Sunday, April 28, 2024
Homeಅಂತಾರಾಷ್ಟ್ರೀಯಆಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ

ಆಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ

ಕಾಬೂಲ್,ಅ.11- ವಾಯುವ್ಯ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದ್ದು, 10 ಕಿಮೀ (6.21 ಮೈಲಿ) ಆಳದಲ್ಲಿ ಕಂಪನದ ಅನುಭವವಾಗಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ ಸಂಶೋಧನಾ ಕೇಂದ್ರ ವರದಿ ಮಾಡಿದೆ.

ಈ ಬಾರಿ ಭೂಕಂಪದಿಂದ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಇನ್ನೂ ಯಾವುದೇ ವರದಿಗಳು ಬಂದಿಲ್ಲ. ಈಗಾಗಲೇ ಭೂಕಂಪದಿಂದ ತತ್ತರಿಸಿರುವ ದೇಶಕ್ಕೆ ಇಂದು ಕೂಡ ಭೂಮಿ ಕಂಪಿಸಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಶನಿವಾರದಂದು ಹೆರಾತ್ ನಗರದ ವಾಯುವ್ಯದಲ್ಲಿ ಅನೇಕ ಭೂಕಂಪಗಳಲ್ಲಿ ಸಾವಿರಾರು ಮನೆಗಳನ್ನು ನೆಲಸಮಗೊಂಡವು, ಸುಮಾರು 4000 ಕ್ಕೂ ಹೆಚ್ಚು ಮಂದಿ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸುಮಾರು 50,000 ಜನರನ್ನು ಕೊಂದ ಭೂಕಂಪಗಳ ನಂತರ ಶನಿವಾರದ ಕಂಪನಗಳು 6.3 ತೀವ್ರತೆಯೊಂದಿಗೆ ಈ ವರ್ಷ ವಿಶ್ವದ ಅತ್ಯಂತ ಮಾರಕ ಭೂಕಂಪ ಎನಿಸಿಕೊಂಡಿವೆ. ಶನಿವಾರದ ಕಂಪನದಿಂದಾಗಿ ಸಾವಿನ ಸಂಖ್ಯೆ 4,000 ಮೀರಿದೆ. ಇದಲ್ಲದೆ, ಸುಮಾರು 20 ಹಳ್ಳಿಗಳಲ್ಲಿ ಸುಮಾರು 2,000 ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಮುಲ್ಲಾ ಸೈಕ್ ಹೇಳಿದ್ದಾರೆ.

ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’

ಏತನ್ಮಧ್ಯೆ, ವಿಶ್ವಸಂಸ್ಥೆಯ ಮಾನವೀಯ ಕಚೇರಿಯು ಭೂಕಂಪನ ಪರಿಹಾರಕ್ಕಾಗಿ 5 ಮಿಲಿಯನ್ ನೆರವು ಘೋಷಿಸಿದೆ. ಅಫ್ಘಾನಿಸ್ತಾನದ ಆರೋಗ್ಯ ವ್ಯವಸ್ಥೆ, ಹೆಚ್ಚಾಗಿ ವಿದೇಶಿ ನೆರವಿನ ಮೇಲೆ ಅವಲಂಬಿತವಾಗಿದೆ. ತಾಲಿಬಾನ್ ವಹಿಸಿಕೊಂಡ ನಂತರ ಎರಡು ವರ್ಷಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸಿದೆ ಮತ್ತು ಹೆಚ್ಚಿನ ಅಂತಾರಾಷ್ಟ್ರೀಯ ನೆರವು ಸ್ಥಗಿತಗೊಂಡಿದೆ.

ವೈದ್ಯಕೀಯ ಮತ್ತು ಆಹಾರದ ನೆರವಿನ ಜೊತೆಗೆ, ಬದುಕುಳಿದವರು ತಾಪಮಾನ ಕಡಿಮೆಯಾಗುತ್ತಿದ್ದಂತೆ ಆಶ್ರಯದ ಅವಶ್ಯಕತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪ್ರತಿಕ್ರಿಯೆಯ ಮುಖ್ಯಸ್ಥರು ತಿಳಿಸಿದ್ದಾರೆ.

RELATED ARTICLES

Latest News