Homeರಾಷ್ಟ್ರೀಯಬಂಗಾಳ ಕೊಲ್ಲಿಯಲ್ಲಿ 4.5 ತೀವ್ರತೆಯ ಭೂಕಂಪ ; ವಿಶಾಖಪಟ್ಟಣದಲ್ಲಿ ಕಂಪನ ಅನುಭವ

ಬಂಗಾಳ ಕೊಲ್ಲಿಯಲ್ಲಿ 4.5 ತೀವ್ರತೆಯ ಭೂಕಂಪ ; ವಿಶಾಖಪಟ್ಟಣದಲ್ಲಿ ಕಂಪನ ಅನುಭವ

4.5-magnitude earthquake in Bay of Bengal triggers mild tremors in Visakhapatnam

ವಿಶಾಖಪಟ್ಟಣ,ಜು.12- ಆಂಧ್ರಪ್ರದೇಶ ಕರಾವಳಿ ಸಮೀಪದ ಬಂಗಾಳ ಕೊಲ್ಲಿಯಲ್ಲಿ ಇಂದು ಮುಂಜಾನೆ ರಿಕ್ಟರ್‌ ಮಾಪಕದಲ್ಲಿ 4.5 ತೀವ್ರತೆಯ ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿದ್ದು, ವಿಶಾಖಪಟ್ಟಣದ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (ಇನ್‌ಕೋಯಿಸ್‌‍) ಮಾಹಿತಿ ಪ್ರಕಾರ, ಭೂಕಂಪವು ಬೆಳಿಗ್ಗೆ 5.46ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಬಂಗಾಳ ಕೊಲ್ಲಿಯಲ್ಲಿ ಕಾಕಿನಾಡ ಕರಾವಳಿಯಿಂದ ಸುಮಾರು 225 ಕಿಲೋಮೀಟರ್‌ ದೂರದಲ್ಲಿ, ಭೂಮಿಯ ಮೇಲೈಯಿಂದ 10 ಕಿಲೋಮೀಟರ್‌ ಆಳದಲ್ಲಿ ದಾಖಲಾಗಿದೆ.

ವಿಶಾಖಪಟ್ಟಣ ನಗರದ ಹಲವು ಪ್ರದೇಶಗಳಲ್ಲಿ ಸೌಮ್ಯ ಕಂಪನದ ಅನುಭವವಾಗಿದೆ ಎಂದು ತಿಳಿಸಲಾಗಿದೆ.ಭೂಕಂಪದಿಂದ ಯಾವುದೇ ಸಾವು-ನೋವು, ಆಸ್ತಿ ಹಾನಿ ಅಥವಾ ಇತರೆ ನಷ್ಟ ಸಂಭವಿಸಿರುವ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಂಪನದ ತೀವ್ರತೆ ಕಡಿಮೆಯಾಗಿದ್ದರಿಂದ ಸಾರ್ವಜನಿಕರಲ್ಲಿ ಯಾವುದೇ ಆತಂಕ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News