Homeಅಂತಾರಾಷ್ಟ್ರೀಯಮತ್ತೆ ಭುಗಿಲೆದ್ದ ಸಂಘರ್ಷ : ಇರಾನ್‌ ಮೇಲೆ ಅಮೆರಿಕ ಭೀಕರ ದಾಳಿ, ಸೇನಾ ನೆಲೆಗಳು ಉಡೀಸ್

ಮತ್ತೆ ಭುಗಿಲೆದ್ದ ಸಂಘರ್ಷ : ಇರಾನ್‌ ಮೇಲೆ ಅಮೆರಿಕ ಭೀಕರ ದಾಳಿ, ಸೇನಾ ನೆಲೆಗಳು ಉಡೀಸ್

US Launches Mass Retaliatory Airstrikes on Iran Following Attacks in Strait of Hormuz

ವಾಷಿಂಗ್ಟನ್‌,ಜು.12- ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾಗಿರುವ ಹಾರ್ಮುಜ್‌ ಜಲಸಂಧಿಯಲ್ಲಿ ಭಾರೀ ಸಂಘರ್ಷ ಭುಗಿಲೆದ್ದಿದೆ. ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಪಡೆಗಳು ಸೈಪ್ರಸ್‌‍ ಧ್ವಜ ಹೊಂದಿರುವ ಎಂವಿ/ಜಿ ಎಸ್‌‍ಸಿ ಗ್ಯಾಲಕ್ಸಿ ಕಂಟೇನರ್‌ ಹಡಗಿನ ಮೇಲೆ ದಾಳಿ ನಡೆಸಿದ್ದು, ಪ್ರತಿಯಾಗಿ ಅಮೆರಿಕ ಇರಾನ್‌ನ ನೆಲೆಗಳ ಮೇಲೆ ತೀವ್ರ ವಾಯುದಾಳಿ ಆರಂಭಿಸಿದೆ.

ಇರಾನ್‌ ಸರ್ಕಾರವು ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಐಆರ್‌ಜಿಸಿ ಪಡೆಗಳು ನಡೆಸಿದ ದಾಳಿಯಿಂದಾಗಿ ಹಡಗಿನ ಎಂಜಿನ್‌ ಕೋಣೆಗೆ ಭಾರೀ ಹಾನಿಯಾಗಿದ್ದು ಹಡಗು ಸ್ಥಗಿತಗೊಂಡಿದೆ. ಈ ದಾಳಿಯಲ್ಲಿ ನಾಗರಿಕ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಅಧಿಕೃತವಾಗಿ ತಿಳಿಸಿದೆ.

ಈ ವಾರದಲ್ಲಿ ಇರಾನ್‌ ವಿರುದ್ಧ ಅಮೆರಿಕ ನಡೆಸುತ್ತಿರುವ ಮೂರನೇ ಸುತ್ತಿನ ದಾಳಿ ಇದಾಗಿದೆ.
ಈ ಕುರಿತು ಎಕ್‌್ಸ (ಟ್ವಿಟರ್‌) ನಲ್ಲಿ ಮಾಹಿತಿ ನೀಡಿರುವ ಸೆಂಟಕಾಮ್‌(ಸಿಎನ್‌ಟಿಸಿಒಎಂ) ವಾಣಿಜ್ಯ ನೌಕೆಗಳ ಮೇಲಿನ ದಾಳಿಯನ್ನು ತಡೆಯಲು ಇರಾನ್‌ಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಇರಾನ್‌ ಅದನ್ನು ನಿರ್ಲಕ್ಷಿಸಿದೆ. ನಾಗರಿಕ ನಾವಿಕರ ಸುರಕ್ಷತೆ ಮತ್ತು ಜಲಸಂಧಿಯ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಾವು ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್‌ ಹೆಗ್ಸೆತ್‌ ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದ್ದು, ಇರಾನ್‌ ಕಳಪೆ ಆಯ್ಕೆ ಮಾಡಿದೆ. ಈಗ ಅವರು ಇದರ ಬೆಲೆ ತೆರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಅಮೆರಿಕ ಪುನರುಚ್ಚರಿಸಿದೆ.
ಸೈಪ್ರಸ್‌‍ ಧ್ವಜವನ್ನು ಹೊಂದಿರುವ ಹಡಗಿನ ಮೇಲೆ ದಾಳಿ ನಡೆಸಿರುವುದು ಅಂತರಾಷ್ಟ್ರೀಯ ಕಡಲ ಕಾನೂನುಗಳ ಉಲ್ಲಂಘನೆಯಾಗಿದೆ. ಇದು ಈ ಭಾಗದಲ್ಲಿ ಹಡಗುಗಳ ಸಂಚಾರಕ್ಕೆ ದೊಡ್ಡ ಭದ್ರತಾ ಸವಾಲನ್ನು ಒಡ್ಡಿದೆ.

ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ನಂತರ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 28ರಂದು ತೊಡಗಿದ ಯುದ್ಧದಲ್ಲಿ ತಂದೆಯ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಇದು ನಮ ರಾಷ್ಟ್ರದ ಇಚ್ಛೆಯಾಗಿದೆ ಮತ್ತು ಅದನ್ನು ಖಂಡಿತವಾಗಿ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇರಾನ್‌ ಬೆದರಿಕೆಗಳಿಗೆ ಪ್ರತಿಕ್ರಿಯಿಸಿದರೆ ಸಾವಿರಾರು ಕ್ಷಿಪಣಿಗಳು ಹಾರುತ್ತವೆ ಎಂದು ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಕದನ ವಿರಾಮ ಮುಗಿದಿದೆ ಎಂದು ಟ್ರಂಪ್‌ ಘೋಷಿಸಿದ್ದರೂ ಮಾತುಕತೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.ಕಳೆದ ಎರಡು ದಿನಗಳ ದಾಳಿಗಳಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಮತ್ತು 115 ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ಇರಾನ್‌ ಮತ್ತು ಒಮಾನ್‌ ವಿದೇಶಾಂಗ ಮಂತ್ರಿಗಳ ನಡುವೆ ಜಲಸಂಧಿ ಬಗ್ಗೆ ಚರ್ಚೆ ನಡೆದಿದೆ. ತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ಮುಂದುವರಿಸುವುದಾಗಿ ಒಮಾನ್‌ ಹೇಳಿದೆ.ಅಮೆರಿಕವು ಇಂತಹ ಕೃತ್ಯಗಳನ್ನು ತಡೆಯಲು ಮತ್ತು ತನ್ನ ಮಿತ್ರರಾಷ್ಟ್ರಗಳ ಹಡಗುಗಳನ್ನು ರಕ್ಷಿಸಲು ಆ ಪ್ರದೇಶದಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚಿಸಿದೆ ಮತ್ತು ಇರಾನ್‌ ವಿರುದ್ಧ ಮಿಲಿಟರಿ ಪ್ರತಿಕ್ರಿಯೆ ನೀಡಿದೆ.

ಗಲ್‌್ಫ ರಾಷ್ಟ್ರಗಳಲ್ಲಿ ತುರ್ತು ಜಾಗೃತಿ
ಇರಾನ್‌ನ ಸಂಭಾವ್ಯ ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳ ಬೆದರಿಕೆಯ ಹಿನ್ನೆಲೆಯಲ್ಲಿ ಕುವೈತ್‌, ಕತಾರ್‌, ಬಹ್ರೇನ್‌ ಮತ್ತು ಯುಎಇ (ಂಇ) ದೇಶಗಳು ತಮ ಜಾಗತಿಕ ಹಾಗೂ ಆಂತರಿಕ ತುರ್ತು ಭದ್ರತಾ ಕ್ರಮಗಳನ್ನು ತಕ್ಷಣವೇ ಸಕ್ರಿಯಗೊಳಿಸಿವೆ.ಕೊಲ್ಲಿ ಪ್ರದೇಶದಲ್ಲಿರುವ ಹತ್ತಾರು ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಇದು ಈ ಭಾಗದಲ್ಲಿ ನಿಯೋಜನೆಗೊಂಡಿರುವ ಅಮೆರಿಕದ ಸೈನಿಕರು ಮತ್ತು ಆಸ್ತಿಪಾಸ್ತಿಗಳಿಗೆ ಭಾರಿ ಭದ್ರತಾ ಸವಾಲನ್ನು ತಂದೊಡ್ಡಿದೆ.

ಇರಾನ್‌ನ ಈ ಹೇಳಿಕೆಯು ಮುಂಬರುವ ದಿನಗಳಲ್ಲಿ ಪ್ರಾದೇಶಿಕ ರಾಜತಾಂತ್ರಿಕತೆ ಮತ್ತು ಭದ್ರತಾ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಲಿವೆ ಎಂಬುದರ ಸ್ಪಷ್ಟ ಮುನ್ಸೂಚನೆಯಾಗಿದೆ. ಅಮೆರಿಕದ ಹೊಸ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್‌ ಸಜ್ಜಾಗಿದೆ ಎಂಬುದನ್ನು ಇದು ತೋರಿಸುತ್ತದೆ.

RELATED ARTICLES

Latest News