Sunday, April 26, 2026
Homeಮನರಂಜನೆಅಣ್ಣಾವ್ರ ಸ್ಮಾರಕದ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಚೇತನ್‌ ವಿರುದ್ಧ ಮುಂದುವರೆದ ಆಕ್ರೋಶ

ಅಣ್ಣಾವ್ರ ಸ್ಮಾರಕದ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಚೇತನ್‌ ವಿರುದ್ಧ ಮುಂದುವರೆದ ಆಕ್ರೋಶ

Outrage continues against actor Chethan for his remarks about Dr Raj memorial

ಬೆಂಗಳೂರು,ಏ.26- ಪದಭೂಷಣ ಡಾ.ರಾಜ್‌ಕುಮಾರ್‌ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತಕ ಹೇಳಿಕೆ ಪೋಸ್ಟ್‌ ಮಾಡಿದ್ದ ನಟ ಚೇತನ್‌ ಅಹಿಂಸಾ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಗಡೀಪಾರಿಗೆ ಒತ್ತಾಯಿಸಿದ ನಡುವೆ ನಟ ಕೊನೆಗೂ ಕನ್ನಡಿಗರ ಕ್ಷಮೆ ಯಾಚಿಸಿದ್ದಾನೆ.

ಡಾ.ರಾಜ್‌ಕುಮಾರ್‌ರವರ 97ನೇ ಹುಟ್ಟುಹಬ್ಬ ಸಂಭ್ರಮಾಚರಣೆ ನಡುವೆ ವಿವಾದ ಸೃಷ್ಟಿಸಿದ್ದ ನಟ ಚೇತನ್‌ ಅಹಿಂಸಾ ವಿರುದ್ಧ ಹಲವರು ಟೀಕಾಪ್ರಹಾರ ನಡೆಸಿದ್ದರು. ಪದೇಪದೇ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡ ವಲು ವಿವಾದಾತಕ ಹೇಳಿಕೆಗಳನ್ನು ನೀಡುವ ಈತನನ್ನು ಗಡೀಪಾರು ಮಾಡಬೇಕೆಂದು ಒತ್ತಾಯಿಸಿದ್ದು, ಈ ನಡುವೆ ಡಾ.ರಾಜ್‌ಕುಮಾರ್‌ ಅಭಿಮಾನಿ ಗಳ ಸಂಘದ ಸಾ.ರಾ.ಗೋವಿಂದು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸೇರಿದಂತೆ ನೂರಾರು ಮಂದಿ ಚೇತನ್‌ ನಿವಾಸಕ್ಕೆ ಮುತ್ತಿಗೆ ಹಾಕಿದ ವೇಳೆ ನಟ ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದಾನೆ.

ಡಾ.ರಾಜ್‌ಕುಮಾರ್‌ ಸಂಘದ ಅಧ್ಯಕ್ಷರಾಗಿದ್ದ ಸಾ ರಾ ಗೋವಿಂದು ಅವರು ಚೇತನ್‌ ಕ್ಷಮಯಾಚನೆಗೆ ಲಾಯಕ್ಕಲ್ಲ. ಅವನಿಗೆ ಯಾವುದೇ ಯೋಗ್ಯತೆ ಇಲ್ಲ. ಡಾ.ರಾಜ್‌ಕುಮಾರ್‌ರವರ ಕರ್ನಾಟಕದ ಕೊಡುಗೆ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರವಿಲ್ಲ. ಅವನು ಎಷ್ಟು ಸಿನಿಮಾ ಮಾಡಿದ್ದಾನೆ?, ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಿದ್ದೀಯಾ.

ನೀನು ಮೇರು ನಟರ ಬಗ್ಗೆ ಮಾತನ್ನಾಡುತ್ತೀಯ. ನೀನೊಬ್ಬ ನಿರುದ್ಯೋಗಿ. ಕೈಯಲ್ಲಿ ಮಾಡುವುದಕ್ಕೆ ಕೆಲಸ ಇಲ್ಲ. ಮೊದಲು ಕೆಲಸ ಹುಡುಕಿಕೋ. ನಾವೂ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು. ಅಣ್ಣಾವ್ರ ಸಾರಕದ ಜಾಗ ನಮಗೆಲ್ಲ ದೇವಸ್ಥಾನ. ಸಾರಕವನ್ನು ಕಾಂಪ್ಲೆಕ್‌್ಸ ಅಂತೀಯಲ್ಲ ಅಲ್ಲಿ ಯಾವ ಕಮರ್ಷಿಯಲ್‌ ಆಕ್ಟಿವಿಟೀಸ್‌‍ ನಡೆಯುತ್ತಿದೆ ಎಂದು ಸಾ ರಾ ಗೋವಿಂದು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳ ಒತ್ತಡ ಜಾಸ್ತಿಯಾದ ಬೆನ್ನಲ್ಲೇ ಚೇತನ್‌ ಅಹಿಂಸಾ ಕ್ಷಮೆ ಕೇಳಿದ್ದಾನೆ.

ನನ್ನ ಮಾತುಗಳಿಂದ ಕನ್ನಡಿಗರ ಮತ್ತು ಡಾ.ರಾಜ್‌ ಕುಮಾರ್‌ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನಾನೂ ಕೂಡ ಡಾ. ರಾಜ್‌ ಕುಮಾರ್‌ ಅವರ ಅಭಿಮಾನಿ. ಆದರೆ ಸಮಾಜದಲ್ಲಿ ಜಾಗೃತಿಯಾಗಬೇಕು. ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು. ರಾಜ್‌ ಕುಮಾರ್‌ ಅವರು ಕಂಡ ಕನಸಿನ ಚಿತ್ರರಂಗವನ್ನು ನಾವೂ ಕೂಡ ಕಟ್ಟಬೇಕು. ಅದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾನೆ.

ನಿರ್ಮಾಪಕರ ಸಂಘ ಆಕ್ರೋಶ : ಸಾಮಾಜಿಕ ಜಾಲತಾಣದಲ್ಲಿ ಚೇತನ್‌ ಅಹಿಂಸಾಗೆ ಬುದ್ದಿ ಇಲ್ಲ, ಕನ್ನಡಿಗರನ್ನು ಕೆಣಕುವ ಮಾತನ್ನಾಡಿದ್ದು, ಮುಂದೆ ಈ ರೀತಿ ನಡೆದುಕೊಂಡರೆ ಅವನಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ನಿರ್ಮಾಪಕರ ಸಂಘ ಎಚ್ಚರಿಸಿದೆ.ಒಬ್ಬ ಮೇರು ನಟನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಯಿಂದಿರಬೇಕು. ಇಲ್ಲದಿದ್ದರೆ ಅವರಿಗೆ ಅಭಿಮಾನಿಗಳೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.ಕೂಡಲೇ ರಾಜ್ಯಸರ್ಕಾರ ಈತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ ಒತ್ತಾಯಿಸಿದ್ದಾರೆ.

ನಟ ಚೇತನ್‌ ವಿರುದ್ಧ ಕ್ರಮಕ್ಕೆ ಚಾಲುಕ್ಯ ಡಾ.ರಾಜ್‌ಕುಮಾರ್‌ ಟ್ರಸ್ಟ್‌ ಆಗ್ರಹ
ವರನಟ, ಪದಭೂಷಣ ಡಾ.ರಾಜ್‌ಕುಮಾರ್‌ ಅವರ ಸಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತಕ ಹೇಳಿಕೆ ನೀಡಿರುವ ನಟ ಚೇತನ್‌ ಅಹಿಂಸಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಾಲುಕ್ಯ ಡಾ.ರಾಜ್‌ಕುಮಾರ್‌ ಟ್ರಸ್ಟ್‌ ಒತ್ತಾಯಿಸಿದೆ.

ನಟ ಚೇತನ್‌ ಅವರು ತಾವು ನೀಡಿರುವ ಹೇಳಿಕೆ ಬಗ್ಗೆ ಕ್ಷಮೆ ಕೇಳಿದರೆ ಸಾಲದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಟ್ರಸ್ಟ್‌ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ವಿ.ಸುರೇಶ್‌ ಮತ್ತು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ ಕನ್ನಡದ ಕಲಾ ಲೋಕವನ್ನು ವಿಶ್ವಕ್ಕೆ ಪಸರಿಸಿದ ಡಾ.ರಾಜ್‌ಕುಮಾರ್‌ ಅವರ ಅಭಿನಯ ಅಜರಾಮರವಾಗಿದೆ. ಅವರ ನೆನಪನ್ನು ಸ್ಥಿರಸ್ಥಾಯಿಗೊಳಿಸಲು ಕಂಠೀರವ ಸ್ಟುಡಿಯೋದಲ್ಲಿ ಪುಣ್ಯಭೂಮಿಯನ್ನು ನಿರ್ಮಿಸಲಾಗಿದೆ. ಆದರೆ ನಟ ಚೇತನ್‌ನಂತಹ ವಿಕೃತ ಮನೋಭಾವದವರು ಅದರ ವಿರುದ್ಧ ಹೇಳಿಕೆ ನೀಡಿ ಪ್ರಚಾರಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿರುವುದು ಖಂಡನೀಯ.

ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಂಥವರು ಮತ್ತೆ ಹೇಳಿಕೆಗಳನ್ನು ನೀಡಲು ಮುಂದಾಗುತ್ತಾರೆ. ಅಂಥವರಿಗೆ ಎಚ್ಚರಿಕೆಯ ಗಂಟೆಯಾಗಬೇಕೆಂದರೆ ಚೇತನ್‌ ನಂತವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್‌ಕುಮಾರ್‌ ಅವರ ಅಭಿಮಾನಿ ಸಂಘಗಳು ರಾಜ್ಯಾದ್ಯಂತ ಸಾವಿರಾರು ಇವೆ. ಸಾವಿರಾರು ಪ್ರತಿಮೆಗಳನ್ನು ನಿರ್ಮಿಸಿ ಅವರ ಅಭಿಮಾನಿಗಳು ಆರಾಧಿಸುತ್ತಿದ್ದಾರೆ.

ಅವರಿಗೆ ಜಾಗ ಬೇಕೆಂದಿದ್ದರೆ ಅವರ ಅಭಿಮಾನಿಗಳೇ ಕೊಡಲು ಸಿದ್ದರಿದ್ದರು. ಆದರೆ ಸರ್ಕಾರ ಗೌರವಾರ್ಥ ಜಾಗ ಕೊಟ್ಟು ಸಾರಕ ನಿರ್ಮಿಸಿದೆ. ನಟ ಚೇತನ್‌ನಂತವರು ಕ್ಷುಲ್ಲಕ ಹೇಳಿಕೆಗಳನ್ನು ನೀಡಿ ವಿವಾದ ಹುಟ್ಟು ಹಾಕುತ್ತಿರುವುದು ಸಹಿಸಲು ಅಸಾಧ್ಯ. ಅವರ ಕ್ಷಮೆ ಯಾರಿಗೂ ಬೇಕಾಗಿಲ್ಲ. ಅವರ ವಿರುದ್ಧ ಕ್ರಮಕೈಗೊಂಡು ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದ್ದಾರೆ.

RELATED ARTICLES

Latest News