Friday, November 22, 2024
Homeರಾಷ್ಟ್ರೀಯ | Nationalಹೊಸ ವರ್ಷದ ದಿನವೇ ಸಿಹಿ ಸುದ್ದಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

ಹೊಸ ವರ್ಷದ ದಿನವೇ ಸಿಹಿ ಸುದ್ದಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ,ಜ.1- ಹೊಸ ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. ಜನವರಿ 1 ರಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ದೇಶದ ಕೆಲವು ನಗರಗಳಲ್ಲಿ ತುಸು ಕಡಿಮೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ.

19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಭಾಗಶಃ ಕಡಿಮೆ ಮಾಡಲಾಗಿದೆ. ಹೊಸ ವರ್ಷದ ಮೊದಲ ದಿನ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ 1.50 ರೂ. ಕಡಿತವನ್ನು ಘೋಷಿಸಿದೆ. ಹೊಸ ಬೆಲೆಗಳು ಇಂದಿನಿಂದ ಅಂದರೆ 2024 ರ ಹೊಸ ವರ್ಷದ ಮೊದಲ ದಿನದಿಂದಲೇ ಅನ್ವಯವಾಗುತ್ತವೆ. ಅಂದ ಹಾಗೆ, ಅಡುಗೆ ಅನಿಲದ ಸಿಲಿಂಡರ್‍ನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಡುಗೆ ಅನಿಲದ ಸಿಲಿಂಡರ್ ಹಳೆಯ ದರದಲ್ಲಿಯೇ ದೊರೆಯಲಿದೆ.

ಬೆಲೆ ಇಳಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1,755.50 ರೂ. ಆಗಿದೆ. ಈ ಮೊದಲು ಈ ದರ 1,757 ರೂ. ಇತ್ತು. ಹೀಗಾಗಿ ದೆಹಲಿಯಲ್ಲಿ ಒಂದೂವರೆ ರೂಪಾಯಿಯಷ್ಟು ಬೆಲೆ ಇಳಿಕೆಯಾದಂತಾಗಿದೆ. ಚೆನ್ನೈನಲ್ಲಿ, ಎಲ್ಪಿಜಿ ಬೆಲೆಯನ್ನು 4.50 ರೂ ಕಡಿತಗೊಳಿಸಲಾಗಿದೆ ಮತ್ತು 19 ಕೆಜಿ ಸಿಲಿಂಡರ್ ಬೆಲೆ ಈಗ 1,924.50 ರೂ. ಆಗಿದೆ.

ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಮುಂಬೈನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1.50 ರೂಪಾಯಿ ಇಳಿದು 1,708.50 ರೂಪಾಯಿಗೆ ತಲುಪಿದೆ. ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್ಪಿಜಿ ಸಿಲಿಂಡರ್‍ನ ಬೆಲೆ ಇಂದು 50 ಪೈಸೆ ಏರಿಕೆಯಾಗಿದ್ದು, 1,869 ರೂ.ಗೆ ಆಗಿದೆ.
ಭಾರತೀಯ ತೈಲ ಕಂಪನಿಗಳು ಈ ಹಿಂದೆ ಡಿಸೆಂಬರ್ 22 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದವು. ಅದಕ್ಕೂ ಮುನ್ನ ಡಿಸೆಂಬರ್ 1ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್‍ಗಳು ಅಗ್ಗವಾಗಿದ್ದವು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ.

ಆದರೆ ಗೃಹ ಬಳಕೆಯ 14 ಕೆಜಿ ಗ್ಯಾಸ್ ಸಿಲಿಂಡರ್ ದರ ಸ್ಥಿರವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‍ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಮುಂಬೈನಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ 902.50 ರೂ., ದೆಹಲಿಯಲ್ಲಿ 903 ರೂ., ಚೆನ್ನೈನಲ್ಲಿ 918.50 ರೂ. ಕೋಲ್ಕತ್ತಾದಲ್ಲಿ 929 ರೂ. ಆಗಿದೆ.

ಜನವರಿ 1, 2019 ರಂದು, 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿತ್ತು. ಇಂಡಿಯನ್ ಆಯಿಲ್ನ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಎಲ್ಪಿಜಿ ದರವು ಡಿಸೆಂಬರ್ 1, 2018 ರಂದು ರೂ 809.5 ಆಗಿತ್ತು, ಇದು ಜನವರಿ 1, 2019 ರಂದು 689 ರೂಪಾಯಿಗೆ ಇಳಿದಿತ್ತು. ಅದೇ ರೀತಿ ಎಲ್ಲಾ ಮೆಟ್ರೋ ನಗರಗಳಲ್ಲಿ ಬೆಲೆ ಇಳಿಕೆಯಾಗಿತ್ತು. ಅಂದರೆ ಆ ವರ್ಷ ಪ್ರತಿ ಸಿಲಿಂಡರ್ ಬೆಲೆ 120 ರೂ.ಗಳಷ್ಟು ಅಗವಾಗಿತ್ತು.

ಏಕದಿನ ಕ್ರಿಕೆಟ್‍ಗೆ ಡೇವಿಡ್ ವಾರ್ನರ್ ಗುಡ್‍ಬೈ

ವಿಮಾನ ಪ್ರಯಾಣ ಅಗ್ಗವಾಗಲಿದೆ!
ಒಎಂಸಿ ಅಂದರೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಕೂಡಾ ಇಂದು ಹೊಸ ವರ್ಷದ ಸಂದರ್ಭದಲ್ಲಿ ವಿಮಾನ ಇಂಧನದ ಬೆಲೆಯನ್ನು ಇಳಿಸಿವೆ. ಪ್ರತಿ ಕಿಲೋ ಲೀಟರ್‍ಗೆ ಸುಮಾರು 4162.50 ರೂ.ಗಳಷ್ಟು ಇಳಿಕೆಯಾಗಿದೆ. ಸತತ ಮೂರನೇ ಕಡಿತದೊಂದಿಗೆ ವಿಮಾನ ದರಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.

RELATED ARTICLES

Latest News