Tuesday, May 7, 2024
Homeರಾಜ್ಯರಾಜ್ಯದಲ್ಲಿ ದಾಖಲೆ ಪ್ರಮಾಣದ ಚುನಾವಣಾ ಅಕ್ರಮ ಸಂಪತ್ತು ಜಪ್ತಿ

ರಾಜ್ಯದಲ್ಲಿ ದಾಖಲೆ ಪ್ರಮಾಣದ ಚುನಾವಣಾ ಅಕ್ರಮ ಸಂಪತ್ತು ಜಪ್ತಿ

ಬೆಂಗಳೂರು,ಏ.26– ಪ್ರಸಕ್ತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದ ನಗದು, ಮದ್ಯ, ಡ್ರಗ್ಸ್ , ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ನಿನ್ನೆಯವರೆಗೆ ರಾಜ್ಯದಲ್ಲಿ ಒಟ್ಟಾರೆ 433.39 ಕೋಟಿ ರೂ. ಮೊತ್ತದ ನಗದು, ಮದ್ಯ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪೊಲೀಸ್‌, ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, 137.31 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ , ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು 177.52 ಕೋಟಿ ರೂ. ಮೊತ್ತದ ಮದ್ಯ, ಡ್ರಗ್‌್ಸ ವಶಪಡಿಸಿಕೊಂಡಿದ್ದರೆ ಆದಾಯ ತೆರಿಗೆ ಅಧಿಕಾರಿಗಳು 38.65 ಕೋಟಿ ರೂ.ಮೊತ್ತದ ನಗದು, ಚಿನ್ನ, ವಜ್ರ ವಶಪಡಿಸಿಕೊಂಡಿದ್ದಾರೆ.

ವಾಣಿಜ್ಯ ತೆರಿಗೆ ಅಽಕಾರಿಗಳು 79.90 ಕೋಟಿ ರೂ. ಮೊತ್ತದ ಚಿನ್ನ ಬೆಳ್ಳಿ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ವಸ್ತುಗಳಿಗೆ ಸಂಬಂಧಿಸಿದಂತೆ 2,149 ಎ್‌‍ಐಆರ್‌ಗಳನ್ನು ದಾಖಲಿಸಿಕೊಳ್ಳಲ್ಲಾಗಿದ್ದು, 1884 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಜಯನಗರ ಪೊಲೀಸ್‌ ತಂಡದವರು ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ 10 ಲಕ್ಷ ನಗದು, ಬಳ್ಳಾರಿನಗರ ಬ್ರೂಸ್‌ಪೇಟೆ ಪೊಲೀಸ್‌ ಠಾಣೆ ತಂಡದವರು 23ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಿರ ಕಣ್ಗಾವಲು ತಂಡದವರು ಜೇವರ್ಗಿಯ ನಾಗರಳ್ಳಿ ಚೆಕ್‌ ಪೋಸ್‌್ಟನಲ್ಲಿ 38 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯವರು ಕೋಣನಕುಂಟೆಯ ಸಿಲಿಕಾನ್‌ ಸಿಟಿ ಲೇಔಟ್‌ನಲ್ಲಿ 26 ಲಕ್ಷ ನಗದು, ದೊಡ್ಡ ಕಲ್ಲಸಂದ್ರದ ಡಾಕ್ಟರ್‌ರ‍ಸ ಕಾಲೋನಿಯಲ್ಲಿ 34,97,500 ನಗದು ಹಾಗೂ 55 ಲಕ್ಷ ರೂ. ವೌಲ್ಯದ 1.113 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಿಸಿದೆ.

RELATED ARTICLES

Latest News