Homeರಾಜ್ಯಬಿಎಂಟಿಸಿ ವಿದ್ಯಾರ್ಥಿಗಳ ಬಸ್‌‍ ಪಾಸ್‌‍ ಅವಧಿ ವಿಸ್ತರಣೆ

ಬಿಎಂಟಿಸಿ ವಿದ್ಯಾರ್ಥಿಗಳ ಬಸ್‌‍ ಪಾಸ್‌‍ ಅವಧಿ ವಿಸ್ತರಣೆ

BMTC extends bus pass validity period for students

ಬೆಂಗಳೂರು,ಜು.12-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 2025-26ನೇ ಸಾಲಿನ ವೃತ್ತಿಪರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬಸ್‌‍ ಪಾಸ್‌‍ ಅವಧಿಯನ್ನು ವಿಸ್ತರಿಸಿದೆ.ವೃತ್ತಿಪರ ಪದವಿ, ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಸೆಮಿಸ್ಟರ್‌ ತರಗತಿಗಳು, ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬಸ್‌‍ ಪಾಸ್‌‍ ಅವಧಿಯನ್ನು ವಿಸ್ತರಿಸುವಂತೆ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮನವಿ ಮಾಡಿವೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬಸ್‌‍ ಪಾಸ್‌‍ನ ಮಾನ್ಯತಾ ಅವಧಿ ಮುಕ್ತಾಯಗೊಂಡ ನಂತರ 1 ಅಥವಾ 2 ತಿಂಗಳ ಅವಧಿಗೆ ಬಸ್‌‍ ಅವಧಿಯನ್ನು ವಿಸ್ತರಿಸಲು ಕ್ರಮ ಕೈಗೊಂಡಿದೆ.ವಿಶ್ವವಿದ್ಯಾಲಯ, ಕಾಲೇಜುಗಳಿಂದ ಶೈಕ್ಷಣಿಕ ತರಗತಿ ನಡೆಯುವ ಬಗ್ಗೆ ಮತ್ತು ಪರೀಕ್ಷಾ ವೇಳೆಯ ಕುರಿತಂತೆ ದೃಢೀಕರಣ ಪಡೆದು ಬಸ್‌‍ ಪಾಸ್‌‍ ಮಾನ್ಯತಾ ಅವಧಿಯನ್ನು 100 ರೂ.ಗೆ ಸಂಸ್ಕರಣಾ ಶುಲ್ಕ ಪಡೆದು ಒಂದು ಅಥವಾ ಎರಡು ತಿಂಗಳು ವಿಸ್ತರಣೆ ಮಾಡಲು ಆದೇಶಿಸಿದೆ.

ಪಾಸ್‌‍ನ ಮಾನ್ಯತೆ ಅವಧಿ ವಿಸ್ತರಿಸಿ ರಶೀದಿಯಲ್ಲಿ ವಿದ್ಯಾರ್ಥಿ ಹೆಸರು, ಬಸ್‌‍ಪಾಸಿನ ಸಂಖ್ಯೆ ಹಾಗೂ ವಿಸ್ತರಿತ ಅವಧಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಕೆಂಪೇಗೌಡ ಬಸ್‌‍ ನಿಲ್ದಾಣದಲ್ಲಿ ಮಾತ್ರ ಬಸ್‌‍ಪಾಸ್‌‍ ಮಾನ್ಯತಾ ಅವಧಿ ವಿಸ್ತರಣಾ ಕಾರ್ಯವನ್ನು ನಿರ್ವಹಿಸಲಾಗುತ್ತದೆ. ವಿದ್ಯಾರ್ಥಿಗಳು ಬಸ್‌‍ಪಾಸ್‌‍ ಮತ್ತು ರಸೀದಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

RELATED ARTICLES
spot_img

Latest News