Thursday, April 30, 2026
Homeಅಂತಾರಾಷ್ಟ್ರೀಯಯುದ್ಧಭೂಮಿಗೆ ಹೌತಿಗಳ ಎಂಟ್ರಿ : ಮತ್ತಷ್ಟು ಭೀಕರತೆ ಪಡೆದುಕೊಳ್ಳುತ್ತಿರುವ ಮಧ್ಯ ಪ್ರಾಚ್ಯ ಸಂಘರ್ಷ

ಯುದ್ಧಭೂಮಿಗೆ ಹೌತಿಗಳ ಎಂಟ್ರಿ : ಮತ್ತಷ್ಟು ಭೀಕರತೆ ಪಡೆದುಕೊಳ್ಳುತ್ತಿರುವ ಮಧ್ಯ ಪ್ರಾಚ್ಯ ಸಂಘರ್ಷ

Israel flags first Yemen missile threat in expanding West Asia war

ದುಬೈ, ಮಾ.28- ಇರಾನ್‌ ಪ್ರದೇಶ ಯೆಮನ್‌ನಿಂದ ಇದೇ ಮೊದಲ ಬಾರಿಗೆ ನೇರವಾಗಿ ಇಸ್ರೇಲ್‌ ಮೇಲೆ ನೇರ ಕ್ಷಿಪಣಿ ದಾಳಿ ನಡೆದಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಈ ನಡುವೆ ಇಸ್ರೇಲ್‌ ಅಣುಸ್ಥಾವರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ, ಅತ್ತ ಅಮೆರಿಕಾ ಪಡೆಗಳು ಇರಾನ್‌ ಮೇಲೆ ದಾಳಿ ಮುಂದುವರೆಸಿವೆ. ಪ್ರತಿಕಾರವಾಗಿ ಇರಾನ್‌ ಸೌದಿ ಅರೆಬಿಯಾದಲ್ಲಿರುವ ಅಮೆರಿಕಾ ಸೇನಾ ನೆಲೆಯ ಮೇಲೆ ಕ್ಷಿಪ್ಪಣಿಗಳನ್ನು ಅಪ್ಪಳಿಸಿದೆ. 29ನೇ ದಿನದ ಯುದ್ಧ ಮತ್ತಷ್ಟು ಭೀಕರತೆ ಪಡೆದುಕೊಳ್ಳುತ್ತಿದೆ.


ಇರಾನ್‌ ಹಾಗೂ ಹಿಜ್ಬುಲ್ಲಾ ದಾಳಿಗಳು ಮುಂದುವರಿದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಶನಿವಾರ ಬೆಳಗ್ಗಿನವರೆಗೆ ಬೆರ್‌ ಶೆಬಾ, ಜೆರೂಸಲೇಮ್‌, ತೆಲ್‌ ಅವೀವ್‌ ಹಾಗೂ ವೆಸ್ಟ್‌ ಬ್ಯಾಂಕ್‌ ಪ್ರದೇಶಗಳಲ್ಲಿ ಹಾಗೂ ಇಸ್ರೇಲ್‌ನ ಪ್ರಮುಖ ಅಣು ಸಂಶೋಧನಾ ಕೇಂದ್ರದ ಸುತ್ತಮುತ್ತ ಸೈರನ್‌ಗಳು ಮೂರನೇ ಬಾರಿ ಮೊಳಗಿದವು.

ಟೆಹರಾನ್‌ ಬೆಂಬಲಿತ ಹೌತಿ ಬಂಡುಕೋರರು 2014ರಿಂದ ಯೆಮನ್‌ ರಾಜಧಾನಿ ಸನಾ ನಗರವನ್ನು ತಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಇಸ್ರೇಲ್‌ ಮೇಲಿನ ದಾಳಿಯ ಹೊಣೆಗಾರಿಕೆಯನ್ನು ಅವರು ತಕ್ಷಣ ಸ್ವೀಕರಿಸಿಲ್ಲ.ಸೌದಿ ಅರೇಬಿಯಾದೊಂದಿಗೆ ಹಲವು ವರ್ಷಗಳಿಂದ ನಾಜೂಕಿನ ಯುದ್ಧ ವಿರಾಮ ಇರುವ ಕಾರಣ, ಇದುವರೆಗೆ ಹೌತಿಗಳು ಯುದ್ಧದಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ.
ಇರಾನ್‌ ಬೆಂಬಲಿತ ಹೌತಿ ಸೇನಾ ವಕ್ತಾರ ಯಹ್ಯಾ ಸರೀ, ಅಮೆರಿಕ ಮತ್ತು ಇಸ್ರೇಲ್‌ ಮಿತ್ರ ರಾಷ್ಟ್ರಗಳು ಯುದ್ಧದಲ್ಲಿ ಭಾಗಿಯಾದರೆ ಅಥವಾ ಇರಾನ್‌ ವಿರುದ್ಧ ದಾಳಿ ಮುಂದುವರೆದರೆ ನೇರ ಸೈನಿಕ ಹಸ್ತಕ್ಷೇಪ ಸಾಧ್ಯ ಎಂದು ಎಚ್ಚರಿಸಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾಕ್‌ ಉಗ್ರ ದಾಳಿಗಳನ್ನು ತಡೆಯಲು ಸಹಕಾರ ಹೆಚ್ಚಿಸುವ ನಿರ್ಧಾರ ಕೈಗೊಂಡಿವೆ. ಇರಾನ್‌ ಬೆಂಬಲಿತ ಮಿಲಿಷಿಯಾ ಗುಂಪುಗಳು ಅಮೆರಿಕ ನೆಲೆಗಳ ಮೇಲೆ ಹಲವು ದಾಳಿಗಳನ್ನು ನಡೆಸಿವೆ.

ಕೆಂಪು ಸಮುದ್ರ ಸಾಗಾಟಕ್ಕೆ ಮತ್ತೆ ಆತಂಕ:
ಇಸ್ರೇಲ್‌‍ಹಮಾಸ್‌‍ ಯುದ್ಧದ ವೇಳೆ ಹೌತಿ ದಾಳಿಗಳಿಂದ ಕೆಂಪು ಸಮುದ್ರ ಮಾರ್ಗದ ವ್ಯಾಪಾರ ಈಗಾಗಲೇ ಅಸವ್ಯಸ್ತಗೊಂಡಿದೆ. ವರ್ಷಕ್ಕೆ ಸುಮಾರು 1 ಟ್ರಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳು ಈ ಮಾರ್ಗದ ಮೂಲಕ ಸಾಗುತ್ತಿದ್ದವು. 2023 ನವೆಂಬರ್‌ನಿಂದ 2025 ಜನವರಿವರೆಗೆ ಹೌತಿಗಳು 100ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದ್ದು, ಎರಡು ಹಡಗುಗಳು ಮುಳುಗಿ ನಾಲ್ವರು ನಾವಿಕರು ಮೃತಪಟ್ಟಿದ್ದರು.

ಹೌತಿಗಳು ಯುದ್ಧಕ್ಕೆ ಪ್ರವೇಶಿಸಿದರೆ ಜಾಗತಿಕ ಸಾಗಾಟ ವ್ಯವಸ್ಥೆಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ಹೋರ್ಮುಜ್‌ ಸಮುದ್ರ ಸಂಕುಲದ ಮೇಲೆ ಇರಾನ್‌ ನಿಯಂತ್ರಣ ಜಾಗತಿಕ ತೈಲ ಸರಬರಾಜಿಗೆ ಒತ್ತಡ ತಂದಿದೆ.


ಇರಾನ್‌ ಅಣು ಕೇಂದ್ರಗಳ ಮೇಲೆ ಇಸ್ರೇಲ್‌ ದಾಳಿ:
ಇರಾನ್‌ ವಿರುದ್ಧ ತನ್ನ ಸೈನಿಕ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್‌ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ಇರಾನ್‌ನ ಅಣು ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗಿದೆ. ಇರಾನ್‌ ಅಣುಶಕ್ತಿ ಸಂಸ್ಥೆಯ ಪ್ರಕಾರ ಅರಾಕ್‌ನ ಶಾಹಿದ್‌ ಖೊಂಡಾಬ್‌ ಹೆವಿ ವಾಟರ್‌ ಕಾಂಪ್ಲೆಕ್‌್ಸ ಹಾಗೂ ಯಜ್‌್ದ ಪ್ರಾಂತ್ಯದ ಅರ್ಡಕಾನ್‌ ಯೆಲ್ಲೋಕೆಕ್‌ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಹಾಗೂ ಕಿರಣ ಮಾಲಿನ್ಯ ಅಪಾಯವೂ ಕಂಡು ಬಂದಿಲ್ಲ ಎಂದು ಇರಾನ್‌ ಹೇಳಿದೆ.
ಇಸ್ರೇಲ್‌ ಸೇನೆ ಈ ದಾಳಿ ಇರಾನ್‌ನ ಅಣು ಯೋಜನೆಗೆ ದೊಡ್ಡ ಹೊಡೆತ ಎಂದು ಹೇಳಿದೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ದೊಡ್ಡ ಬೆಲೆ ತೆತ್ತಲೇಬೇಕಿದೆ ಎಂದು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌‍ ಅರಾಘ್ಚಿ ಎಚ್ಚರಿಕೆ ನೀಡಿದ್ದಾರೆ.


ಇಸ್ರೇಲ್‌ ನಗರಗಳಲ್ಲಿ ಸ್ಫೋಟಗಳು:
ಟೆೆಲ್‌ ಅವೀವ್‌ ಸೇರಿದಂತೆ ಹಲವು ನಗರಗಳಲ್ಲಿ ಶನಿವಾರ ಬೆಳಗ್ಗೆ ಭಾರೀ ಸ್ಫೋಟಗಳು ಕೇಳಿಬಂದಿವೆ. ಅಗ್ನಿಶಾಮಕ ದಳ 11 ದಾಳಿ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಇರಾನ್‌ ಕ್ಷಿಪಣಿ ದಾಳಿಯಲ್ಲಿ ಈಗಾಗಲೇ 52 ವರ್ಷದ ವ್ಯಕ್ತಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಟ್ರಂಪ್‌ನಿಂದ ಇಸ್ರೇಲ್‌‍ಸೌದಿ ಸಂಬಂಧಗಳಿಗೆ ಕರೆ:
ಮಿಯಾಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌, ಯುದ್ಧ ಅಂತ್ಯವಾದ ಬಳಿಕ ಇಸ್ರೇಲ್‌ ಮತ್ತು ಸೌದಿ ಅರೇಬಿಯಾ ನಡುವೆ ಸಂಬಂಧ ಸಾಮಾನ್ಯವಾಗಿ ಮುಂದುವರೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.ಆದರೆ ಪ್ಯಾಲೆಸ್ತೀನ್‌ ರಾಷ್ಟ್ರ ಸ್ಥಾಪನೆಗೆ ಸ್ಪಷ್ಟ ಮಾರ್ಗಸೂಚಿ ಬೇಕು ಎಂಬ ಸೌದಿ ಅರೇಬಿಯಾದ ನಿಲುವು ಇದಕ್ಕೆ ಅಡೆತಡೆಯಾಗಿದೆ.


ಯುದ್ಧ ನಿಲ್ಲಿಸಲು ರಾಜತಾಂತ್ರಿಕ ಪ್ರಯತ್ನ:
ಅಮೆರಿಕ 15 ಅಂಶಗಳ ಯುದ್ಧ ವಿರಾಮ ಪ್ರಸ್ತಾವವನ್ನು ಇರಾನ್‌ಗೆ ನೀಡಿದ್ದು, ಪಾಕಿಸ್ತಾನ ಮಧ್ಯವರ್ತಿತ್ವ ವಹಿಸಿದೆ. ಆದರೆ ಇರಾನ್‌ ಅದನ್ನು ತಿರಸ್ಕರಿಸಿ ತನ್ನ ಐದು ಅಂಶಗಳ ಪ್ರಸ್ತಾವವನ್ನು ಮುಂದಿಟ್ಟಿದೆ. ಏಪ್ರಿಲ್‌ 6ರೊಳಗೆ ಹೋರ್ಮುಜ್‌ ಮಾರ್ಗವನ್ನು ಸಂಪೂರ್ಣ ತೆರೆಯದಿದ್ದರೆ ಇರಾನ್‌ ಇಂಧನ ಘಟಕಗಳನ್ನು ಧ್ವಂಸ ಮಾಡುವ ಎಚ್ಚರಿಕೆಯನ್ನು ಟ್ರಂಪ್‌ ನೀಡಿದ್ದಾರೆ. ಯುದ್ಧದ ಪರಿಣಾಮವಾಗಿ ಅಮೆರಿಕ ಷೇರು ಮಾರುಕಟ್ಟೆ ಕುಸಿದಿದ್ದು, ತೈಲ ಬೆಲೆ ಏರಿಕೆಯಾಗುತ್ತಿದೆ.


ಯುದ್ಧ ತೀವ್ರತೆ ಹೆಚ್ಚಳ ಸಾವಿನ ಸಂಖ್ಯೆ ಏರಿಕೆ:
ಇರಾನ್‌ ಮತ್ತು ಲೆಬನಾನ್‌ನಲ್ಲಿ ಭಾರೀ ಹಾನಿ ಸಂಭವಿಸಿದೆ. ಇಸ್ರೇಲ್‌ನಲ್ಲಿ 19 ಮಂದಿ ಮೃತ ಪಟ್ಟಿದ್ದು, ಲೆಬನಾನ್‌ನಲ್ಲಿ 1,100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ 1,900ಕ್ಕೂ ಹೆಚ್ಚು ಮಂದಿ ಮೃತರಾಗಿದ್ದು, ಅಮೆರಿಕದ 13 ಸೈನಿಕರು ಸಾವನ್ನಪ್ಪಿದ್ದಾರೆ. ಸಂಘರ್ಷ ಮುಂದುವರಿದರೆ ಲಕ್ಷಾಂತರ ಜನರು ಸ್ಥಳಾಂತರಗೊಳ್ಳುವ ಸಂಕಷ್ಟ ಉಂಟಾಗಬಹುದು ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ.


ಅಮೆರಿಕಾ ನೆಲೆಗಳ ಮೇಲೆ ದಾಳಿ:
ಇರಾನ್‌ ಶುಕ್ರವಾರವೂ ಇಸ್ರೇಲ್‌ ಹಾಗೂ ಗಲ್ಫ್ ಅರಬ್‌ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕಾ ಸೈನಿಕ ನೆಲೆಯ ಮೇಲಿನ ದಾಳಿಯಲ್ಲಿ ಕನಿಷ್ಠ 10 ಅಮೆರಿಕ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಪ್ರಿನ್ಸ್ ಸುಲ್ತಾನ್‌ ಏರ್ಬೇಸ್‌‍ ಮೇಲೆ ನಡೆದ ದಾಳಿಯಿಂದ ಅಮೆರಿಕದ ಇಂಧನ ತುಂಬುವ ವಿಮಾನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಇಸ್ರೇಲ್‌ ಎಚ್ಚರಿಕೆ ದಾಳಿ ವಿಸ್ತರಣೆ ಸಾಧ್ಯ:
ಇರಾನ್‌ ವಿರುದ್ಧ ತನ್ನ ಸೈನಿಕ ದಾಳಿಯನ್ನು ಮತ್ತಷ್ಟು ವಿಸ್ತರಿಸುವುದಾಗಿ ಇಸ್ರೇಲ್‌ ಎಚ್ಚರಿಕೆ ನೀಡಿದೆ. ಇದೇ ವೇಳೆ ಅಮೆರಿಕ ಸೇನೆಯೂ ಇರಾನ್‌ ಮೇಲೆ ದಾಳಿಗಳನ್ನು ಮುಂದುವರೆಸಿದೆ.ಹೋರ್ಮುಜ್‌ ಸಮುದ್ರ ಕಣಿವೆಯನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಇರಾನ್‌ ಇಂಧನ ಘಟಕಗಳನ್ನು ಧ್ವಂಸ ಮಾಡುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಾತ್ಕಾಲಿಕವಾಗಿ ಮುಂದೂಡಿದ್ದು, ಮಾರ್ಗವನ್ನು ಮರುತೆರೆಯಲು ಏಪ್ರಿಲ್‌ 6ರವರೆಗೆ ಗಡುವು ವಿಸ್ತರಿಸಿದ್ದಾರೆ.


ನಾನು ಶಾಂತಿ ಸ್ಥಾಪಕ- ಟ್ರಂಪ್‌
ತಮ್ಮ ರಾಜಕೀಯ ಪರಂಪರೆ ಬಗ್ಗೆ ಪ್ರಶ್ನೆ ಕೇಳಿದಾಗ ಟ್ರಂಪ್‌, ನನ್ನನ್ನು ಮಹಾನ್‌ ಶಾಂತಿ ಸ್ಥಾಪಕ ಎಂದು ನೆನಪಿಸಿಕೊಳ್ಳಬೇಕು ಎನ್ನುವುದು ನನ್ನ ಆಶೆ. ನಾನು ನಿಜವಾಗಿಯೂ ಶಾಂತಿ ಸ್ಥಾಪಕನೆಂದು ನಂಬುತ್ತೇನೆ ಎಂದು ಹೇಳಿದ್ದಾರೆ.

ಯುದ್ಧ ಅಂತ್ಯವಾದರೆ ಆರ್ಥಿಕತೆ ವೇಗವಾಗಿ ಬೆಳೆಯಲಿದೆ
ಮಿಯಾಮಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್‌, ಇರಾನ್‌ ಯುದ್ಧ ಮುಗಿದ ಬಳಿಕ ಜಾಗತಿಕ ಆರ್ಥಿಕತೆ ರಾಕೆಟ್‌ ವೇಗದಲ್ಲಿ ಬೆಳೆಯಲಿದೆ ಎಂದು ಹೇಳಿದರು. ಷೇರು ಮಾರುಕಟ್ಟೆ ಕುಸಿತವನ್ನು ಅವರು ಕಡೆಗಣಿಸಿ ಮಾತನಾಡಿದರು.ಹೋರ್ಮುಜ್‌ ಸಮುದ್ರಸಂಕುಲವನ್ನು ಉಲ್ಲೇಖಿಸುವ ವೇಳೆ ಟ್ರಂಪ್‌ ಹಾಸ್ಯವಾಗಿ “ಸ್ಟ್ರೇಟ್‌ ಆಫ್‌ ಟ್ರಂಪ್‌” ಎಂದು ಹೇಳಿ ನಂತರ ತಿದ್ದುಕೊಂಡರು. ಅಮೆರಿಕ ಸೇನೆ ತನ್ನ ಗುರಿಗಳನ್ನು ಸಾಧಿಸುತ್ತಿದೆ ಎಂದೂ ಹೇಳಿದರು.


ಟೆಲ್‌ ಅವೀವ್‌ನಲ್ಲಿ ಕ್ಷಿಪಣಿ ದಾಳಿ ವ್ಯಕ್ತಿ ಸಾವು
ಇರಾನ್‌ ಕ್ಷಿಪಣಿ ದಾಳಿಯಲ್ಲಿ ತೆಲ್‌ ಅವೀವ್‌ನಲ್ಲಿ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ನಗರದಲ್ಲಿ 11 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.ಇರಾನ್‌ ರಾಜಧಾನಿ ಟೆಹರಾನ್‌ ಪೂರ್ವ ಭಾಗದಲ್ಲಿ ವಾಯುದಾಳಿಯ ನಂತರ ಭಾಗಶಃ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.


ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಖಂಡನೆ ರಷ್ಯಾ
ಮಧ್ಯಪ್ರಾಚ್ಯದಲ್ಲಿ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿರುವುದಾಗಿ ರಷ್ಯಾ ವಿಶ್ವಸಂಸ್ಥೆಗೆ ತಿಳಿಸಿದೆ. ಯುದ್ಧ ತಕ್ಷಣ ನಿಲ್ಲಿಸಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದೆ.

ಕ್ರೀಡಾ ತಂಡಗಳ ವಿದೇಶ ಪ್ರಯಾಣಕ್ಕೆ ಇರಾನ್‌ ನಿಷೇಧ
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ವೈರಿ ರಾಷ್ಟ್ರಗಳು ಎಂದು ಪರಿಗಣಿಸಿದ ದೇಶಗಳಿಗೆ ತನ್ನ ಕ್ರೀಡಾ ತಂಡಗಳು ಪ್ರಯಾಣಿಸುವುದನ್ನು ಇರಾನ್‌ ತಾತ್ಕಾಲಿಕವಾಗಿ ನಿಷೇಧಿಸಿದೆ.

RELATED ARTICLES

Latest News