ಮೆಂಧರ್/ಜಮ್ಮು, ಫೆ.12: ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಸೇನಾ ಪಡೆಗಳು ಪಾಕಿಸ್ತಾನದ ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದೆ. ತಡರಾತ್ರಿ ಭಾರತದ ಭೂಪ್ರದೇಶ ಪ್ರವೇಶಿಸಿದಾಗ ಅದನ್ನು ಹಿಮ್ಮೆಟ್ಟಿಸಲಾಗಿದೆ. ಗುಂಡಿಗೆ ಡ್ರೋನ್ ಹಾನಿಗೊಂಡರೂ ಪಾಕಿಸ್ತಾನದ ಕಡೆಗೆ ಮರಳಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಮೆಂಧರ್‍ನ ನಾರ್ ಮಾನ್‍ಕೋಟೆ ಪ್ರದೇಶದಲ್ಲಿ ಪಾಕ್ ಡ್ರೋನ್‍ನ ಚಲನೆಯನ್ನು ಪತ್ತೆಮಾಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿರುವ ಪಡೆಗಳು ಅದನ್ನು ಉರುಳಿಸಲು ಮೂರು ಸುತ್ತು ಗುಂಡು ಹಾರಿಸಿದರು ಆದರೆ ಭಾರತೀಯ ಸೈನಿಕರ ಗುಂಡಿನ ದಾಳಿಗೆ ಡ್ರೋನ್ ಪಾಕಿಸ್ತಾನದ ಕಡೆಗೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
33 ಲಕ್ಷ ರೈತರಿಗೆ 628 ಕೋಟಿ ಹಣ : ಸಚಿವ ಕೃಷ್ಣ ಭೈರೆಗೌಡ
ಪ್ರಸ್ತುತ್ತ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಮಾದಕ ದ್ರವ್ಯಗಳು, ಶಶಸ್ತ್ರಗಳು ಅಥವಾ ಸ್ಪೋಟಕ ವಸ್ತುಗಳನ್ನು ಗಡಿಯಾಚೆಯಿಂದ ತರುವ ಡ್ರೋನ್‍ಗಳ ಕುರಿತು ಮಾಹಿತಿ ನೀಡುವವರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು,