Friday, October 11, 2024
Homeರಾಜ್ಯಕಬ್ಬಿಣದ ರಾಡ್‌ ಬಿದ್ದು ಎಎಸ್‌‍ಐ ನಾಬಿರಾಜ್‌ ದಾಯಣ್ಣವರ ಸಾವು

ಕಬ್ಬಿಣದ ರಾಡ್‌ ಬಿದ್ದು ಎಎಸ್‌‍ಐ ನಾಬಿರಾಜ್‌ ದಾಯಣ್ಣವರ ಸಾವು

asi-died-after-being-injured-by-a-rod-falling-during-the-work-of-the-fly-over

ಹುಬ್ಬಳ್ಳಿ,ಸೆ.15: ಇಲ್ಲಿನ ಹಳೇ ಕೋರ್ಟ್‌ ಬಳಿ ಮೇಲುಸೇತುವೆ ಕಾಮಗಾರಿಯ ಕಬ್ಬಿಣದ ರಾಡ್‌ ತಲೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್‌‍ಐ ನಾಬಿರಾಜ್‌ದಾಯಣ್ಣವರ (59) ಚಿಕಿತ್ಸೆ ಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಳೆದ ಸೆ.10ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರ ಭದ್ರತಾ ಕರ್ತವ್ಯಕ್ಕೆ ಹಾಜರಾಗಲು ಬೈಕ್‌ನಲ್ಲಿ ತೆರಳುತ್ತಿದ್ದ ನಾಬಿರಾಜ್‌ ದಾಯಣ್ಣವರ ಮೇಲೆ ಏಕಾಏಕಿ ಕಬ್ಬಿಣದ ರಾಡ್‌ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಕಿಮ್ಸೌ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಮುಂಜಾನೆ ಚಿಕಿತ್ಸೆ ಲಿಸದೇ ಎಎಸ್‌‍ಐ ನಾಭಿರಾಜ್‌ ಮೃತಪಟ್ಟಿದ್ದಾರೆ.ಹಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಸಾರ್ವಜನಿರೊಂದಿಗೆ ಒಳ್ಳೆಯ ಬಾಂದವ್ಯ ಹೊಂದಿದ್ದರು.

ಧಾರವಾಡದ ಸತ್ತೂರಿನಲ್ಲಿ ಪತ್ನಿ,ಪುತ್ರನೊಂದಿಗೆ ಅವರು ವಾಸವಾಗಿದ್ದರು.ಸುಮಾರು 30 ವರ್ಷ ಪೊಲೀಸ್‌‍ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.ನಗರ ಪೊಲೀಸ್‌‍ ಆಯುಕ್ತರು ಹಾಗು ಸಹದ್ಯೋಗಿಗಳು ನಾಭಿರಾಜ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದಾರೆ.

RELATED ARTICLES

Latest News