ನವದೆಹಲಿ, ಮೇ.2- ದೇಶದಲ್ಲಿ ಇದೀಗ ಸೂಪರ್ ಎಲ್ ನಿನೋ ಭೀತಿ ಕಾಡಲಾರಂಭಿಸಿದೆ. ಬಿರುಬೇಸಿಗೆಗೆ ಜನರು ಈಗಾಗಲೇ ತತ್ತರಿಸಿದ್ದಾರೆ. ಇದರ ನಡುವೆ ಭೀಕರ ಬರಗಾಲ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಜೊತೆಗೆ ರಣ ಬಿಸಿಲಿನ ಮಧ್ಯೆಯು ಜನರಿಗೆ ಈ ಸೂಪರ್ ಎಲ್ ನಿನೋ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ಸೂಪರ್ ಎಲ್ ನಿನೋ ಎಂಬುದು ಒಂದು ಹವಾಮಾನ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಮಹಾಸಾಗರದ ನೀರಿನ ತಾಪಮಾನ ಹೆಚ್ಚಾಗುವುದರೊಂದಿಗೆ ಈ ಎಲ್ ನಿನೋ ಉದ್ಭವಿಸುತ್ತದೆ. ಈ ತಾಪಮಾನ ಹೆಚ್ಚಾದಾಗ ಜಗತ್ತಿನ ವಿವಿಧ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಎಲ್ ನಿನೋ ಹೆಚ್ಚಿನ ತಾಪಮಾನವನ್ನು ಉಂಟುಮಾಡುತ್ತದೆ.
ಆದರೆ ಸೂಪರ್ ಎಲ್ ನಿನೋ ಅದಕ್ಕಿಂತ ಹೆಚ್ಚಿನ ತಾಪಮಾನ ಉಂಟು ಮಾಡಿ, ಸಮುದ್ರದ ನೀರನ್ನು ತೀವ್ರವಾಗಿ ಬಿಸಿ ಮಾಡುತ್ತದೆ. ಆಗ ಜಗತ್ತಿನ ಮೇಲಾಗುವ ಪರಿಣಾಮ ತೀವ್ರವಾಗುತ್ತದೆ. ಇದನ್ನೇ ಸೂಪರ್ ಎಲ್ ನಿನೋ ಎನ್ನುತ್ತಾರೆ. ಎಲ್ ನಿನೋ ಉಂಟಾಗೋದು ಹೇಗೆ?ಸಾಮಾನ್ಯವಾಗಿ ಟ್ರೇಡ್ ವಿಂಡ್ಸ್ ಪಶ್ಚಿಮಕ್ಕೆ ಬೀಸುತ್ತದೆ.
ಟ್ರೇಡ್ ವಿಂಡ್ಸ್ ಎಂದರೆ ಸದಾ ಒಂದೇ ದಿಕ್ಕಿನಲ್ಲಿ ಬೀಸುವ ಗಾಳಿಯಾಗಿದೆ. ಗಾಳಿ ಬೀಸುವುದರಿಂದ ನೀರಿನ ಚಲನೆ ಉಂಟಾಗುತ್ತದೆ. ಆಗ ಹವಾಮಾನ ಹಾಗೂ ಮಳೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಎಲ್ ನಿನೋ ಸಮಯದಲ್ಲಿ ಈ ಗಾಳಿ ದುರ್ಬಲವಾಗಿ ಬೀಸುತ್ತವೆ.
ಎಲ್ ನಿನೋನಿಂದಾಗಿ ಸಮುದ್ರದ ತಾಪಮಾನ ಹೆಚ್ಚಾಗಿ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತದೆ.ಉಷ್ಣಾಂಶ ಹೆಚ್ಚಿಸಬಲ್ಲ ಹಾಗೂ ಮುಂಗಾರು ಮಾರುತಗಳಿಗೆ ಅಡ್ಡಿಪಡಿಸಬಲ್ಲ ನೈಸರ್ಗಿಕ ಹವಾಮಾನ ಮಾದರಿ ಸೂಪರ್ ಎಲ್‌ನಿನೋ ಇದೀಗ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಹವಾಮಾನ ಪರಿಸ್ಥಿತಿ ಮೇಲೆ ವಿಜ್ಞಾನಿಗಳು ನಿಗಾ ಇಟ್ಟಿದ್ದಾರೆ.
ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫೋರ್‌ಕಾಸ್ಟ್ ಪ್ರಕಾರ, ಈ ಬಾರಿ ಎಲ್-ನಿನೋ ಕಳೆದ 1 ಶತಮಾನದಲ್ಲೇ ಅತ್ಯಂತ ಪ್ರಬಲಗೊಂಡು ಹೊರಹೊಮ್ಮುವ ಆತಂಕವಿದೆ. 2026 ಉತ್ತರಾರ್ಧದಿಂದಲೇ ಆರ್ಭಟ ಶುರುವಾಗಬಹುದು. ಗರಿಷ್ಠ ತಾಪಮಾನ ಮುರಿದು ಹೊಸ ದಾಖಲೆ ಸೃಷ್ಟಿಸಬಹುದೆಂದು ಹೇಳಲಾಗುತ್ತಿದೆ. ಹೀಗಾಗಿ, ಭಾರತ ಸೇರಿದಂತೆ ಏಷ್ಯಾದ ದೇಶಗಳು ಇದರ ಹೊಡೆತಕ್ಕೆ ಸಿಲುಕಲಿವೆ.
ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳ ಪ್ರಕಾರ ಕೆಲವು ಮಾಡೆಲ್‌ಗಳು ಇದನ್ನು ಗಾಡ್ಜಿಲ್ಲಾ ಎಲ್‌ನಿನೋ ಎಂದು ಕರೆಯಲಾಗುತ್ತದೆ.
