Thursday, May 2, 2024
Homeಕ್ರೀಡಾ ಸುದ್ದಿಏಕದಿನ ಕ್ರಿಕೆಟ್‍ಗೆ ಡೇವಿಡ್ ವಾರ್ನರ್ ಗುಡ್‍ಬೈ

ಏಕದಿನ ಕ್ರಿಕೆಟ್‍ಗೆ ಡೇವಿಡ್ ವಾರ್ನರ್ ಗುಡ್‍ಬೈ

ಸಿಡ್ನಿ, ಜ.1- ಆಸ್ಟ್ರೇಲಿಯಾ ಕ್ರಿಕೆಟ್ ಲೋಕದ ದಿಗ್ಗಜ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‍ಗೆ ಗುಡ್‍ಬೈ ಹೇಳುವ ಮೂಲಕ ಅಭಿಮಾನಿಗಳಲ್ಲಿ 2024ರ ವರ್ಷದ ಆರಂಭದಲ್ಲೇ ನಿರಾಸೆ ಮೂಡಿಸಿದ್ದಾರೆ. ತಮ್ಮ ತವರು ನೆಲದಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ 112ನೇ ಹಾಗೂ ವಿದಾಯ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿರುವ ಡೇವಿಡ್ ವಾರ್ನರ್, ಆಸ್ಟ್ರೇಲಿಯಾ ತಂಡವನ್ನು ದಶಕಕ್ಕೂ ಹೆಚ್ಚು ಕಾಲ ವಿರಾಜರಾಮರಾಗಿ ಆಳಿದ್ದರು. 50 ಓವರ್‍ಗಳ ಕ್ರಿಕೆಟ್‍ಗೆ ವಿದಾಯ ಹೇಳಿದ್ದರೂ 2025ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಚಾಂಪಿಯನ್ಸ್ ಟ್ರೋಫಿಯಲ್ಲಿ ಅಗತ್ಯಬಿದ್ದರೆ ಆಡುವುದಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ.

2009ರಲ್ಲಿ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ವಾರ್ನರ್, 2015 ಹಾಗೂ 2023ರಲ್ಲಿ ಆಸ್ಟ್ರೇಲಿಯಾ ಒಡಿಐ ವಿಶ್ವಕಪ್ ಹಾಗೂ 2022ರಲ್ಲಿ ಚುಟುಕು ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಸಿಡ್ನಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಏಕದಿನ ಮಾದರಿಗೆ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ವಾರ್ನರ್, ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ವರಿಷ್ಠರು ತೀರ್ಮಾನಿಸಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ : ಸೋಮಣ್ಣ

2023ರಲ್ಲಿ ಭಾರತದ ನೆಲದಲ್ಲಿ ವಿಶ್ವಕಪ್ ಗೆದ್ದಿರುವುದು ನನ್ನ ವೃತ್ತಿ ಜೀವನದ ಮಹತ್ತರ ಘಟ್ಟವಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಹೇಳಿದ್ದಾರೆ. ಕೆರಿಬಿಯನ್ ನಾಡಿನಲ್ಲಿ ಜರುಗಲಿರುವ 2024ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ವಾರ್ನರ್, 161 ಪಂದ್ಯಗಳಿಂದ 45.30 ಸರಾಸರಿಯಲ್ಲಿ 22 ಶತಕಗಳಿಂದ 6932 ರನ್ ಗಳಿಸಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್ 535 ರನ್ ಗಳಿಸಿದ್ದರು.

RELATED ARTICLES

Latest News