Saturday, September 21, 2024
Homeರಾಜ್ಯಬೆಂಗಳೂರಿನಲ್ಲಿ ಆ.22 ರಿಂದ ಭಾರತದ ಬೃಹತ್ ಕೃಷಿ ಮತ್ತು ಆಹಾರ ಉದ್ಯಮ ಮೇಳ

ಬೆಂಗಳೂರಿನಲ್ಲಿ ಆ.22 ರಿಂದ ಭಾರತದ ಬೃಹತ್ ಕೃಷಿ ಮತ್ತು ಆಹಾರ ಉದ್ಯಮ ಮೇಳ

ಬೆಂಗಳೂರು, ಆ.20 ಮೀಡಿಯಾ ಟುಡೆ ಉಬುಂಟು ಕನ್ನೋರ್ಟಿಯಂ (ಒಕ್ಕೂಟ) ಮತ್ತು ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದೊಂದಿಗೆ, ಜಾಗತಿಕವಾಗಿ ಕೃಷಿ ಮತ್ತು ಆಹಾರ ಉದ್ಯಮದಲ್ಲಿ ಮುಂಚೂಣಿಯಲ್ಲಿರುವವರು ಪಾಲ್ಗೊಳ್ಳಲಿರುವ ಬೃಹತ್ ಮೇಳವನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುವುದರ್ಶನ ಕೇಂದ್ರದಲ್ಲಿ ಆ.22 ಗುರುವಾರ ಆರಂಭಗೊಳ್ಳಲಿದೆ ಎಂದು ಉಬುಂಟು ಕನ್ನೋರ್ಟಿಯಂ (ಒಕ್ಕೂಟ) ಫೌಂಡರ್ ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಿಳಿಸಿದರು

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ದೇಶದ ಅತಿದೊಡ್ಡ ಕೃಷಿ ಮತ್ತು ಆಹಾರ ಉದ್ಯಮ ಮೇಳ ಇದಾಗಿದ್ದು, ಆಗ್ರಿಟೆಕ್ ಇಂಡಿಯಾ 2024 ಮೂರು ದಿನಗಳ ಕಾಲ ನಡೆಯಲಿರುವ ಬೃಹತ್ ಮೇಳವಾಗಿದ್ದು, ಆಗಸ್ಟ್ 22ರಂದು ಉದ್ಘಾಟನೆಗೊಳ್ಳಲಿದೆ. ಈ ಮೇಳಕ, ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಿತ ಸಚಿವರನ್ನು ಕೂಡ ಆಹ್ವಾನಿಸಲಾಗಿದೆ ಎಂದರು

ಕೃಷಿ ಮತ್ತು ಆಹಾರ ಉದ್ಯಮ ಮೇಳವು 350ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿರುತ್ತದೆ ಏರ್ಕಿ, ಚೀನಾ, ಜರ್ಮನಿ, ಥೈಲ್ಯಾಂಡ್, ಸ್ಪೇನ್, ನೆದರ್ಲ್ಯಾಂಡ್, ನೇಪಾಳ, ಶ್ರೀಲಂಕಾ, ಕುವೈತ್, ರಷ್ಮಾ ಶೈವಾನ್, ಫ್ರಾನ್ಸ್, ಇಟಲಿ, ಕೆನಡಾ. ಯುಎಇ ಇಂಡೋನೇಷ್ಯಾ ಬಹನ್, ಸಿಂಗಾಪುರ್ ಇರಾನ್, ಆಸ್ಟ್ರೇಲಿಯಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ಭೂತಾನ್, ಮಲೇಷಿಯಾ, ವಿಯಟ್ನಾಂ, ಮತ್ತು ನ್ಯೂಜಿಲ್ಯಾಂಡ್-ಉದ್ಯಮ ನಾಯಕರು, ನಾವೀನ್ಯಕಾರರು ಮತ್ತು ತಜ್ಞರು ಈ ಜಾಗತಿಕ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳವು ವ್ಯವಹಾರಗಳಿಗೆ ಸಂಪರ್ಕ ಸಾಧಿಸಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು, ವಲಯದಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದ್ದು ಮೇಳಕ್ಕೆ, ಅಂದಾಜು 25,000 ವ್ಯಾಪಾರ ಸಂದರ್ಶಕರು ಆಗಮಿಸುವ ನಿರೀಕ್ಷೆಯಿದೆ ಎಂದರು

‘ಅಗ್ರಿಟೆಕ್ ಇಂಡಿಯಾ 2024 ಕೃಷಿ ಮತ್ತು ಆಹಾರ ಪ್ರದರ್ಶನ ಮೇಳವು ಇಂಡಿಯಾ ಪುಡೆಕ್ಸ್ ಮತ್ತು ಗ್ರೀನ್ ಟೆಕ್ ಇಂಡಿಯಾ ಸಹಯೋಗದೊಂದಿಗೆ ನಡೆಯಲಿದ್ದು ಕೃಷಿ ಮತ್ತು ಆಹಾರ ಉದ್ಯಮದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಈ ಪ್ರದರ್ಶನವು ಆಹಾರ ಉತ್ಪನ್ನಗಳು, ಫೋಜನ್ ಆಹಾರಗಳು, ತಿಂಡಿಗಳು, ಬೇಕರಿ ವಸ್ತುಗಳು: ಅನುಕೂಲಕರ ಆಹಾರಗಳು, ಸಾವಯವ ಉತ್ಪನ್ನಗಳು, ತಾಜಾ ಹಣ್ಣುಗಳು, ಆಹಾರ ಚಿಲ್ಲರೆ ವ್ಯಾಪಾರ ಡೈ ಉತ್ಪನ್ನಗಳು, ಚಹಾ, ಕಾಫಿ ಮತ್ತು ಹಣ್ಣು ಆಧಾರಿತ ಪಾನೀಯಗಳನ್ನು ಒಳಗೊಂಡಂತೆ ವೈವಿಧ್ಯಮಯ ಆಹಾರ ವಲಯದ ವಿಭಾಗಗಳು ಪ್ರದರ್ಶನದಲ್ಲಿ ಇರಲಿವೆ ಎಂದು ಮಾಹಿತಿ ನೀಡಿದರು

RELATED ARTICLES

Latest News