Thursday, May 14, 2026
Homeರಾಷ್ಟ್ರೀಯಮದ್ಯಪ್ರಾಚ್ಯ ಮುಂದುವರೆದ ಉದ್ವಿಗ್ನತೆ : ಭಾರತೀಯ ತೈಲ ಕಂಪೆನಿಗಳಿಗೆ ಸಂಕಷ್ಟ

ಮದ್ಯಪ್ರಾಚ್ಯ ಮುಂದುವರೆದ ಉದ್ವಿಗ್ನತೆ : ಭಾರತೀಯ ತೈಲ ಕಂಪೆನಿಗಳಿಗೆ ಸಂಕಷ್ಟ

Middle East tensions continue: Indian oil companies in trouble

ನವದೆಹಲಿ,ಮೇ 11- ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಕಚ್ಚಾತೈಲ ಹಾಗೂ ಅನಿಲ ಸಾಗಣೆಯಲ್ಲಿ ವ್ಯಾಪಕ ವ್ಯತ್ಯಯವುಂಟಾಗಿ ದಾಖಲೆ ಬೆಲೆ ಏರಿಕೆ ಆಗಿದ್ದು, ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ.

ಹಾರ್ಮುಜ್‌ ಜಲಸಂಧಿ ಮುಚ್ಚಿರುವ ಹಿನ್ನೆಲೆಯಲ್ಲಿ ಮತ್ತು ಅಮೇರಿಕಾ ವಿಧಿಸಿರುವ ನಿರ್ಬಂಧಗಳಿಂದಾಗಿ ಕಚ್ಛಾತೈಲ ಬೆಲೆ 105 ಡಾಲರ್‌ಗೆ ಏರಿಕೆ ಆಗಿರುವುದರಿಂದ ಭಾರತೀಯ ತೈಲ ಕಂಪನಿಗಳು ಭಾರಿ ಒತ್ತಡಕ್ಕೆ ಸಿಲುಕಿದೆ. ಅಂದಾಜಿನ ಪ್ರಕಾರ ಪ್ರತಿ ತಿಂಗಳು ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು 30 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ.

ತಜ್ಞರ ಪ್ರಕಾರ ಪ್ರತಿದಿನ 700-1000 ಕೋಟಿ ರೂ. ಹೊರೆಯಾಗುತ್ತಿದೆ. ಅಬಕಾರಿ ತೆರಿಗೆಯಲ್ಲಿ 10 ರೂ.ಗಳನ್ನು ಕಡಿತಗೊಳಿಸುವುದರಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 103 ರೂ. ತಲುಪಿದೆ. ಇನ್ನೂ ಖಾಸಗಿ ವಲಯದ ಪೆಟ್ರೋಲ್‌ ಪಂಪ್‌ಗಳ ಬೆಲೆ 112-130ಕ್ಕೆ ಏರಿಕೆಯಾಗಿ ಇದರಿಂದ ಗ್ರಾಹಕರ ಕೊರತೆ ಅನುಭವಿಸುತ್ತಿದೆ.

ದೇಶದಲ್ಲಿ ಪೆಟ್ರೋಲ್‌-ಡೀಸೆಲ್‌ ಅತ್ಯವಶ್ಯಕ ವಸ್ತು ಆಗಿದ್ದು, ಕುವೈತ್‌, ರಷ್ಯಾ ಸೇರಿದಂತೆ ತೈಲ ಉತ್ಪಾದನೆಯ ದೇಶಗಳನ್ನು ಭಾರತ ಸಂಪರ್ಕಿಸಿ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದೆ. ಆದರೂ ಪ್ರಸ್ತುತ ಸನ್ನಿವೇಶದಲ್ಲಿ ಪೆಟ್ರೋಲ್‌ ಬೆಲೆಯನ್ನು 25 ರೂ. ಹಾಗೂ ಡೀಸೆಲ್‌ ಬೆಲೆ 18 ರೂ.ಗಳಷ್ಟು ಏರಿಕೆಯಾಗಬೇಕೆಂದು ತೈಲ ಕಂಪನಿಗಳು ಬೇಡಿಕೆ ಮುಂದಿಟ್ಟಿದೆ.

ಆದರೆ ಭಾರತ ಸರ್ಕಾರ ಇನ್ನೂ ಕೆಲವು ದಿನಗಳು ಕಾಯುವಂತೆ ತೈಲ ಕಂಪನಿಗಳಿಗೆ ಸಲಹೆ ನೀಡಿದೆ. ಅಮೇರಿಕಾ-ಇರಾನ್‌ ನಡುವಿನ ಸಂಘರ್ಷ ಅಂತ್ಯಗೊಂಡು ಶಾಂತಿ ಸ್ಥಾಪನೆಗೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಒತ್ತಡ ಹೇರಿದೆ.

ಪ್ರಧಾನಿ ನರೇಂದ್ರ ಮೋದಿಯವರು ಚಿನ್ನ ಖರೀದಿ ಮತ್ತು ತೈಲ ಬಳಕೆಯನ್ನು ಮಿತವಾಗಿ ಬಳಸಿ ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲೂ ಕೂಡ ಸೆನ್ಸೆಕ್‌್ಸ ಇಳಿಕೆ ಕಂಡು ಬಂದಿದೆ. ಇಂದು ವಹಿವಾಟು ಆರಂಭಿಸುತ್ತಿದ್ದಂತೆ ಬಿಎಸ್‌‍ಸಿ 800 ಅಂಕ ಕುಸಿದಿದೆ. ಇದರ ನಡುವೆ ಜಪಾನ್‌ ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಶೇ.30ರಷ್ಟು ಹೆಚ್ಚಿಸಲಾಗಿದೆ.

RELATED ARTICLES

Latest News