Homeರಾಷ್ಟ್ರೀಯಮಹಾರಾಷ್ಟ್ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಬಾಲಕಿಯರದ್ದೇ ಮೇಲುಗೈ

ಮಹಾರಾಷ್ಟ್ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಬಾಲಕಿಯರದ್ದೇ ಮೇಲುಗೈ

Maharashtra Second PUC Results Declared: Girls dominate

ಪುಣೆ, ಮೇ 2:ಮಹಾರಾಷ್ಟ್ರ ರಾಜ್ಯ ಫ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಒಟ್ಟು ಉತ್ತೀರ್ಣ ಪ್ರಮಾಣ ಶೇ.89.79ಕ್ಕೆ ಏರಿಕೆಯಾಗಿದೆ.ರಾಜ್ಯ ಮಟ್ಟದಲ್ಲಿ ಈ ವರ್ಷವೂ ಬಾಲಕಿಯರು ಬಾಲಕರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ.

ಮಂಡಳಿಯ ಅಧ್ಯಕ್ಷ ತ್ರಿಗುಣ ಕುಲಕರ್ಣಿ ನೀಡಿದ ಮಾಹಿತಿಯಂತೆ, ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ. 93.15 ಶೇಕಡವಾಗಿದ್ದರೆ, ಬಾಲಕರದು ಶೇ.86.80 ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 14,44,713 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು,ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಪರೀಕ್ಷೆಗಳು ನಡೆದಿದ್ದವು. 14,33,058 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 12,86,843 ಮಂದಿ ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದಲ್ಲಿ ಕೊಂಕಣ ವಿಭಾಗವು ಶೇ.94.14 ಮೊದಲ ಸ್ಥಾನ ಪಡೆದಿದೆ. ನಂತರ ಪುಣೆ (91.25%), ಅಮರಾವತಿ (90.92%), ನಾಸಿಕ್‌ (90.72%), ಮುಂಬೈ (90.08%), ಕೊಲ್ಹಾಪುರ (89.97%), ಛತ್ರಪತಿ ಸಂಭಾಜಿನಗರ (88.68%) ಮತ್ತು ಲಾತೂರ್‌ (84.14%) ವಿಭಾಗಗಳು ಕ್ರಮವಾಗಿ ಸ್ಥಾನ ಪಡೆದಿವೆ.

ವಿಭಾಗವಾರು ವಿಷಯಗಳಲ್ಲಿ ಸೈನ್‌್ಸವಿಭಾಗವು 96.44 ಶೇಕಡದೊಂದಿಗೆ ಅತಿ ಹೆಚ್ಚು ಉತ್ತೀರ್ಣ ಪ್ರಮಾಣ ದಾಖಲಿಸಿದೆ. ಕಾಮರ್ಸ್‌ (87.03%), ವೃತ್ತಿಪರ (82.74%), ಐಟಿಐ (81.78%) ಮತ್ತು ಕಲಾ ವಿಭಾಗ (78.02%) ಕ್ರಮವಾಗಿ ಮುಂದಿವೆ.

RELATED ARTICLES
spot_img

Latest News