Tuesday, May 7, 2024
Homeಬೆಂಗಳೂರುಒಂದೇ ಕುಟುಂಬದ 99 ಮಂದಿಯಿಂದ ಹಕ್ಕು ಚಲಾವಣೆ

ಒಂದೇ ಕುಟುಂಬದ 99 ಮಂದಿಯಿಂದ ಹಕ್ಕು ಚಲಾವಣೆ

ಚಿಕ್ಕಬಳ್ಳಾಪುರ, ಏ.26- ಲೋಕಸಭಾ ಕ್ಷೇತ್ರಕ್ಕೆ ಇಂದು ಮೊದಲನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದ್ದು, ನಗರದ 19ನೆ ವಾರ್ಡ್‌ನ ಸರ್ಕಾರಿ ಜೂನಿಯರ್‌ ಕಾಲೇಜಿನ 161ನೆ ಬೂತ್‌ನಲ್ಲಿ ಒಂದೇ ಕುಟುಂಬದ 99 ಮಂದಿ ಒಟ್ಟಾಗಿ ಬಂದು ತಮ್ಮ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

ನಗರದ ಗರ್ಲ್‌್ಸಸ್ಕೂಲ್‌ ರಸ್ತೆಯಲ್ಲಿರುವ ಬಾದಾಮ್‌ ಕುಟುಂಬದವರು ಯಾವುದೇ ಚುನಾವಣೆ ಇರಲಿ, ಒಟ್ಟಾಗಿ ಬಂದು ಮತದಾನ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಬಿರುಸಿನಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆ ವರೆಗೂ ನಡೆಯಲಿದೆ.

ಬಿರು ಬಿಸಿಲಿನಲ್ಲೂ ಜನತಂತ್ರದ ಈ ಹಬ್ಬದಲ್ಲಿ ಸಾವಿರಾರು ಯುವಕ – ಯುವತಿಯರು ಮೊದಲ ಬಾರಿಗೆ ಉತ್ಸಾಹದಿಂದ ವೋಟ್‌ ಮಾಡಿ ಗಮನ ಸೆಳೆದ ದೃಶ್ಯ ಚಿಕ್ಕಬಳ್ಳಾಪುರ ನಗರ ಪ್ರದೇಶದಲ್ಲಿ ಕಂಡು ಬಂತು. ಪ್ರಶಾಂತನಗರದ ನಿವಾಸಿ ರಕ್ಷಿತಾ ಗ್ರಾಮದ ಮತಗಟ್ಟೆ ಸಂಖ್ಯೆ 149 ರ ಮತದಾನ ಮಾಡಿ ತಮ್ಮ ಅನುಭವ ಹಂಚಿಕೊಂಡರು.

ವೋಟ್‌ ಹೇಗೆ ಮಾಡುವುದು ಎಂದು ಗೊತ್ತಿರಲಿಲ್ಲ. ನಮ್ಮ ಪೋಷಕರು ಮನೆಯಲ್ಲಿ ವೋಟಿಂಗ್‌ ಮಾಡುವ ಬಗ್ಗೆ ಸ್ವಲ್ಪ ಹೇಳಿದ್ದರು. ಆದರೂ, ವೋಟ್‌ ಮಾಡುವ ಪ್ರಕ್ರಿಯೆ ಹೇಗಿರುತ್ತದೆ ಅನ್ನೋದರ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಈಗ ವೋಟ್‌ ಮಾಡಿದೆ. ಖುಷಿ ಆಯಿತು ಎಂದು ಮೊದಲ ಮತದಾನ ಬಳಿಕ ಎಂಬಿಬಿಎಸ್‌ ರಕ್ಷಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನಗರದಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿ ಯುವರಾಜ್‌ ಕೂಡ ಮೊದಲ ಬಾರಿ ಮತದಾನ ಮಾಡಿದರು. ಮತ್ತೊಬ್ಬ ನಗರದ 20ನೇ ವಾರ್ಡಿನ ಯುವ ಮತದಾರ ಸಿ.ಕೆ. ಪ್ರಜ್ವಲ್‌ ಮಾತನಾಡಿ ಮತದಾನ ನಮ್ಮ ಹಕ್ಕು. ಮೊದಲ ಬಾರಿ ಮತ ಹಾಕುವ ಅವಕಾಶ ಸಿಕ್ಕಿದೆ. ಭಾರತದ ಸಂವಿಧಾನದಲ್ಲಿ ಹೇಳಿರುವಂತೆ ಮತದಾನ ನಮ್ಮ ಹಕ್ಕು, ಅದನ್ನು ಚಲಾಯಿಸುವ ಮೂಲಕ ನನ್ನ ಕರ್ತವ್ಯ ನಿಭಾಯಿಸಿದ್ದೇನೆ.

ಯುವಕರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮತದಾನ ಮಾಡುವುದರಿಂದ ವಂಚಿತರಾಗಬಾರದು. ವಿವಿಧ ಕಡೆಗಳಲ್ಲಿ ಮತದಾರರಿಗೆ ಹತ್ತಿರ ಇರುವಂತೆ ಮತಗಟ್ಟೆ ಸ್ಥಾಪಿಸಲಾಗಿರುವುದು ಖುಷಿ ತಂದಿದೆ ಸಖಿ ಮತಗಟ್ಟೆ, ವಿಶೇಷ ಮತಗಟ್ಟೆಗಳು ಕೂಡ ಬಹಳ ಆಕರ್ಷಕವಾಗಿದೆ ಎಂದು ವೋಟ್‌ ಮಾಡಿದ ಪ್ರಜ್ವಲ್‌ ತನ್ನ ಖುಷಿ ಹಂಚಿಕೊಂಡರು.

RELATED ARTICLES

Latest News