Homeರಾಜ್ಯಶಾಸಕರಾಗಿ ಉಮೇಶ್‌ ಮೇಟಿ, ಸಮರ್ಥ್‌ ಶಾಮನೂರು ಪ್ರಮಾಣ

ಶಾಸಕರಾಗಿ ಉಮೇಶ್‌ ಮೇಟಿ, ಸಮರ್ಥ್‌ ಶಾಮನೂರು ಪ್ರಮಾಣ

Umesh Meti, Samarth Shamanur take oath as MLAs

ಬೆಂಗಳೂರು,ಮೇ 14- ನೂತನ ಶಾಸಕರಾಗಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚುನಾಯಿತರಾಗಿದ್ದ ಉಮೇಶ್‌ ಹುಲ್ಲಪ್ಪ ಮೇಟಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚುನಾಯಿತರಾಗಿದ್ದ ಸಮರ್ಥ್‌ ಶಾಮನೂರು ಮಲ್ಲಿಕಾರ್ಜುನ ಇಂದು ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ರವರಿಂದ ಈ ಇಬ್ಬರು ವಿಧಾನಸಭೆ ಸದಸ್ಯರಾಗಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು.

ಕಲ್ಲೇಶ್ವರ ಅಜ್ಜ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ಸಮರ್ಥ್‌ ಪ್ರಮಾಣ ವಚನ ಸ್ವೀಕರಿಸಿದರೆ ಭಗವಂತನ ಹೆಸರಿನಲ್ಲಿ ಉಮೇಶ್‌ ಮೇಟಿ ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್‌, ಮಾಜಿ ಸಚಿವ ಎಸ್‌‍.ಆರ್‌.ಪಾಟೀಲ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದು ನೂತನ ಶಾಸಕರನ್ನು ಅಭಿನಂದಿಸಿದರು.

RELATED ARTICLES
spot_img

Latest News