತರ ಸುರಕ್ಷತೆಗಾಗಿ 1500 ಮಂದಿ ಪೊಲೀಸರಿಂದ ಭದ್ರತೆ 24 ಗಂಟೆ ಕಟ್ಟೆಚ್ಚರ 64 ಸಿಸಿ ಟಿವಿ ಕಣ್ಗಾವಲು, ಶುಧ್ದ ಕುಡಿಯುವ ನೀರು ಮತ್ತು ನಿರಂತರಸ್ವಚ್ಛತೆ, ಅಚ್ಚುಕಟ್ಟಾದ ಬ್ಯಾರಕೇಡ್ ನಿರ್ಮಾಣ ಮಾಡಲಾಗಿದೆ.
ಬೆಂಗಳೂರು, ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ, ಮೈಸೂರು, ಹಾಸನದಿಂದ 150ವಿಶೇಷ ಬಸ್ ಸೌಕರ್ಯ ವೈರಮುಡಿಗೆ ಬರುವ ಭಕ್ತರ ವಾಹನಗಳಿಗೆ 26ಕಡೆ ವ್ಯವಸ್ಥಿತ ಪಾರ್ಕಿಂಗ್ , ದೇವಾಲಯದ ಆವರಣಗಳಿಗೆ ಆಕರ್ಷಕ ಪುಷ್ಪಾಲಂಕಾರ ವೈರಮುಡಿಯನ್ನು ಮಹಾರಾಜರು ವೀಕ್ಷಿಸುತ್ತಿದ್ದ ಸ್ಥಳದಲ್ಲಿ ನಯನ ಮನೋಹರ ಪುಷ್ಪಮಂಟಪ ನಿರ್ಮಾಣ , ಚೆಲುವನಾರಾಯಣನ ಉತ್ಸವಗಳಿಗೆ ವಿಶೇಷ ತೋಮಾಲೆ ಸೇವೆ. ವಿಶೇಷ ಮಂಗಳವಾದ್ಯ ತಂಡ ನಿಯೋಜನೆ ಮಾಡಲಾಗಿದೆ.
ಕಲ್ಯಾಣಿ, ಬೆಟ್ಟ, ದೇವಾಲಯ ಬಸ್‌ನಿಲ್ದಾಣ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರದ ಬಳಿ ಆಂಬುಲೆನ್‌್ಸ ನೊಂದಿಗೆ ವೈದ್ಯಕೀಯತಂಡಗಳು ಸಜ್ಜಾಗಿವೆ.ಎರಡನೇ ತೆಪ್ರೋತ್ಸವದಂದು ಲೇಸರ್ ಪ್ರದರ್ಶನ ಹಾಗೂ ತೆಪ್ರೋತ್ಸವ ,ಭರತನಾಟ್ಯ ಚಂಡೆವಾದನ ನಾದಸ್ವರ ವಾದನ ನಡೆಯಲಿದೆ.
ವೈರಮುಡಿ ಕಿರೀಟ ಪರಿಶೀಲನೆ ಪರಂಪರೆಯಿಲ್ಲ:ಶ್ರೀನಿವಾಸನರಸಿಂಹನ್‌ಗುರೂಜಿ
ಮೇಲುಕೋಟೆ,ಮಾ.27-ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟವನ್ನು ಪಾರ್ಕಾವಣೆಯ ವೇಳೆ ಪರಿಶೀಲನೆ ಮಾಡುವ ಪರಂಪರೆಯಿಲ್ಲ ಎಂದು ದೇವಾಲಯದ ಪಾರುಪತ್ತೇಗಾರ್ ಹಾಗೂ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್‌ಗುರೂಜಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ವೈರಮುಡಿ ಕಿರೀಟ ದರ್ಶನಕ್ಕೆ ಅವಕಾಶವಿದೆ. ಪ್ರತ್ಯೇಕವಾಗಿ ದರ್ಶನಮಾಡಬಹುದು ಎಂಬ ಭಾವನೆ ಬೆಳೆಸಿಕೊಂಡಿರುವ ಕಾರಣ ಪಾರ್ಕಾವಣೆಯ ವೇಳೆ ಗಣ್ಯಾತಿಗಣ್ಯರೇ ಮುಗಿಬಿದ್ದು ಭಾಗವಹಿಸುತ್ತಾರೆ. ಆದರೆ ಪಾರ್ಕಾವಣೆ ಎಂದರೆ ರಾಜಮುಡಿ ಮತ್ತು ಜೊತೆಗಿರುವ 16 ಬಗೆಯ ಆಭರಣಗಳನ್ನು ಜಿಲ್ಲಾ ಕಾರಿಗಳ ಸಮಕ್ಷಮ ಪರಿಶೀಲಿಸಿ ಸ್ಥಾನೀಕರು ಅರ್ಚಕ ಪರಿಚಾರಕರಿಗೆ ಹಸ್ತಾಂತರಿಸುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದರು.
2024ರಲ್ಲಿ ಜಿಲ್ಲಾ ಕಾರಿ ಡಾ.ಕುಮಾರ್ ರಾಜಮುಡಿ ಹಾಗೂ ಆಭರಣಗಳನ್ನು ಸಾಂಪ್ರದಾಯಿಕವಾಗಿ ಪರಿಶೀಲಿಸಲು ಅವಕಾಶ ನೀಡಿದ್ದು, ಯಾರೇ ಆಗಲಿ ಆಭರಣ ಪ್ರದರ್ಶಿಸುವುದನ್ನು ನಿಷೇದಿಸಿ ಪಾರ್ಕಾವಣೆಗೆ ಸಂಬಂಧಪಡದ ಯಾರಿಗೂ ಆಭರಣಗಳನ್ನು ನೀಡಬಾರದು ಎಂದು ಆದೇಶಿಸಿದ್ದಾರೆ. ಇದೇ ಮಾದರಿಯ ಪ್ರಕ್ರಿಯೆ ವೈರಮುಡಿ ಜಾತ್ರೆ ಮುಗಿದು ರಾಜಮುಡಿ ತಿರುವಾಭರಣಪೆಟ್ಟಿಗೆ ಮರಳಿಸುವ ಪ್ರಕ್ರಿಯೆಯೂ ನಡೆಯುತ್ತದೆಯಾದರೂ ಅಂದು ಯಾವುದೇ ಒತ್ತಡವಿಲ್ಲದೆ ಸರಳಪ್ರಕ್ರಿಯೆ ನಡೆಯುತ್ತದೆ ಎಂದಿದ್ದಾರೆ.
ವೈರಮುಡಿಯನ್ನು ನೇರವಾಗಿ ಬೆಳಕಿನಲ್ಲಿ ನೋಡುವ ಮತ್ತು ಪರಿಶೀಲಿಸುವ ಅವಕಾಶವಿಲ್ಲ. ಚೆಲುವನಾರಾಯಣನಿಗೆ ತೆರೆಯೊಳಗೆ ಸಣ್ಣದೀಪದ ಬೆಳಕಿನಲ್ಲಿ ವೈರಮುಡಿ ಧರಿಸಲಾಗುತ್ತದೆ. ಮಂಗಳಾರತಿಯವೇಳೆ ಸಂಪೂರ್ಣವೈರಮುಡಿಯನ್ನು ಅರ್ಚಕರು ಸ್ಥಾನೀಕರೂ ಸಹ ದರ್ಶನ ಮಾಡುವ ಸಂಪ್ರದಾಯವಿದೆ. ಸಾಕ್ಷಾತ್ ಭಗವಂತನ ಕಿರೀಟ ಎಂಬ ನಂಬಿಕೆಯೊಂದಿಗೆ ಸಾಂಪ್ರದಾಯಿಕ ಪರಂಪರೆಯನ್ನು ಕಾಪಾಡಿಕೊಂಡು ಬರಲಾಗಿದೆ ಎಂದಿದ್ದಾರೆ.
ನಾಣ್ಯ – ಹೂ ಎಸೆಯಬಾರದು :
ವೈರಮುಡಿಯಂದು ಅತ್ಯಮೂಲ್ಯ ಆಭರಣಗಳಿಂದ ಚೆಲುವನಾರಾಯಣನನ್ನು ಅಲಂಕರಿಸಲಾಗುತ್ತದೆ. ಈ ಕಾರಣ ಭಕ್ತರು ಉತ್ಸವದ ಮೇಲೆ ನಾಣ್ಯ, ಹೂವುಗಳನ್ನು ಎಸೆಯುವುದರಿಂದ ಸ್ವಾಮಿಯ ಅಲಂಕಾರ ಮರೆಯಾಗಿ ಭಕ್ತರಿಗೆ ದರ್ಶನ ಲಭ್ಯವಾಗುವುದಿಲ್ಲ. ಈ ಕಾರಣದಿಂದ ಭಕ್ತರು ವೈರಮುಡಿ ಉತ್ಸವದ ಮೇಲೆ ನಾಣ್ಯ ಮತ್ತು ಹೂಗಳನ್ನು ಎಸೆಯಬಾರದು. ಈ ಬಗ್ಗೆ ಉತ್ಸವಕ್ಕೂ ಮುನ್ನ ಮೈಕ್‌ನಲ್ಲಿ ಹಾಗೂ ಉತ್ಸವದ ವೇಳೆ ಪೊಲೀಸರೂ ಸಹ ಮೈಕ್ ಮೂಲಕ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಕಾರಿಗಳಿಗೆ, ಜಿಲ್ಲಾ ಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಪೊಲೀಸ್ ಕಣ್ಗಾವಲು :
ವಿಶ್ವಪ್ರಸಿದ್ಧ ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು ಯಾವುದೇ ಲೋಪವಾಗದಂತೆ ಮಂಡ್ಯಜಿಲ್ಲಾ ಪೊಲೀಸ್ ಕಟ್ಟೆಚ್ಚರವಹಿಸಲು 1500ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೈಸೂರು ವಿಭಾಗದ ಪೊಲೀಸ್ ಐಜಿ ಬೋರಲಿಂಗಯ್ಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾ ಕಾರಿ ಶೋಭಾರಾಣಿಯವರೊಂದಿಗೆ ಮೇಲುಕೋಟೆಗೆ ಭೇಟಿನೀಡಿ ವೈರಮುಡಿ ಉತ್ಸವ ನಡೆಯುವ ಸ್ಥಳ ಪಾರ್ಕಾವಣೆಯಾಗುವ ಸ್ಥಳ ಹಾಗೂ ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸಿ ಪೊಲೀಸ್ ಅ ಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದರು.
ವೈರಮುಡಿ ಕಿರೀಟಧಾರಣ ಮಹೋತ್ಸವದ ಭದ್ರತೆಗಾಗಿ ಹಿರಿಯ ಪೊಲೀಸ್ ಅ ಕಾರಿಗಳು, ಇನ್‌್ಸಪೆಕ್ಟರ್, ರ್ಯಾಪಿಡ್ ಪೋರ್ಸ, ಕ್ರಿಪ್ರಕಾರ್ಯಾಚರಣೆ ಪಡೆ ಸೇರಿದಂತೆ 1500 ಪೊಲೀಸ್ ಸಿಬ್ಬಂದಿ,ಹೋಮ್ ಗಾರ್ಡಗಳನ್ನು ನಿಯೋಜಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯ ವತಿಯಿಂದ 100ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಟಿವಿ ಕಣ್ಗಾವಲು ವಹಿಸಲಾಗುತ್ತಿದೆ. ಮೇಲುಕೋಟೆಯ ಸುತ್ತಮುತ್ತ ಖಾಸಗಿ ಬ್ಯಾನರ್ ಅಳವಡಿಸುವುದನ್ನು ಮತ್ತು ಮದ್ಯಮಾರಾಟವನ್ನು ನಿಷೇದಿಸಲಾಗಿದೆ. ವೈರಮುಡಿ ದಿನ ಹಾಗೂ ಬ್ರಹ್ಮೋತ್ಸವದ ದಿನಗಳಲ್ಲಿ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆಯನ್ನೂ ನಿಯಂತ್ರಿಸಲು ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಅಪರ ಪೊಲೀಸ್ ಅ ೕಕ್ಷಕರು ತಿಮ್ಮಯ್ಯ, ಶ್ರೀರಂಗಪಟ್ಟಣ ಡಿವೈಎಸ್‌ಪಿ ಯುಡಿ ಕೃಷ್ಣಕುಮಾರ್, ಪಾಂಡವಪುರ ಸರ್ಕಲ್ ಇನ್‌್ಸಪೆಕ್ಟರ್ ಶರತ್‌ಕುಮಾರ್ , ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಕೀಲ ಕಾಡೇನಹಳ್ಳಿ ಸತೀಶ್ ಕುಮಾರ್, ದೇವಾಲಯದ ಸಿಬ್ಬಂದಿ ಸೇರಿದಂತೆ ಹಲವು ಪೊಲೀಸ್ ಅ ಕಾರಿಗಳು ಭಾಗವಹಿಸಿದ್ದರು.
