Homeಮನರಂಜನೆಡಾಲಿ ಈಗ ಡ್ಯಾಡಿ : ಗಂಡು ಮಗುವಿನ ತಂದೆಯಾದ ನಟ ಧನಂಜಯ್‌

ಡಾಲಿ ಈಗ ಡ್ಯಾಡಿ : ಗಂಡು ಮಗುವಿನ ತಂದೆಯಾದ ನಟ ಧನಂಜಯ್‌

Actor Dhananjaya Blessed With Baby Boy; Shares Heartwarming First Photo

ಬೆಂಗಳೂರು, ಮೇ 2- ಡಾಲಿ ಧನಂಜಯ್‌ ಅವರ ಪತ್ನಿ ಡಾ. ಧನ್ಯತಾ ಅವರು ಗಂಡು ಮಗುವಿಗೆ ಜನ ನೀಡಿದ್ದಾರೆ.ನಟ ರಾಕ್ಷಸ ಧನಂಜಯ್‌ ಅವರು ತಮ ಮಗನ ಪುಟ್ಟ ಕೈ ಫೋಟೋವನ್ನು ತಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ತಮ ನೆಚ್ಚಿನ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಡಾಲಿ ಧನಂಜಯ್‌ ಅವರು ತಾವು ತಂದೆಯಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ಅವರ ಮನೆಗೆ ಗಂಡು ಮಗುವಿನ ಆಗಮನವಾಗಿದೆ.

ಡಾಲಿ ಧನಂಜಯ್‌ ತಮ ಪುತ್ರನ ಕೈನ ಫೋಟೋವನ್ನ ಶೇರ್‌ ಮಾಡಿ As the sun rose, so did our greatest joy, our baby boy. ನಿಮ (ಅಭಿಮಾನಿಗಳ) ಪ್ರೀತಿ, ಆಶೀರ್ವಾದವಿರಲಿ ಎಂದು ತಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಧನಂಜಯ್‌ ಅವರು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ಟಗರು ಸಿನಿಮಾದ ನಂತರ ಆ ಚಿತ್ರದ ಪಾತ್ರ (ಡಾಲಿ)ದ ಮೂಲಕವೇ ಗುರುತಿಸಿಕೊಂಡಿದ್ದಾರೆ. ಸದ್ಯ ಡಾಲಿ ಧನಂಜಯ್‌ ಪರಾಶಕ್ತಿ, ಅಣ್ಣ ಫ್ರಮ್‌ ಮೆಕ್ಸಿಕೋ, ಉತ್ತರಖಂಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

RELATED ARTICLES
spot_img

Latest News