Saturday, May 2, 2026
Homeಅಂತಾರಾಷ್ಟ್ರೀಯಮರಗಳಿಗೆ ಸಣ್ಣ ವಿಮಾನ ಅಪ್ಪಳಿಸಿ ಐವರು ಪಿಕಲ್‌ ಆಟಗಾರರ ಸಾವು

ಮರಗಳಿಗೆ ಸಣ್ಣ ವಿಮಾನ ಅಪ್ಪಳಿಸಿ ಐವರು ಪಿಕಲ್‌ ಆಟಗಾರರ ಸಾವು

Five dead after plane goes down amongst trees in Texas with no survivors

ಆಸ್ಟಿನ್‌, ಮೇ.2- ಪಿಕಲ್‌ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ವಿಂಬರ್ಲಿ ಬಳಿ ಮರಗಳಿಗೆ ಡಿಕ್ಕಿ ಹೊಡೆದ ದುರ್ಘಟನೆಗೆ ಐವರು ಬಲಿಯಾಗಿದ್ದಾರೆ.ಸೆಸ್ನಾ 421 ವಿಮಾನವು ಅಮರಿಲ್ಲೊದಿಂದ ಹೊರಟು ನ್ಯೂ ಬ್ರೌನ್‌ಫೆಲ್ಸ್‌‍ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಆಸ್ಟಿನ್‌ನಿಂದ ನೈಋತ್ಯಕ್ಕೆ ಸುಮಾರು 40 ಮೈಲುಗಳಷ್ಟು ದೂರದಲ್ಲಿರುವ ವಿಂಬರ್ಲಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ವಿಮಾನವು ಅರಣ್ಯ ಪ್ರದೇಶದಲ್ಲಿ ನಾಶವಾಗಿರುವುದನ್ನು ದೃಶ್ಯದ ಚಿತ್ರಗಳು ವೈರಲ್‌ ಆಗಿವೆ. ಪೈಲಟ್‌ ಮತ್ತು ವಿಮಾನದಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಹೆಸರನ್ನು ಬಹಿರಂಗಪಡಿಸಿಲ್ಲ. ಆಟಗಾರರು ನ್ಯೂ ಬ್ರೌನ್‌ಫೆಲ್ಸ್ ನ ಕ್ರ್ಯಾಂಕಿ ಪಿಕಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.

ಇದೀಗ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದ್ದು, ಸಂಘಟಕರು ಸಂತ್ರಸ್ತರಿಗೆ ಗೌರವ ಸಲ್ಲಿಸಲು ತೀರ್ಮಾನಿಸಿದ್ದಾರೆ. ಅಮರಿಲ್ಲೊದಿಂದ ಅದೇ ಕಾರ್ಯಕ್ರಮಕ್ಕೆ ಪ್ರಯಾಣಿಸುತ್ತಿದ್ದ ಮತ್ತೊಂದು ವಿಮಾನವು ನ್ಯೂ ಬ್ರೌನ್‌ಫೆಲ್ಸ್ ನಲ್ಲಿ ಸುರಕ್ಷಿತವಾಗಿ ಇಳಿದಿದೆ.

ಒಬ್ಬ ಪೈಲಟ್‌ ವಿಮಾನ ಪತನಗೊಳ್ಳುವ ಮೊದಲು ಅದರಿಂದ ತೊಂದರೆಯ ಸಂಕೇತವನ್ನು ಸ್ವೀಕರಿಸಿದ್ದಾಗಿ ವರದಿ ಮಾಡಿದ್ದಾರೆ.ಅಪಘಾತಕ್ಕೂ ಮುನ್ನ ಈ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿತ್ತು. ನಂತರ ರಾಷ್ಟ್ರೀಯ ಹವಾಮಾನ ಸೇವೆಯು ಗುಡುಗು ಸಹಿತ ಮಳೆಯಾಗಿದೆ ಎಂದು ವರದಿ ಮಾಡಿತ್ತು. ವಿಂಬರ್ಲಿ ಮತ್ತು ನ್ಯೂ ಬ್ರೌನ್‌ಫೆಲ್ಸ್‌‍ ಟೆಕ್ಸಾಸ್‌‍ ಹಿಲ್‌ ಕಂಟ್ರಿಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.

RELATED ARTICLES

Latest News